Download Our App

Follow us

Home » ಅಪರಾಧ » ನಟ ದರ್ಶನ್​​​​ ವಿವಾದ ಒಂದಲ್ಲಾ ಎರಡಲ್ಲಾ : ಇಲ್ಲಿದೆ ವಿವಾದಗಳ ಲಿಸ್ಟ್..!

ನಟ ದರ್ಶನ್​​​​ ವಿವಾದ ಒಂದಲ್ಲಾ ಎರಡಲ್ಲಾ : ಇಲ್ಲಿದೆ ವಿವಾದಗಳ ಲಿಸ್ಟ್..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್​​ನ್ನು ನಿನ್ನೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕೇಸ್ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟ ದರ್ಶನ್ ಅವರಿಗೆ ಪೊಲೀಸ್ ಕೇಸ್, ವಿವಾದಗಳು ಹೊಸದೇನಲ್ಲ. ಈ ಹಿಂದೆಯೂ ದರ್ಶನ್ ಅನೇಕ ವಿವಾದಗಳನ್ನು ಎದುರಿಸುತ್ತ ಬಂದಿದ್ದಾರೆ.

ಸ್ಯಾಂಡಲ್​​ವುಡ್ ನಟ ದರ್ಶನ್ ಖ್ಯಾತಿಯ ಜೊತೆಗೆ ವಿವಾದಗಳ ಸರಮಾಲೆಯನ್ನೂ ಹೊತ್ತುಬಂದಿದ್ದಾರೆ. ದರ್ಶನ್‌ ಸುತ್ತ ಕೇಳಿ ಬಂದ ವಿವಾದಗಳ ಮಾಹಿತಿ ಇಲ್ಲಿದೆ..

2011ರಲ್ಲಿ ಪತ್ನಿ ಮೇಲೆ ಹಲ್ಲೆ : ನಟ ದರ್ಶನ್ ಅವರು 2011 ರಲ್ಲಿ ಹೆಂಡತಿ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸಿದ್ದರು. ದರ್ಶನ್ ಅವರು ತಮ್ಮ ಹೆಂಡತಿಯಾದ ವಿಜಯಲಕ್ಷ್ಮೀ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ ಅರೆಸ್ಟ್ ಕೂಡ ಆಗಿ, ಪರಪ್ಪನ ಅಗ್ರಹಾರ ಜೈಲಿಗೂ ಹೋಗಿದ್ದರು. ಮತ್ತೊಬ್ಬ ನಟಿ ಜೊತೆ ಸಂಬಂಧ ಎಂದು ಪತ್ನಿ ಆರೋಪ ಮಾಡಿದ್ದರು. ಹಾಗಾಗಿ ಕನ್ನಡ ಚಿತ್ರರಂಗದಿಂದ ಆ ನಟಿ 3 ವರ್ಷ ಬ್ಯಾನ್​​​ ಆಗಿದ್ದರು.

ಪವಿತ್ರಗೌಡ ಜೊತೆ ಗೆಳೆತನ : ದರ್ಶನ್​ಗೆ ಹಲವು ದಿನಗಳಿಂದ ಪವಿತ್ರಗೌಡ ಜೊತೆ ಗೆಳೆತನವಿತ್ತು. ಹಾಗಾಗಿ ಖಾಸಗಿ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಆಗಿತ್ತು. ಈ ಬಗ್ಗೆ ಸೋಷಿಯಲ್​​ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಆಕ್ರೋಶ ಹೊರಹಾಕಿದ್ದರು. ವಿಜಯಲಕ್ಷ್ಮಿ ಅವರು ಪವಿತ್ರಗೌಡಗೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದರು.

