Download Our App

Follow us

Home » ಮೆಟ್ರೋ » ಬಕ್ರೀದ್ ಸಂಭ್ರಮಾಚರಣೆ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಕುರಿ ವ್ಯಾಪಾರ : ಇಲ್ಲಿದೆ ಬಜಾರ್ ರೇಟ್ ಡಿಟೇಲ್ಸ್..!

ಬಕ್ರೀದ್ ಸಂಭ್ರಮಾಚರಣೆ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಕುರಿ ವ್ಯಾಪಾರ : ಇಲ್ಲಿದೆ ಬಜಾರ್ ರೇಟ್ ಡಿಟೇಲ್ಸ್..!

ಬೆಂಗಳೂರು : ನಾಳೆ ಬಕ್ರೀದ್ ಸಂಭ್ರಮಾಚರಣೆ ಹಿನ್ನೆಲೆ ಬೆಂಗಳೂರಲ್ಲಿ ಕುರಿ, ಮೇಕೆ ಭರ್ಜರಿಯಾಗಿ ವ್ಯಾಪಾರ ನಡೆಯುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಬಗೆ ಬಗೆಯ ತಳಿಗಳ ಕುರಿಗಳು ಮಾರ್ಕೆಟ್​​ಗೆ ಬಂದಿವೆ.

ನಗರದ ಅತಿ ದೊಡ್ಡ ಕುರಿ ಮಾರುಕಟ್ಟೆಯಾಗಿರುವ ಈದ್ಗಾ ಮೈದಾನದಲ್ಲಿ ಈಗಲೇ ಭರ್ಜರಿ ವ್ಯಾಪಾರ ಶುರುವಾಗಿದ್ದು, ಚಾಮರಾಜಪೇಟೆ, ಟ್ಯಾನರಿ ರೋಡ್, ಆರ್ ಟಿ‌ನಗರ ಸೇರಿದಂತೆ ನಗರದ ಕೆಲವು ಭಾಗದಲ್ಲಿ ಭರ್ಜರಿಯಾಗಿ ಕುರಿ ವ್ಯಾಪಾರ ನಡೆಯುತ್ತಿದೆ. ಈ ಬಾರಿಯೂ ನಾಟಿ ಕುರಿ, ಬನ್ನೂರು, ಮೋಟಾ ಬನ್ನೂರು, ಕಿರಗಲ್ ಕುರಿ ಹಾಗೂ ಟಗರುಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.

15 ಸಾವಿರದಿಂದ 1 ಲಕ್ಷದ ವರೆಗೆ ವಿವಿಧ ತಳಿಯ ಕುರಿಗಳನ್ನು ಬಜಾರ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಬೆಂಗಳೂರಿಗೆ ಪಕ್ಕದ ರಾಮನಗರ, ತುಮಕೂರು, ಶಿರಾ, ಚಿತ್ರದುರ್ಗ, ಕೋಲಾರ, ಮೈಸೂರು ಭಾಗಗಳಿಂದ ಅತಿ ಹೆಚ್ಚು ಕುರಿಗಳನ್ನು ರೈತರು ಮಾರಾಟಕ್ಕಿಟ್ಟಿದ್ದಾರೆ. ಕೋವಿಡ್ ಬಳಿಕ ಹೈನುಗಾರಿಕೆ ವಹಿವಾಟು ಕುಗ್ಗಿತ್ತು, ಆದರೆ ಈ ಬಾರಿಯ ಬಕ್ರೀದ್​​ಗೆ ಹಿಗ್ಗಬಹುದು ಅನ್ನೊ ನಿರೀಕ್ಷೆಯಲ್ಲಿದ್ದಾರೆ ರೈತರು.

ಕುರಿ ಬಜಾರ್ ರೇಟ್ :

  • ನಾಟಿ ಕುರಿ – 30 ರಿಂದ 40 ಸಾವಿರ (ಜೋಡಿ)
  • ಬನ್ನೂರು -70 ರಿಂದ 95 ಸಾವಿರ (ಜೋಡಿ)
  • ಬನ್ನೂರು ಮೋಟಾ -95 ಸಾವಿರದಿಂದ 1.20 ಲಕ್ಷ (ಜೋಡಿ)
  • ಕಿರಗಲ್ ಕುರಿ – 40 ರಿಂದ 60 ಸಾವಿರ (ಜೋಡಿ)
  • ಟಗರು – 60 ರಿಂದ 90 ಸಾವಿರ (ಜೋಡಿ)
  • ಮೇಕೆ – 10 ರಿಂದ 30 ಸಾವಿರ (ಜೋಡಿ)

ಇದನ್ನೂ ಓದಿ : ಅಪ್ಪನ ಮೃತ ದೇಹ ಕಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೇಣುಕಾಸ್ವಾಮಿ ಕೊ*ಲೆ ಕೇಸ್ ಆರೋಪಿ ಅನು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here