ಹಾವೇರಿ : ಇಂದು ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಹಾವೇರಿಯಲ್ಲಿ ಮೋದಿ ಅಭಿಮಾನಿಗಳು ಹೋಳಿಗೆ ಊಟ ಆಯೋಜಿಸಿದ್ದಾರೆ.
ಮೋದಿ ಟಿ ಸ್ಟಾಲ್ ಮಾಲೀಕರು ಹಾಗೂ ಅಭಿಮಾನಿಗಳು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಹೋಳಿಗೆ ಊಟ ಆಯೋಜನೆ ಮಾಡಿದ್ದಾರೆ. ಮೋದಿ ಅಭಿಮಾನಿಗಳು ಬರೋಬ್ಬರಿ ನಾಲ್ಕು ಸಾವಿರ ಜನರಿಗೆ ಹೋಳಿಗೆ ಊಟ ಹಾಕ್ತಿದ್ದಾರೆ.
ಮೋದಿ ಹೆಸರಿನ ಟೀ ಸ್ಟಾಲ್ ಮಾಲೀಕರು ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದು, ಇದಕ್ಕೆ ಮೋದಿ ಅಭಿಮಾನಿಗಳು ಸಿದ್ದತೆ ನಡೆಸಿದ್ದಾರೆ.
ಇದನ್ನೂ ಓದಿ : ಇಂದಿನಿಂದ ಪ್ರಧಾನಸೇವಕನ 3ನೇ ಅವಧಿ ಶುರು – ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣ ವಚನಕ್ಕೆ ಭಾರೀ ಸಿದ್ಧತೆ..!
Post Views: 118