Download Our App

Follow us

Home » ರಾಷ್ಟ್ರೀಯ » ಉತ್ತರಾಖಂಡ್​ನಲ್ಲಿ ಟ್ರಕ್ಕಿಂಗ್​ಗೆ ತೆರಳಿದ್ದ ರಾಜ್ಯದ 9 ಮಂದಿ ಸಾ*ವು : ಇತರರ ರಕ್ಷಣೆಗೆ ಶಕ್ತಿಮೀರಿ ಪ್ರಯತ್ನ – ಸಿಎಂ ಸಿದ್ದರಾಮಯ್ಯ..!

ಉತ್ತರಾಖಂಡ್​ನಲ್ಲಿ ಟ್ರಕ್ಕಿಂಗ್​ಗೆ ತೆರಳಿದ್ದ ರಾಜ್ಯದ 9 ಮಂದಿ ಸಾ*ವು : ಇತರರ ರಕ್ಷಣೆಗೆ ಶಕ್ತಿಮೀರಿ ಪ್ರಯತ್ನ – ಸಿಎಂ ಸಿದ್ದರಾಮಯ್ಯ..!

ಡೆಹ್ರಾಡೂನ್‌ : ಉತ್ತರಕಾಶಿಯಲ್ಲಿ ಭಾರೀ ದೊಡ್ಡ ಅವಘಡ ಸಂಭವಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಟ್ರೆಕ್ಕಿಂಗ್‌ಗೆ ತೆರಳಿದ್ದ 22 ಮಂದಿ ಸದಸ್ಯರ ತಂಡ ನಾಪತ್ತೆಯಾಗಿದ್ದು, ಇದರಲ್ಲಿ ಕರ್ನಾಟಕದ 18 ಮಂದಿಯೂ ಸೇರಿದ್ದರು ಎಂದು ತಿಳಿದು ಬಂದಿದೆ.

ನಾಪತ್ತೆಯಾದ 22 ಮಂದಿಯ ಪೈಕಿ ಕರ್ನಾಟಕದ 9 ಮಂದಿಯ ಶವ ಪತ್ತೆಯಾಗಿದ್ದು, ಇನ್ನುಳಿದವರು ಎಲ್ಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ. ನಾಪತ್ತೆಯಾದವರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದು, ಸಾವನ್ನಪ್ಪಿದ ಮಂದಿ ಹವಮಾನ ವೈಪರೀತ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನುಳಿದವರು ಇನ್ನೂ ನಾಪತ್ತೆಯಾಗಿದ್ದಾರೆ. ಪೊಲೀಸ್, ಎಸ್‌ಡಿಆರ್‌ಎಫ್ ಸೇರಿದಂತೆ ಎಲ್ಲಾ ಆಡಳಿತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗಲು ಸಮೀಪದ ಹೆಲಿಪ್ಯಾಡ್ ಅನ್ನು ಸಕ್ರಿಯಗೊಳಿಸಲಾಗಿದೆ.

 

