ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪಡದಿ SIT ಕಸ್ಟಡಿಯಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೇ 10ರವರೆಗೆ ಮತ್ತೆ SIT ಕಸ್ಟಡಿಗೆ ನೀಡಿದೆ. ಇದೀಗ SIT ತನಿಖೆಯಲ್ಲಿ ಪ್ರಜ್ವಲ್ ಪ್ರೇಯಸಿಯ ಸೀಕ್ರೆಟ್ ಬಯಲಾಗಿದ್ದು, ಈ ಮೂಲಕ ಪೆನ್ಡ್ರೈವ್ ಪ್ರಜ್ವಲ್ ರೇವಣ್ಣಗೂ ಗರ್ಲ್ ಫ್ರೆಂಡ್ ಇದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
SIT ತನಿಖೆಯಲ್ಲಿ ಪ್ರಜ್ವಲ್ ಪ್ರೇಯಸಿಯ ಸೀಕ್ರೆಟ್ ಬಯಲಾಗಿದೆ. ವಿದೇಶದಲ್ಲಿ ತಲೆ ಮರೆಸಿಕೊಂಡ ಪ್ರಜ್ವಲ್ಗೆ ಹಣ ಸಹಾಯ ಮಾಡಿದ ಆರೋಪದಡಿ ಪ್ರಜ್ವಲ್ ಪ್ರಿಯತಮೆಗೆ SIT ನೋಟಿಸ್ ಜಾರಿ ಮಾಡಿದೆ.
ವಿದೇಶದಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಗರ್ಲ್ ಫ್ರೆಂಡ್ ಪ್ರತಿ ಕ್ಷಣ ಇಲ್ಲಿನ ಇಂಚಿಂಚೂ ಮಾಹಿತಿ ನೀಡುತ್ತಿದ್ದು, ಇದರೊಂದಿಗೆ ಹಣ ಸಹಾಯ ಮಾಡಿರೋದು, ಆಶ್ರಯ ಕಲ್ಪಿಸಿರೋದಕ್ಕೆ ಎಸ್ಐಟಿ ತನಿಖೆಯಲ್ಲಿ ಸಾಕ್ಷಿ ಪತ್ತೆಯಾಗಿದೆ. ಮಹತ್ವದ ಸಾಕ್ಷ್ಯ ಸಿಕ್ಕ ಹಿನ್ನೆಲೆ ಪ್ರಜ್ಬಲ್ ಗರ್ಲ್ ಫ್ರೆಂಡ್ಗೆ ಎಸ್ಐಟಿ ನೋಟಿಸ್ ನೀಡಿ ವಿವರ ಹೇಳಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಬೀಭತ್ಸಕರ ಕೊ*ಲೆ ಪ್ರಕರಣ ಬೆಳಕಿಗೆ – ಮನೆಯಲ್ಲೇ ವ್ಯಕ್ತಿಯನ್ನು ತುಂಡುತುಂಡಾಗಿ ಕತ್ತರಿಸಿದ ಪಾಪಿ..!