ದರ್ಶನ್​​​-ಸುದೀಪ್​ ಸ್ನೇಹದಲ್ಲಿ ಬಿರುಕು : 2017ರಲ್ಲಿ ದರ್ಶನ್​​​-ಸುದೀಪ್​ ಸ್ನೇಹದಲ್ಲಿ ಬಿರುಕು ಮೂಡಿತ್ತು. ಈ ಸಂಬಂಧ ಸೋಷಿಯಲ್​ ಮೀಡಿಯಾದಲ್ಲಿ ಸ್ಟಾರ್​ ವಾರ್​​​ ನಡೆದಿತ್ತು. ನಾನು-ಸುದೀಪ್​ ಗೆಳೆಯರಲ್ಲ, ನಾವು ಕಲಾವಿದರಷ್ಟೇ ಎಂದು ದರ್ಶನ್​​ ಸೋಷಿಯಲ್​ ಮೀಡಿಯಾದಲ್ಲಿ ಬರ್ಕೊಂಡಿದ್ದರು. ನಂತರ 2021ರಲ್ಲಿ ಮೈಸೂರಿನ ಹೋಟೆಲ್​​ನಲ್ಲಿ ವೇಯ್ಟರ್​ ಮೇಲೆ ಹಲ್ಲೆ ಮಾಡಿದ್ದರು.

ನಿರ್ಮಾಪಕರಿಗೆ ಬೆದರಿಕೆ : 2022ರಲ್ಲಿ ನಿರ್ಮಾಪಕ ಭರತ್​​, ದರ್ಶನ್​ಗೆ ಬೆದರಿಕೆ ಹಾಕಿದ್ದರು. ಈ ವೇಳೆ ನಟ ದರ್ಶನ್​​​​​ ವಿರುದ್ಧ ಜೀವಬೆದರಿಕೆ ಆರೋಪ ಬಂದಿತ್ತು. ನಂತರ 2023ರ ಜನವರಿಯಲ್ಲಿ ದರ್ಶನ್​​​ ಫಾರ್ಮ್​​ಹೌಸ್ ಮೇಲೆ ರೇಡ್ ಮಾಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಫಾರ್ಮ್​​ಹೌಸ್​ಗೆ ರೇಡ್ ಮಾಡಿದ್ದರು. ಟಿ.ನರಸೀಪುರದ ದರ್ಶನ್​​​​ ಫಾರ್ಮ್​​ಹೌಸ್​ ಮೇಲೆ ರೇಡ್ ಮಾಡಿ, ಅಕ್ರಮವಾಗಿ ಸಾಕಿದ್ದ ಪ್ರಾಣಿ, ಪಕ್ಷಿಗಳನ್ನು ರಕ್ಷಿಸಲಾಗಿತ್ತು. ಅಷ್ಟೇ ಅಲ್ಲದೆ ಉಗುರು ವಿವಾದದಲ್ಲೂ ದರ್ಶನ್​​ ಹೆಸರು ಕೇಳಿ ಬಂದಿತ್ತು. ದರ್ಶನ್​​ ಬಳಿ ಹುಲಿ ಉಗುರಿನ ವಸ್ತು ಇವೆ ಎಂದು ಹೇಳಲಾಗಿತ್ತು.

ರೆಸ್ಟೋರೆಂಟ್ ಗಲಾಟೆ : 2024ರ ಜನವರಿಯಲ್ಲಿ ರೆಸ್ಟೋರೆಂಟ್​​ನಲ್ಲಿ ಗಲಾಟೆ ನಡೆದಿತ್ತು. ಜೆಟ್​ಲ್ಯಾಗ್​ನಲ್ಲಿ ಮಿಡ್​ನೈಟ್​ವರೆಗೂ ಪಾರ್ಟಿ ಮಾಡಿದ್ದರು. ಈ ವೇಳೆ ಸುಬ್ರಹ್ಮಣ್ಯ ನಗರ ಪೊಲೀಸರು ದರ್ಶನ್​​ನ್ನು ವಿಚಾರಣೆ ಮಾಡಿದ್ದರು. ಜೆಟ್ ಲಾಗ್​ ಪಬ್​ ಗಲಾಟೆಯಿಂದ ಪಬ್ಬೇ ಮುಚ್ಚಿ ಹೋಯ್ತು. ನಂತರ ನಿರ್ಮಾಪಕ ಉಮಾಪತಿ ವಿರುದ್ಧ ಮಾತ್ನಾಡಿ ವಿವಾದ ಸೃಷ್ಟಿಯಾಗಿತ್ತು. ನಿರ್ಮಾಪಕ ಉಮಾಪತಿ ಅವರನ್ನು ತಗಡೇ ಎಂದು ಕರೆದಿದ್ದ ದರ್ಶನ್​ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಲಕ್ಷ್ಮಿ ದೇವರ ಬಗ್ಗೆ ವಿವಾದಿತ ಹೇಳಿಕೆ : ಲಕ್ಷ್ಮಿ ದೇವರ ಬಗ್ಗೆ ದರ್ಶನ್​​ ವಿವಾದಿತ ಹೇಳಿಕೆ ನೀಡಿದ್ದರು. ಬೆತ್ತಲು ಮಾಡಿ ರೂಂನಲ್ಲಿ ಕೂಡಿದರೆ ಮನೆಯಲ್ಲೇ ಇರ್ತಾಳೆ ಎಂದಿದ್ರು. ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ದರ್ಶನ್​​ ವಿರುದ್ಧ ಮಹಿಳಾ ಸಂಘಟನೆ ಪ್ರತಿಭಟನೆ ಮಾಡಿದ್ದವು. ದರ್ಶನ್​​​ ಅಪಮಾನ ಮಾಡಿದ್ದಾರೆ ಎಂದು ಮಹಿಳಾ ಸಂಘಟನೆ ದೂರು ನೀಡಿತ್ತು. ನಂತರ ಕುಡಿದ ಮತ್ತಿನಲ್ಲಿ ಮೈಸೂರಿನ ರಿಂಗ್​ ರೋಡ್​ನಲ್ಲಿ ಆ್ಯಕ್ಸಿಡೆಂಟ್​ ಮಾಡಿದ್ದರು.

