Download Our App

Follow us

Home » ಮೆಟ್ರೋ » ಇಂದು ಲೋಕಸಭಾ ಚುನಾವಣೆ ಮತ ಎಣಿಕೆ – ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್​, ಪಾರ್ಕಿಂಗ್​ಗೂ ನಿಷೇಧ..!

ಇಂದು ಲೋಕಸಭಾ ಚುನಾವಣೆ ಮತ ಎಣಿಕೆ – ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್​, ಪಾರ್ಕಿಂಗ್​ಗೂ ನಿಷೇಧ..!

ಬೆಂಗಳೂರು : ಇಂದು ಲೋಕಸಭಾ ಚುನಾವಣೆಯ ಮತ ಎಣಿಕಾ ಪ್ರಕ್ರಿಯೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮೂರು ಎಣಿಕಾ ಕೇಂದ್ರಗಳ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬಲಾವಣೆ ಮಾಡಲಾಗಿದೆ. ಇಂದು ಮತ ಎಣಿಕೆ ನಡೆಯಲಿರುವ ಕೇಂದ್ರಗಳಾದ ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ಜಯನಗರದ ಎಸ್ಎಸ್ಎಂಆರ್ವಿ ಕಾಲೇಜು, ಬೆಂಗಳೂರು ಕೇಂದ್ರ ವಿಭಾಗದಲ್ಲಿರುವ ಸೇಂಟ್ ಜೋಸೆಫ್ ಕಾಲೇಜುಗಳ ಬಳಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಬೆಳೆಗ್ಗೆಯಿಂದಲೇ ಮತ ಎಣಿಕೆ ಮುಗಿಯುವವರೆಗೂ ಕೆಳಕಂಡಂತೆ ಸಂಚಾರ ಮಾರ್ಗ ಬಲಾವಣೆ ಮಾಡಲಾಗಿದೆ.

ಮೌಂಟ್ ಕಾರ್ಮೆಲ್ ಕಾಲೇಜುಸಂಚಾರ ನಿರ್ಬಂಧಿತ ರಸ್ತೆಗಳು‌ :

  • ಪ್ಯಾಲೇಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್​ನಿಂದ ಮಿನುಗುತಾರೆ ಕಲ್ಪನಾ ಜಂಕ್ಷನ್
  • ಮಿನುಗುತಾರೆ ಕಲ್ಪನಾ ಜಂಕ್ಷನ್​ನಿಂದ ಪ್ಯಾಲೇಸ್ ರಸ್ತೆಯ ವಸಂತನಗರ ಕೆಳ ಸೇತುವೆ ಜಂಕ್ಷನ್​​ ವರೆಗೆ

ಸಂಚಾರಕ್ಕೆ ಪರ್ಯಾಯ ಮಾರ್ಗಗಳುಪ್ಯಾಲೇಸ್ ರಸ್ತೆಯಿಂದ ಮೌಂಟ್ ಕಾರ್ಮೆಲ್ ಕಾಲೇಜು, ಕಲ್ಪನಾ ಜಂಕ್ಷನ್ ಮತ್ತು ಚಂದ್ರಿಕಾ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು – ಪ್ಯಾಲೇಸ್ ರಸ್ತೆ – ಎಡ ತಿರುವು – ಚಕ್ರವರ್ತಿ ಲೇಔಟ್ – ಮುಖ್ಯ ಪ್ಯಾಲೇಸ್ – ವಸಂತನಗರ ಅಂಡರ್ ಬ್ರಿಡ್ಜ್ – ಎಡ ತಿರುವು – ಎಂ.ವಿ.ಜಯರಾಮ ರಸ್ತೆ – ಹಳೆ ಉದಯ ಟಿವಿ ಜಂಕ್ಷನ್ – ಎಡ ತಿರುವು – ಕಂಟೋನ್ಮಂಟ್ ರಸ್ತೆಯ ಮೂಲಕ ಸಂಚರಿಸಬಹುದು.

ಬಸವೇಶ್ವರ ಜಂಕ್ಷನ್ ಕಡೆಯಿಂದ ಉದಯ ಟಿವಿ ಜಂಕ್ಷನ್ ಮತ್ತು ಜಯಮಹಲ್ ರಸ್ತೆಯ ಕಡೆಗೆ ಸಂಚರಿಸಲು, ಬಸವೇಶ್ವರ ಜಂಕ್ಷನ್ ಓಲ್ಡ್ ಹೈಗೌಂಡ್ಸ್ ಜಂಕ್ಷನ್ – ಕಲ್ಪನಾ ಜಂಕ್ಷನ್ ಬಲ ತಿರುವು – ಚಂದ್ರಿಕಾ ಜಂಕ್ಷನ್ – ಎಡ ತಿರುವು – ಅಯ್ಯಪ್ಪಸ್ವಾಮಿ ಟೆಂಪಲ್ – ಉದಯ ಟಿವಿ ಜಂಕ್ಷನ್ ಕಡೆಯಿಂದ – ಎಡ ತಿರುವು – ಎಂ.ವಿ. ಜಯರಾಂ ರಸ್ತೆ ಅಥವಾ ನೇರ – ಜಯಮಹಲ್ ರಸ್ತೆ ಅಥವಾ ಬಲ ತಿರುವು ರೈಲ್ವೆ ಸ್ಪಷನ್ ರಸ್ತೆ – ಕಂಟೋನ್ಮಂಟ್ ಮೂಲಕ ಫ್ರೇಜರ್ ಟೌನ್ ಅಥವಾ ಕ್ವೀನ್ಸ್ ರಸ್ತೆಯ ಮೂಲಕ ತೆರಳಬಹುದು.

