Download Our App

Follow us

Home » ರಾಜಕೀಯ » ಕಾಂಗ್ರೆಸ್​​​ ಸರ್ಕಾರ ಬಂದ್ಮೇಲೆ ಒಂದು ವರ್ಷದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ – ಆರ್​​.ಅಶೋಕ್​​​ ಕಿಡಿ..!

ಕಾಂಗ್ರೆಸ್​​​ ಸರ್ಕಾರ ಬಂದ್ಮೇಲೆ ಒಂದು ವರ್ಷದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ – ಆರ್​​.ಅಶೋಕ್​​​ ಕಿಡಿ..!

ಬೆಂಗಳೂರು : ಈ ಸರ್ಕಾರ ಬಂದ್ಮೇಲೆ ಒಂದು ವರ್ಷದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ. ಹಾಲು, ಮನೆ ತೆರಿಗೆ, ವಿದ್ಯುತ್ ಬಿಲ್, ಮದ್ಯದ ಬೆಲೆ ಹೆಚ್ಚು ಮಾಡಿದ್ರು. ವರ್ಷಕ್ಕೆ 4-5 ಟ್ಯಾಕ್ಸ್ ಕಲೆಕ್ಟ್ ಮಾಡಲು ತೈಲ ಬೆಲೆ ಹೆಚ್ಚಿಸಿದ್ದಾರೆ ಎಂದು ಪೆಟ್ರೋಲ್​​​, ಡೀಸೆಲ್​​​​​​ ದರ ಹೆಚ್ಚಿಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್​​.ಅಶೋಕ್​​​ ಕಿಡಿಕಾರಿದ್ದಾರೆ.

ಈ ಹಿಂದೆ ತೈಲ ಬೆಲೆ 1 ರೂಪಾಯಿ ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್​ ಪ್ರತಿಭಟಿಸಿತ್ತು. ನಾವು ಅಧಿಕಾರಕ್ಕೆ ಬಂದ್ರೆ ಬೆಲೆ ಕಡಿಮೆ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದ ವಿಡಿಯೋ ತೋರಿಸಿ ವಾಗ್ದಾಳಿ ನಡೆಸಿದ ಆರ್​​.ಅಶೋಕ್ ಅವರು, ರಾಜ್ಯದ ಜನರನ್ನು ಹಗಲು ದರೋಡೆ ಮಾಡುವ ಪ್ರಯತ್ನ ಇದು. ಈ ಸರ್ಕಾರಕ್ಕೆ ಸಂಬಳ ಕೊಡಲೂ ಆಗದ ಪರಿಸ್ಥಿತಿ ಬಂದಿದೆ ಎಂದು ಗುಡುಗಿದ್ದಾರೆ.

ಇನ್ನು ಆಟೋ, ಕಾರು ಓಡಿಸುವವರು & ಬಡವರ ಹೊಟ್ಟೆ ಮೇಲೆ ಬರೆ ಎಳೆದಿದ್ದಾರೆ. ಲೋಕಸಭೆ ಎಲೆಕ್ಷನ್​​ನಲ್ಲಿ ಕಡಿಮೆ ಸೀಟ್ ಬಂದಿದ್ದಕ್ಕೆ ಬೆಲೆ ಏರಿಕೆ ಮಾಡಿದೆ. ತಿಂಡಿ, ಊಟ, ತರಕಾರಿ ಬೆಲೆ ಏರಿಕೆ ಆಗುತ್ತೆ ಎಂದು ಆರ್.ಅಶೋಕ್​ ಕಿಡಿಕಾರಿದ್ದಾರೆ.

ಇದನ್ನೂ ಓದಿ : ರಮೇಶ್ ಅರವಿಂದ್ ಹಾಗೂ ಡಾಲಿ ಧನಂಜಯ್ ಅವರಿಂದ ‘ವಿ‌ ಸಿನಿಮಾಸ್’ ಮಲ್ಟಿಪ್ಲೆಕ್ಸ್ ಅನಾವರಣ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here