Download Our App

Follow us

Home » ಸಿನಿಮಾ » ಅಭಿನವ ಕೆಂಪೇಗೌಡ ಹೆಚ್.ಎಂ ಕೃಷ್ಣಮೂರ್ತಿಯವರು ನಟಿಸಿ, ನಿರ್ಮಿಸಿರುವ “ನಾಡಸಿಂಹ ಕೆಂಪೇಗೌಡ” ಹಾಡು ಬಿಡುಗಡೆ..! 

ಅಭಿನವ ಕೆಂಪೇಗೌಡ ಹೆಚ್.ಎಂ ಕೃಷ್ಣಮೂರ್ತಿಯವರು ನಟಿಸಿ, ನಿರ್ಮಿಸಿರುವ “ನಾಡಸಿಂಹ ಕೆಂಪೇಗೌಡ” ಹಾಡು ಬಿಡುಗಡೆ..! 

ತಮ್ಮ‌ ಸಾಮಾಜಿಕ ಕಾರ್ಯಗಳ‌ ಮೂಲಕ ಜನರ‌ ಮನ‌ ಗೆದ್ದಿರುವ ಹೆಚ್.ಎಂ ಕೃಷ್ಣಮೂರ್ತಿ ಅವರು ನಿರ್ಮಿಸಿ ಹಾಗು ಕೆಂಪೇಗೌಡರ ಪಾತ್ರದಲ್ಲೂ ಅಭಿನಯಿಸಿರುವ ನಾಡಪ್ರಭು ಶ್ರೀಕೆಂಪೇಗೌಡರ ಕುರಿತಾದ “ನಾಡಸಿಂಹ ಕೆಂಪೇಗೌಡ” ಎಂಬ ಹಾಡಿನ ಲೋಕಾರ್ಪಣೆ ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅದ್ದೂರಿಯಾಗಿ ನೆರವೇರಿತು.

ಜೆ.ಕೆ ಶರ್ಮ ಗುರೂಜಿ, ನಟ ವಸಿಷ್ಠ ಸಿಂಹ, ಹಿರಿಯ ನಟ ಅಶೋಕ್, ನಿರ್ದೇಶಕ ಟಿ.ಎಸ್. ನಾಗಾಭರಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಟರಾದ ಧರ್ಮ, ತಬಲ ನಾಣಿ, ನೀನಾಸಂ ಅಶ್ವಥ್, ನಿರ್ಮಾಪಕ ಸಂಜಯ್ ಗೌಡ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ಹೆಚ್.ಎಂ ಕೃಷ್ಣಮೂರ್ತಿ ಅವರು ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು. “ನಾನು ಕೆಂಪೇಗೌಡರ ಆರಾಧಕ. ಬೆಂಗಳೂರು ಹಾಗೂ ಸುತ್ತಮುತ್ತಲ್ಲಿನ ಊರುಗಳಿಗೆ ಮಾಗಡಿ ಕೆಂಪೇಗೌಡರು ಮಾಡಿರುವ ಉಪಕಾರ ಮಹತ್ತರವಾದ್ದದ್ದು. ಅಂತಹ ಪುಣ್ಯತ್ಮರ ಸ್ಮರಣೆಗಾಗಿ ಈ ಹಾಡನ್ನು ನಿರ್ಮಿಸಿದ್ದೇನೆ.

ಮೊದಲ ಬಾರಿಗೆ ಕೆಂಪೇಗೌಡರ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಕೆಂಪೇಗೌಡರ ಬಗ್ಗೆ ತಿಳಿಸುವ ಈ ಹಾಡು ನಮ್ಮ ಎ ಕೆ ಜಿ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಎಲ್ಲಾ ಗಣ್ಯರಿಗೆ ಧನ್ಯವಾದ ತಿಳಿಸಿದರು.

ಕೆ.ರಾಮನಾರಾಯಣ್ ಅವರು ಬರೆದಿರುವ ಈ ಹಾಡಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಶಂಕರ್ ಮಹಾದೇವನ್ ಮತ್ತು ಅನುರಾಧ ಭಟ್ ಗಾಯನ ವಿದೆ . ಭಜರಂಗಿ ಮೋಹನ್ ನೃತ್ಯ ನಿರ್ದೇಶನ. ಕೃಷ್ಣ ಕುಮಾರ್ ಛಾಯಾ ಗ್ರಹಣ ಪುನೀತ್ ಸಂಕಲನವಿದೆ . ನಾನು ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಟಿ.ಎಸ್ ನಾಗಾಭರಣ, ವಿನಯಪ್ರಸಾದ್, ಧರ್ಮ, ನೀನಾಸಂ ಅಶ್ವತ್, ಮುನಿ, ಹೆಚ್ ವಾಸು, ವಿಕ್ಟರಿ ವಾಸು ಮುಂತಾದವರು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.

ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರಿ ಆಸುಪಾಸಿನಲ್ಲಿದೆ. ಅಂತಹ ಸ್ಥಳಗಳನ್ನು ನಮ್ಮ ಯೂಟ್ಯೂಬ್ ಚಾನಲ್ ಮೂಲಕ ಪರಿಚಯ ಮಾಡಿಕೊಡುತ್ತಿದ್ದೇನೆ. ಕೆಂಪೇಗೌಡರ ಕುರಿತು ಸಿನಿಮಾ ಮಾಡುವ ತಯಾರಿ ಕೂಡ ನಡೆಯುತ್ತಿದೆ. ಈ ಹಾಡು ಅದ್ದೂರಿಯಾಗಿ ಹಾಗೂ ಅದ್ಭುತವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.

ಇದನ್ನೂ ಓದಿ : ದರ್ಶನ್ ವಿಚಾರದಲ್ಲಿ ನನ್ನ ಹತ್ತಿರ ಯಾರು ಬಂದಿಲ್ಲ, ಯಾವ ಪ್ರಭಾವಿಗಳು ಭೇಟಿ ಮಾಡಿಲ್ಲ : ಸಿಎಂ ಸಿದ್ದರಾಮಯ್ಯ..!

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here