ಎಸ್ಎಸ್ಎಂಆರ್ವಿ ಕಾಲೇಜುಸಂಚಾರ ನಿರ್ಬಂಧಿತ ರಸ್ತೆಗಳು :

  • 18ನೇ ಮುಖ್ಯ ರಸ್ತೆ ಮತ್ತು 28ನೇ ಮುಖ್ಯ ರಸ್ತೆಯ ಮಧ್ಯದಲ್ಲಿ ಬರುವ 36ನೇ ಕ್ರಾಸ್
  • 32ನೇ ಇ ಕ್ರಾಸ್ ರಸ್ತೆ ಮತ್ತು 39ನೇ ಕ್ರಾಸ್ ರಸ್ತೆ ಜಂಕ್ಷನ್ ನಡುವೆ ಬರುವ 26ನೇ ಮುಖ್ಯ ರಸ್ತೆ

ಸಂಚಾರಕ್ಕೆ ಪರ್ಯಾಯ ಮಾರ್ಗಗಳು : ಈಸ್ಟ್ ಎಂಡ್ ಮುಖ್ಯ ರಸ್ತೆ, 39ನೇ ಕ್ರಾಸ್ ರಸ್ತೆ, 18ನೇ ಮುಖ್ಯ ರಸ್ತೆ, 32ನೇ ಇ-ಕ್ರಾಸ್ ರಸ್ತೆಗಳನ್ನು ಬಳಸಬಹುದು

ಸೇಂಟ್ ಜೋಸೆಫ್ ಕಾಲೇಜುವಾಹನಗಳ ನಿಲುಗಡೆ ನಿಷೇಧಿತ ರಸ್ತೆಗಳು :

  • ವಿಠಲ್ ಮಲ್ಯ ರಸ್ತೆ – ಸಿದ್ದಲಿಂಗಯ್ಯ ವೃತ್ತದಿಂದ ರಿಚ್ಮಂಡ್ ಜಂಕ್ಷನ್​ವರೆಗೆ
  • ಆರ್.ಆರ್.ಎಂ.ಆರ್ ರಸ್ತೆ – ರಿಚ್ಮಂಡ್ ಸರ್ಕಲ್​ನಿಂದ ಹಡ್ಸನ್ ಜಂಕ್ಷನ್ ತನಕ
  • ಎನ್.ಆರ್ ರಸ್ತೆ – ಹಡ್ಸನ್ ಸರ್ಕಲ್​ನಿಂದ ಟೌನ್ ಹಾಲ್ ಜಂಕ್ಷನ್​ವರೆಗೆ
  • ಕೆ.ಬಿ ರಸ್ತೆ – ಹೆಚ್​ಎಲ್​ಡಿ ಜಂಕ್ಷನ್​ನಿಂದ ಕ್ವೀನ್ಸ್ ಜಂಕ್ಷನ್ ತನಕ
  • ಕೆ.ಜಿ ರಸ್ತೆ – ಪೊಲೀಸ್ ಕಾರ್ನರ್ ಜಂಕ್ಷನ್​ನಿಂದ ಮೈಸೂರು ಬ್ಯಾಂಕ್ ಜಂಕ್ಷನ್​​ವರೆಗೆ
  • ನೃಪತುಂಗ ರಸ್ತೆ – ಕೆ.ಆರ್ ಜಂಕ್ಷನ್​ನಿಂದ ಪೊಲೀಸ್ ಕಾರ್ನರ್​​ವರೆಗೆ
  • ಕ್ವೀನ್ಸ್ ರಸ್ತೆ – ಬಾಳೇಕುಂದ್ರಿ ಸರ್ಕಲ್​ನಿಂದ ಸಿ.ಟಿ.ಒ ಸರ್ಕಲ್​ ತನಕ
  • ಸೆಂಟ್ರಲ್ ಸ್ಟ್ರೀಟ್ ರಸ್ತೆ – ಬಿ.ಆರ್.ವಿ ಜಂಕ್ಷನ್​ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ
  • ಎಂ.ಜಿ ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಜಂಕ್ಷನ್​ವರೆಗೆ

ವಾಹನಗಳ ನಿಲುಗಡೆಗೆ ಅವಕಾಶವಿರುವ ಸ್ಥಳ

  • ಸೇಂಟ್ ಜೋಸೆಫ್ ಕಾಲೇಜು ಮೈದಾನ
  • ಕಂಠೀರವ ಸ್ಟೇಡಿಯಂ ಪಾರ್ಕಿಂಗ್ ಸ್ಥಳ

ಇದನ್ನೂ ಓದಿ : ಕೆಲಹೊತ್ತಿನಲ್ಲೇ ಲೋಕಸಭಾ ಎಲೆಕ್ಷನ್​​​ ಕೌಂಟಿಂಗ್ ಶುರು – ಬೆಂಗಳೂರಿನ 3 ಮತಎಣಿಕೆ ಕೇಂದ್ರಗಳಲ್ಲಿ ಹೇಗಿದೆ ಸಿದ್ಧತೆ?

 

 

 

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here