Download Our App

Follow us

Home » ಜಿಲ್ಲೆ » ಬೆಳಗಾವಿ : ತುಂಬಿ ಹರಿಯುತ್ತಿದ್ದ ನದಿಗೆ 13 ಜನರಿದ್ದ ಟ್ರ್ಯಾಕರ್​​​​ ಪಲ್ಟಿ..!

ಬೆಳಗಾವಿ : ತುಂಬಿ ಹರಿಯುತ್ತಿದ್ದ ನದಿಗೆ 13 ಜನರಿದ್ದ ಟ್ರ್ಯಾಕರ್​​​​ ಪಲ್ಟಿ..!

ಬೆಳಗಾವಿ : ಬೆಳಗಾವಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ತುಂಬಿ ಹರಿಯುತ್ತಿದ್ದ ನದಿಗೆ ಟ್ರಾಕ್ಟರ್​​ ಮುಗುಚಿ ಬಿದ್ದಿದೆ. 13 ಜನರಿದ್ದ ಟ್ರ್ಯಾಕರ್​​​​ ಅವರಾದಿ ನಂದಗಾಂವ್ ಬಳಿ ನದಿಗೆ ಬಿದ್ದಿದೆ.

ಮೂಡಲಗಿಯ ಅವರಾದಿ-ಬಾಗಲಕೋಟೆಯ ನಂದಗಾಂವ್ ಮಧ್ಯೆ ಇರುವ ಬ್ಯಾರೇಜ್​ನಲ್ಲಿ ಈ ಅವಘಡ ಸಂಭವಿಸಿದೆ. ಟ್ರೇಲರ್​​​ ಸಮೇತ ಟ್ರಾಕ್ಟರ್ ನೀರಿಗೆ ಬಿದ್ದಿದ್ದು, ಅದೃಷ್ಟವಷಾತ್ 12 ಮಂದಿ ಈಜಿ ದಡ ಸೇರಿದ್ದಾರೆ.

13 ಜನರು ಅವರಾದಿಯಿಂದ ನಂದಗಾಂವ್ ಗೆ ಟ್ರ್ಯಾಕ್ಟರ್​ ಮೇಲೆ ಕುಳಿತುಕೊಂಡು ಕೂಲಿ ಕೆಲಸಕ್ಕೆಂದು‌ ತೆರಳುತ್ತಿದ್ದರು. ನದಿ ದಾಟುವಾಗ ಟ್ರಾಕ್ಟರ್ ಆಯತಪ್ಪಿ ಘಟಪ್ರಭಾ ನದಿಗೆ ಬಿದ್ದಿದೆ. ನೀರಲ್ಲಿ ಕಣ್ಮರೆಯಾಗಿರುವ ಓರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕುಲಗೋಡ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಕಾರಿಗೆ ಬೈಕ್ ಅಡ್ಡ ಹಾಕಿ ಬಾನೆಟ್‌ಗೆ ಒದ್ದು ಪರಾರಿಯಾದ ಬೈಕ್ ಸವಾರ..!

Leave a Comment

DG Ad

RELATED LATEST NEWS

Top Headlines

‘ಹುಚ್ಚ’ನ ಪದ ಸ್ಪೂರ್ತಿಯಿಂದ “ತುರ್ರಾ” ಹಾಡು ಬರೆದ ಯೋಗರಾಜ್ ಭಟ್ – “ಮನದ ಕಡಲು” ಸಿನಿಮಾದಿಂದ ಮತ್ತೊಂದು ಹಾಡು ರಿಲೀಸ್!

ಬೆಂಗಳೂರು : E.K. ಎಂಟರ್ ಟೈನರ್ಸ್ ಲಾಂಛನದಲ್ಲಿ ಈ.ಕೃಷ್ಣಪ್ಪ ಅವರು ನಿರ್ಮಿಸಿ ಯೋಗರಾಜ್ ಭಟ್ ನಿರ್ದೇಶಿಸಿದ್ದ ಬ್ಲಾಕ್​ ಬಸ್ಟರ್ “ಮುಂಗಾರು ಮಳೆ” ಸಿನಿಮಾ ಬಳಿಕ ಇದೇ ಕಾಂಬಿನೇಷನ್​​ನಲ್ಲಿ ಮೂಡಿಬರುತ್ತಿರುವ

Live Cricket

Add Your Heading Text Here