ಬೆಂಗಳೂರು: ನಗರದಲ್ಲಿ ತುಪ್ಪ ಕಳ್ಳತನ ಮಾಡೋ ಗ್ಯಾಂಗ್ ಬೀಡು ಬಿಟ್ಟಿದೆ. ನಂದಿನಿ ಪಾರ್ಲರ್‌ಗಳು, ಸೂಪರ್ ಮಾರ್ಕೆಟ್‌ಗಳೇ ಇವರ ಟಾರ್ಗೆಟ್ ಆಗಿದೆ. ಒಬ್ಬರೇ ಇರುವ ಅಂಗಡಿಗಳನ್ನ ಟಾರ್ಗೆಟ್ ಮಾಡುವ ಕಳ್ಳರು ಕೆಜಿಗಟ್ಟಲೇ ತುಪ್ಪ ಖರೀದಿಸುವ ನೆಪದಲ್ಲಿ ಆಗಮಿಸುತ್ತಾರೆ. ಬಳಿಕ ಮತ್ತೊಂದು ವಸ್ತು ಕೇಳಿ ಮಾಲೀಕರು ಅತ್ತ ತಿರುಗುವಷ್ಟರಲ್ಲಿ ತಂದಿಟ್ಟ ತುಪ್ಪವನ್ನು ಎತ್ತಿಕೊಂಡು ಪರಾರಿಯಾಗುತ್ತಾರೆ. ಕಳೆದ ಒಂದು ತಿಂಗಳ ಹಿಂದೆ ಇದೇ ರೀತಿ ನಂದಿನಿ ಪಾರ್ಲರ್ ಒಂದರಿಂದ 15 ಕೆಜಿ ತುಪ್ಪ ಖರೀದಿಸಿ ಖದೀಮರು ಪಾರಾರಿಯಾಗಿದ್ದರು.
ಈ ಹಿಂದೆ ಕೆಂಗೇರಿ ಕೊಮ್ಮಘಟ್ಟ ನಂದಿನಿ ಪಾರ್ಲರ್‌ನಲ್ಲಿ ಕೈಚಳಕ ತೋರಿದ್ದ ಕಳ್ಳರು ಪೇಡ ಖರೀದಿ ನೆಪದಲ್ಲಿ ತುಪ್ಪ ಕದ್ದೊಯ್ದಿದ್ದರು. ಇದೀಗ ಅದೇ ರೀತಿ ಅನ್ನಪೂರ್ಣೇಶ್ವರಿ ನಗರದಲ್ಲಿ ಚಾಲಾಕಿ ಕಳ್ಳರು ಕೈ ಚಳಕ ತೋರಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ಪೇರ್ ಪ್ರೈಸ್ ಎಂಬ ಸೂಪರ್ ಮಾರ್ಕೇಟ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿಂದಲೂ 15 ಲೀಟರ್ ತುಪ್ಪ ಖರೀದಿಸಿದ ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : 3ನೇ ಬಾರಿ ಮೋದಿ ಪ್ರಮಾಣ ವಚನ : ಹಾವೇರಿಯಲ್ಲಿ ಅಭಿಮಾನಿಗಳಿಂದ ಹೋಳಿಗೆ ಊಟ ಆಯೋಜನೆ..!