Download Our App

Follow us

Home » ರಾಜಕೀಯ » TDP ಬೆಂಬಲ NDAಗೆ – ಮೋದಿಗೆ ಜೈ ಎಂದ ಚಂದ್ರಬಾಬು ನಾಯ್ಡು..!

TDP ಬೆಂಬಲ NDAಗೆ – ಮೋದಿಗೆ ಜೈ ಎಂದ ಚಂದ್ರಬಾಬು ನಾಯ್ಡು..!

ಲೋಕಸಭಾ ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣ ಈಗಾಗಲೇ ಸಿಕ್ಕಿದೆ. ಒಟ್ಟಾರೆಯಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಮ್ಯಾಜಿಕ್ ನಂಬರ್ ಅನ್ನು ಪಾರು ಮಾಡಿದೆ. ಆದರೆ ಬಿಜೆಪಿ ಏಕಾಂಗಿಯಾಗಿ 272 ಸ್ಥಾನಗಳನ್ನು ತಲುಪಲು ಸಾಧ್ಯವಾಗಿಲ್ಲ.

2019ರಲ್ಲಂತೂ ಬಿಜೆಪಿಯೊಂದೇ 303 ಸೀಟು ಗಳಿಸಿದರೆ ಒಟ್ಟಾರೆ ಎನ್ ಡಿಎ 363 ಸೀಟುಗಳನ್ನು ಗೆದ್ದಿತು. ಈ ಸಂದರ್ಭದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಸಾಧ್ಯವೇ ಇರಲಿಲ್ಲ. ಹೀಗಾಗಿಯೇ ಲಾಕ್ ಡೌನ್, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ನೇ ವಿಧಿಯನ್ನು ರದ್ದುಗೊಳಿಸುವಂತಹ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಯಾರು ವಿರೋಧಿಸಿದರೂ ಸರ್ಕಾರ ಬೀಳುವ ಸಾಧ್ಯತೆಯೇ ಇಲ್ಲ ಎಂಬ ಆತ್ಮವಿಶ್ವಾಸ ಮೋದಿ ನೇತೃತ್ವದ ಬಿಜೆಪಿಗಿತ್ತು. 2014 ಮತ್ತು 2019ರಲ್ಲಿ ಬಹುಮತದ ಸರ್ಕಾರ ಮುನ್ನಡೆಸಿದ್ದ ಮೋದಿಗೆ ಈಗ ಸಮ್ಮಿಶ್ರ ಸರ್ಕಾರ ನಡೆಸುವ ಇಕ್ಕಟ್ಟಿನ ಸ್ಥಿತಿ ಇದೆ. 

ಇದೀಗ NDFಗೆ TDP ಬೆಂಬಲ ನೀಡಲಿದೆ ಎಂದು ವಿಜಯವಾಡ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದೆ. ಮೋದಿಗೆ ಜೈ ಎಂದ ಚಂದ್ರಬಾಬು ನಾಯ್ಡು, ಕೆಲ ಹೊತ್ತಿಲ್ಲೇ  ವಿಶೇಷ ವಿಮಾನದಲ್ಲಿ ದೆಹಲಿಯತ್ತ ಪ್ರಯಾಣ ಮಾಡಲಿದ್ದಾರೆ. ಒಂದೇ ವಿಮಾನದಲ್ಲಿ ಹೋಗಲಿರುವ ನಾಯ್ಡು ಮತ್ತು ಪವನ್​ ಕಲ್ಯಾಣ್ ಅವರು ಅಮಿತ್​​ ಶಾ, ನಡ್ಡಾ ಸಂಜೆ 4 ಗಂಟೆಗೆ  ಕರೆದಿರುವ ​ NDA ಮೀಟಿಂಗ್​​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ NDAಗೆ ಬೆಂಬಲ ಸೂಚಿಸಿರುವ ನಾಯ್ಡು, ಮೈತ್ರಿಗೆ ಬೆಂಬಲ ಕೊಡುವ ಮುನ್ನ ಷರತ್ತು ಹಾಕಿದ್ದಾರೆ. TDP, ಜನಸೇನಾ 18 ಸಂಸದರನ್ನು ಗೆಲ್ಲಿಸಿಕೊಂಡಿವೆ. ಹೀಗಾಗಿ ಆಂಧ್ರಕ್ಕೆ 5 ಸಚಿವ ಸ್ಥಾನ ಮತ್ತು ಸ್ಪೀಕರ್​ ಸ್ಥಾನಕ್ಕೆ ನಾಯ್ಡು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್​​ – ತೆಲಾಂಗಣ ಸಹಕಾರ ಸಂಘದ ಅಧ್ಯಕ್ಷ ಅರೆಸ್ಟ್..!​​

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here