22 ಸದಸ್ಯರ ಚಾರಣಿಗರ ತಂಡ ಉತ್ತರಕಾಶಿಯ ಸಹಸ್ತ್ರತಾಲ್ ಟ್ರೆಕ್ಕಿಂಗ್‌ ಸ್ಪಾಟ್‌ನಲ್ಲಿ ಸಿಲುಕಿಕೊಂಡಿದೆ. ಕಣ್ಮರೆಯಾದವರನ್ನು ರಕ್ಷಿಸುವ ಸಲುವಾಗಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದ್ದು, ಎಸ್‌ಡಿಆರ್‌ಎಫ್ ತಂಡ ಹೆಲಿಕಾಪ್ಟರ್ ಮೂಲಕ ಈಗಾಗಲೇ 13 ನಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ನಾಟಿನ್ ಗ್ರಾಮಕ್ಕೆ ಕರೆತಂದಿದೆ. ಮಾಹಿತಿ ಪ್ರಕಾರ ನಾಲ್ವರು ಮಂದಿ ರಸ್ತೆಯಲ್ಲಿ ಓಡಾಡಿದ್ದರಿಂದ ಚಳಿಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಇದಾದ ಬಳಿಕ ಸದ್ಯ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಇತ್ತೀಚಿನ ಅಪ್‌ಡೇಟ್ ಪ್ರಕಾರ, ನಾಲ್ವರು ಮಹಿಳಾ ಚಾರಣಿಗರನ್ನು ನಾಟಿನ್‌ನಿಂದ ಸಹಸ್ತ್ರಧಾರಾ ಹೆಲಿಪ್ಯಾಡ್‌ಗೆ ಕಳುಹಿಸಲಾಗಿದೆ. ಇಬ್ಬರು ಮಹಿಳಾ ಟ್ರೆಕ್ಕರ್‌ಗಳ ಮೃತದೇಹಗಳನ್ನು ಸಹ ನಟೀನ್‌ಗೆ ಕೊಂಡೊಯ್ಯಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಹರ್ಷಿಲ್ ಹೆಲಿಪ್ಯಾಡ್‌ನಲ್ಲಿ MI-17 ಹೆಲಿಕಾಪ್ಟರ್ ಅನ್ನು ಸಹ ಬ್ಯಾಕಪ್ ಆಗಿ ನಿಯೋಜಿಸಲಾಗಿದೆ. ಇಲ್ಲಿಯವರೆಗೆ, 8 ಚಾರಣಿಗರನ್ನು ಏರ್‌ಲಿಫ್ಟ್ ಮಾಡಲಾಗಿದೆ ಮತ್ತು ಘಟನಾ ಸ್ಥಳದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಉತ್ತರಾಖಂಡದ ಶಾಸ್ತ್ರತಾಳ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಕ್ಕೆ ತೆರಳಿದ್ದ ರಾಜ್ಯದ ಚಾರಣಿಗರು ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈಗಾಗಲೇ ಸೇನಾ ಹೆಲಿಕಾಪ್ಟರ್ ಮೂಲಕ ಐವರ ಮೃತದೇಹಗಳನ್ನು ಉತ್ತರ ಕಾಶಿಗೆ ತರಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಮೂಲಕ 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಸಚಿವರಾದ ಕೃಷ್ಣಬೈರೇಗೌಡ ಅವರಿಗೆ ಇಂದೇ ಡೆಹ್ರಾಡೂನ್‌ಗೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸುವಂತೆ ಸೂಚಿಸಿದ್ದೇನೆ. ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳು ಹಾಗೂ ಸೇನಾ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿಕೊಂಡು ಅಪಾಯದಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಗೂಡು ಸೇರಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಮೃತರನ್ನು ಸುಜಾತ ಬೆಂಗಳೂರು (52), ಸಿಂಧು (47), ಚಿತ್ರಾ (48), ಪದ್ಮಿನಿ (45), ವೆಂಕಟೇಶ್‌ ಪ್ರಸಾದ್‌ (52, ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ KPS (50), ವಿನಾಯಕ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಚಿಕಿತ್ಸೆ ಫಲಕಾರಿಯಾಗದೆ ಖ್ಯಾತ ನಟಿ ರಿಷ್ತಾ ನಿಧನ..!

 

 

 

 

Leave a Comment

DG Ad

RELATED LATEST NEWS

Top Headlines

ಬೆಳಗಾವಿ : ಮಕ್ಕಳ ಕಳ್ಳರ ಮೇಲೆ ಅಥಣಿ ಪೋಲಿಸರ ಫೈರಿಂಗ್..!

ಬೆಳಗಾವಿ : ಮಕ್ಕಳ ಕಳ್ಳರ ಮೇಲೆ ಅಥಣಿ ಪೋಲಿಸರು ಫೈರಿಂಗ್ ಮಾಡಿ ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮೂರು ತಂಡ ರಚಿಸಿ ಅಪಹರಣಕಾರರಿಗೆ

Live Cricket

Add Your Heading Text Here