Download Our App

Follow us

Home » ರಾಜಕೀಯ » ತಗ್ಗಿತಾ ಮೋದಿ ವರ್ಚಸ್ಸು? ಸರಳ ಬಹುಮತಕ್ಕೆ ಕುಸಿದಿದ್ದೇಕೆ NDA?

ತಗ್ಗಿತಾ ಮೋದಿ ವರ್ಚಸ್ಸು? ಸರಳ ಬಹುಮತಕ್ಕೆ ಕುಸಿದಿದ್ದೇಕೆ NDA?

ದೇಶಾದ್ಯಂತ ಲೋಕಸಭಾ ಚುನಾವಣೆಯ ಮತಎಣಿಕೆ ಬಿರುಸಿನಿಂದ ನಡೆದಿದ್ದು, ಲೋಕಸಭಾ ಚುನಾವಣೆಯ ಫಲಿತಾಂಶ ಏನಾಗಬಹುದು ಎಂದು ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಬಿಜೆಪಿ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಯಾರ್ ಗೆಲ್ತಾರೆ? ಯಾರ್ ಸೋಲ್ತಾರೆ ಅನ್ನೋ ಪ್ರಶ್ನೆಗೆ ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ.

400 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಎನ್​ಡಿಎಗೆ ಈ ಬಾರಿ 300 ಸೀಟು ಕೂಡ ದಕ್ಕಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಏಕಾಂಗಿಯಾಗಿ ಬಹುಮತ ಪಡೆದಿದ್ದ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತವನ್ನೂ ತಲುಪಿಲ್ಲ. ಎನ್‌ಡಿಎ ಮೈತ್ರಿ ಪಕ್ಷಗಳ ಬಲ ಮ್ಯಾಜಿಕ್ ನಂಬರ್​​ಗಿಂತಲೂ ಕೆಲವೇ ಸೀಟುಗಳು ಹೆಚ್ಚು ಬಂದಿವೆ.

2019ರ ಲೋಕಸಭಾ ಚುನಾವಣೆಯಲ್ಲಿ 353 ಸೀಟುಗಳನ್ನು ಗೆದ್ದಿದ್ದ NDA ಈ ಬಾರಿ 300ರ ಗಡಿ ದಾಟಲು ಸಾಧ್ಯವಾಗಿಲ್ಲ. 2014 ಹಾಗೂ 2019ರ ಚುನಾವಣೆಯಲ್ಲಿ ಹಿಂದಿ ಹಾರ್ಟ್​​​ಲ್ಯಾಂಡ್​​ಗಳು ಬಿಜೆಪಿ ಕೈ ಹಿಡಿದಿದ್ದು ಗೆಲುವಿಗೆ ಕಾರಣ ಆಗಿತ್ತು. 2019ರಲ್ಲಿ ಏಕಾಂಗಿಯಾಗಿಯೇ ಬಿಜೆಪಿ 303 ಸ್ಥಾನಗಳನ್ನ ಗೆದ್ದುಕೊಂಡಿತ್ತು. ಆದ್ರೆ, ಈ ಬಾರಿ ಹಿಂದಿ ಭಾಷಿಕ ರಾಜ್ಯಗಳಲ್ಲೇ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಹಾಗಾಗಿ ಸರ್ಕಾರ ರಚಿಸೋರ್ಯಾರು? ಯಾರಾಗ್ತಾರೆ ಪ್ರಧಾನಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಡಾ.ಕೆ ಸುಧಾಕರ್ ಗೆಲುವು : ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here