ಬಾಗಲಕೋಟೆ : ಬಾಗಲಕೋಟೆಯಲ್ಲಿ ಯುವಕನ ಕತ್ತುಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಜಮಖಂಡಿಯ ಸಿದ್ದಾಪುರ ಗ್ರಾಮದ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
24 ವರ್ಷದ ಅನೀಸ್ ಬುಖಾರೆ ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಎಸ್ಪಿ ಅಮರನಾಥ ರೆಡ್ಡಿ, ಡಿ.ವೈಎಸ್ಪಿ ಶಾಂತವೀರ ಭೇಟಿ ಕೊಟ್ಟಿದ್ದು, ಕೂಡಲೇ ಹಂತಕರನ್ನು ಅರೆಸ್ಟ್ ಮಾಡೋದಾಗಿ ಹೇಳಿದ್ದಾರೆ.
ಸ್ಥಳಕ್ಕೆ ಎಸ್ಪಿ ಅಮರನಾಥ ರೆಡ್ಡಿ, ಡಿ.ವೈಎಸ್ಪಿ ಶಾಂತವೀರ, ಸಿಪಿಐ ಮಲ್ಲಪ್ಪ ಮಡ್ಡಿ, ಜಮಖಂಡಿ ಗ್ರಾಮೀಣ ಠಾಣೆ ಪಿ.ಎಸ್.ಐ ಮಹೇಶ ಸಂಖ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಜಮಖಂಡಿ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ BMTC ಬಸ್ ಹರಿದು ಯುವಕ ಸ್ಥಳದಲ್ಲೇ ಸಾ*ವು..! – BTV Kannada
Post Views: 1,430