Download Our App

Follow us

Home » ಸಿನಿಮಾ » ದಾರಿ ದಾರಿಯಲ್ಲಿ… ಬೀದಿ ಬೀದಿಯಲ್ಲಿ ನನ್ನ ಮದುವೆ ಬಗ್ಗೆ ಕೇಳ್ತಾರೆ.. ಆದ್ರೆ ನಾನು ಮದುವೆ..? : ಡಾಲಿ ಧನಂಜಯ್..!

ದಾರಿ ದಾರಿಯಲ್ಲಿ… ಬೀದಿ ಬೀದಿಯಲ್ಲಿ ನನ್ನ ಮದುವೆ ಬಗ್ಗೆ ಕೇಳ್ತಾರೆ.. ಆದ್ರೆ ನಾನು ಮದುವೆ..? : ಡಾಲಿ ಧನಂಜಯ್..!

ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾ ಟ್ರೇಲರ್ ಮೂಲಕವೇ ಭಾರೀ ನಿರೀಕ್ಷೆ ಮೂಡಿಸಿದೆ. ಜೂನ್‌ 14ರಂದು ಕೋಟಿ ಚಿತ್ರ ಬಿಡುಗಡೆಯಾಗಲಿದ್ದು, ಹಲವು ದಿನಗಳ ಬಳಿಕ ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾವೊಂದು ತೆರೆ ಕಾಣುತ್ತಿದೆ. ಈ ಸುದ್ದಿ ಕೇಳಿ ಡಾಲಿ ಅಭಿಮಾನಿಗಳಂತೂ ಫುಲ್‌ ಖುಷಿಯಾಗಿದ್ದಾರೆ.

ಕೋಟಿ ಚಿತ್ರದ ಟ್ರೇಲರ್​ ಬಿಡುಗಡೆ ವೇಳೆ ನಟ ಡಾಲಿ ಧನಂಜಯ್​ ಅವರು ಖಾಸಗಿ ಬದುಕಿನ ಕುರಿತು ಪ್ರಶ್ನೆಗೆ ಉತ್ತರಿಸಿದ್ದಾರೆ. ವರ್ಷಗಳು ಹೋಗುತ್ತಾ ಇರುತ್ತದೆ. ಅದು ಗೊತ್ತಾಗುವುದೇ ಇಲ್ಲ. ಸಿನಿಮಾದವರಿಗೆ ವಯಸ್ಸಾಗುವುದು ಗೊತ್ತಾಗಲ್ಲ, ಸತ್ತು ಹೋಗುವುದೂ ಗೊತ್ತಾಗಲ್ಲ. ಒಂದು ಸಿನಿಮಾ ಮಾಡುವುದರೊಳಗೆ ಎರಡು ವರ್ಷ ಕಳೆದು ಹೋಗಿರುತ್ತದೆ. ತಿರುಗಿ ನೋಡಿದಾಗ ಇಷ್ಟೋಂದು ಆಗೋಯ್ತಾ ಅನಿಸುತ್ತದೆ. ಇದು ಯಾವಾಗಲೂ ಅನಿಸುತ್ತದೆ.

ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರು ಕೂಡ ಮದುವೆ ಯಾವಾಗ ಅಂತ ಕೇಳುವ ಹಾಗೆ ಆಗಿದೆ. ನಮಗೆ ಗೊತ್ತಾಗಿಲ್ಲ.. ನಮಗಿನ್ನು 27 ವರ್ಷ ಆದರೆ ನೋಡುವವರಿಗೆ ಇಷ್ಟು ವರ್ಷ ಆಯ್ತು ಅನಿಸುತ್ತದೆ. ಏನು ಮಾಡೋಕೆ ಆಗಲ್ಲ. ಮದುವೆ ಬಗ್ಗೆ ಎಲ್ಲಾ ವೇದಿಕೆಯಲ್ಲೂ ಕೇಳುತ್ತಾರೆ. ಅದೇ ಹೇಳಿದನ್ನಲ್ಲಾ ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರು ಕೂಡ ಕೇಳುತ್ತಾರೆ. ಪ್ರಮಾಣ ಮಾಡಿದ್ದೀನಿ. ಕೋಟಿ ಚೆನ್ನಾಗಿ ಹಿಟ್‌ ಆಗಲಿ, ಪಕ್ಕಾ ಮದುವೆ ಆಗುತ್ತೇನೆ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.

ಚೆನ್ನಾಗಿ ಆಗಿಲ್ಲ ಅಂದರೂ ಬಿಡಲ್ಲ, ತಾರಮ್ಮನೇ ಮದುವೆ ಮಾಡಿಸಿಬಿಡುತ್ತಾರೆ. ಇನ್ನೊಂದು ನಂದು ತಾರಮ್ಮ ಹಾಗೂ ರಂಗಾಯಣ ರಘು ಅವರದು ಹ್ಯಾಟ್ರಿಕ್‌ ಕಾಂಬಿನೇಶನ್. ಬಡವ ರಾಸ್ಕಲ್‌ ಸೂಪರ್‌ ಹಿಟ್‌, ಟಗರು ಪಲ್ಯ ನಾನು ಬರೀ ನಿರ್ಮಾಪಕ ಆದರೆ ಕಾಂಬಿನೇಶನ್ ಸೂಪರ್‌ ಹಿಟ್‌, ಕೋಟಿಲೂ ಅದು ರಿಪೀಟ್‌ ಆಗುತ್ತದೆ. ಕೋಟಿ ಸಿನಿಮಾ ಕೂಡ ಹಿಟ್​ ಆಗುತ್ತದೆ. ಯಾಕೆಂದರೆ ಈ ಸಿನಿಮಾ ತುಂಬ ಚೆನ್ನಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ : ಪ್ರಭಾವಿ ಖಾತೆಗೆ ಪಟ್ಟು ಹಿಡಿದ ಮಿತ್ರ ಪಕ್ಷಗಳಿಗೆ ಬಿಗ್​ ಶಾಕ್​​​ : ದೊಡ್ಡ ಖಾತೆಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಲು ನಿರ್ಧಾರ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here