ದರ್ಶನ್​​ ಮನೆಯ ಶ್ವಾನ ಕಚ್ಚಿದ ವಿವಾದ : ಪಕ್ಕದ ಮನೆಯ ಮಹಿಳೆಗೆ ದರ್ಶನ್​​ ನಾಯಿ ಕಚ್ಚಿತ್ತು. ಮಹಿಳೆ ಮೇಲೆ ಸೆಕ್ಯೂರಿಟಿ ಗಾರ್ಡ್​ ನಾಯಿ ಛೂ ಬಿಟ್ಟಿದ್ರು. ಆರ್​​.ಆರ್​​​.ನಗರ ಠಾಣೆಗೆ ಮಹಿಳೆ ದೂರು ನೀಡಿದ್ದರು. ಈ ಕೇಸ್ ಸಂಬಂಧ ದರ್ಶನ್​​ ಪೊಲೀಸ್ ಠಾಣೆಗೆ ಹೋಗಿ ವಿವರಣೆ ಕೊಟ್ಟು ಬಂದಿದ್ದರು.

ದರ್ಶನ್ ವಿರುದ್ಧ ಯಾರೇ ಮಾತಾಡಿದ್ರೂ ಟಾರ್ಚರ್ : ಹಲವು ಬಾರಿ ನೆಟ್ಟಿಗರಿಗೆ ಟಾರ್ಚರ್ ಕೊಟ್ಟು ಡಿ ಗ್ಯಾಂಗ್ ಕ್ಷಮೆ ಕೇಳಿಸಿದ್ದರು. ವಿಡಿಯೋಗಳನ್ನು ಅಪ್ಲೋಡ್​ ಮಾಡಿ ಡಿ ಗ್ಯಾಂಗ್ ಭಯ ಹುಟ್ಟಿಸ್ತಿತ್ತು. ಇದೀಗ ಇಂಟರ್​ನೆಟ್​ನಲ್ಲಿ ಹಳೇ ವಿಡಿಯೋ ಡಿಲೀಟ್ ಆಗಿದ್ದು, ಮಾಧ್ಯಮಗಳ ಕಚೇರಿಗೂ ನುಗ್ಗಿ ಪುಂಡಾಟ ಮಾಡ್ತಿದ್ದರು. ಈ ಬಾರಿ ಇನ್ಸ್​ಟಾ ಗ್ರಾಂನಲ್ಲಿ ಕಾಮೆಂಟ್ ಮಾಡಿದ್ದಕ್ಕೆ ಮರ್ಡರ್​ ಮಾಡಿದ್ದಾರೆ.

ಇದನ್ನೂ ಓದಿ : ಅಬ್ಬಬ್ಬಾ ಮತ್ತೆ ಡಾಲಿ ಅಬ್ಬರ.. ಧನು-ಪರಮ್​​ ಕನಸಿನ ‘ಕೋಟಿ’ಯಲ್ಲಿ ಸತ್ಯಘಟನೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here