Download Our App

Follow us

Home » ರಾಷ್ಟ್ರೀಯ » ಸಂಸತ್​​ ಸಮರದ ಮಹಾ ತೀರ್ಪಿಗೆ ಕೌಂಟ್​ಡೌನ್ ​- ದೇಶದ ಗದ್ದುಗೆ ಯಾರ ಪಾಲಾಗಲಿದೆ?

ಸಂಸತ್​​ ಸಮರದ ಮಹಾ ತೀರ್ಪಿಗೆ ಕೌಂಟ್​ಡೌನ್ ​- ದೇಶದ ಗದ್ದುಗೆ ಯಾರ ಪಾಲಾಗಲಿದೆ?

ನವದೆಹಲಿ : ವಿಶ್ವದ ಅತಿದೊಡ್ಡ ಸಾರ್ವತ್ರಿಕ ಚುನಾವಣೆ ಈ ಬಾರಿ ಭಾರತದಲ್ಲಿ ನಡೆದಿದೆ. 2024ರ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದ್ದು, ಇದೀಗ ಲೋಕಸಭಾ ಮಹಾಯುದ್ಧದ ಮಹಾ ತೀರ್ಪಿಗೆ ಕೌಂಟ್​ಡೌನ್​ ಶುರುವಾಗಿದೆ. ಸಂಸತ್​ ಚುನಾವಣೆಯ ರಿಸಲ್ಟ್​ಗಾಗಿ ಇಡೀ ಭಾರತವೇ ಕಾಯುತ್ತಿದ್ದು, ದೇಶದ ಗದ್ದುಗೆ ಯಾರ ಪಾಲಾಗಲಿದೆ. ಮತ್ತೆ ಪ್ರಧಾನಿ ಮೋದಿ ಹ್ಯಾಟ್ರಿಕ್ ಬಾರಿಸುತ್ತಾರಾ? ರಾಹುಲ್​ ಗಾಂಧಿಗೆ ಲಕ್​ ಕುದುರುತ್ತಾ ಎಂಬ ಪ್ರಶ್ನೆಗಳು ಜನರಲ್ಲಿ ಮೂಡಿದೆ.

ಕಳೆದ 82 ದಿನಗಳಿಂದ 7 ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರ ಯಾರ ಪರವಾಗಿ ತೀರ್ಪು ನೀಡಿದ್ದಾನೆ, ಯಾರಿಗೆ ಮತದಾರ ಜೈ ಎಂದಿದ್ದಾನೆ ಅನ್ನೋದು ಇಂದು ಬಹಿರಂಗವಾಗಲಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆ ಇಂದು (ಜೂನ್ 4) ಬೆಳಗ್ಗೆ 8 ಗಂಟೆಗೆ ನಡೆಯಲಿದ್ದು, ಇದರೊಂದಿಗೆ ಈ ಬಾರಿ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ಈ ಬಾರಿ ಇಂಡಿಯ (INDIA) ಬಣ ಮತ್ತು ಎನ್​ಡಿಎ (NDA) ಒಕ್ಕೂಟದ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿಗೆ ಅಧಿಕಾರ ಸಿಗಲು ಬಿಡಬಾರದು ಎಂದು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಒಂದಾಗಿ I.N.D.I.A ಬಣವನ್ನು ರಚಿಸಿದ್ದವು. ಆದರೆ, ವಿಪಕ್ಷಗಳ ಒಗ್ಗಟ್ಟಿನ ಹೋರಾಟದ ನಡುವೆಯೂ ಬಿಜೆಪಿ ನೇತೃತ್ವದ NDA ಮತ್ತೊಮ್ಮೆ ಸರ್ಕಾರ ರಚಿಸಿ, ನರೇಂದ್ರ ಮೋದಿ 3ನೇ ಅವಧಿಗೆ ಪ್ರಧಾನ ಮಂತ್ರಿಯಾಗುವುದು ಖಚಿತ ಎಂದು ಹೇಳುತ್ತಿವೆ.

ಈಗಾಗಲೇ ಎಕ್ಸಿಟ್ ಪೋಲ್ ಸಮೀಕ್ಷೆಗಳು ಕೂಡ ಎನ್​ಡಿಎ ಭಾರೀ ಬಹುಮತದಿಂದ ಅಧಿಕಾರಕ್ಕೇರಲಿದೆ ಎಂದು ಹೇಳಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಾಳಯದಲ್ಲಿ ಈಗಾಗಲೇ ಸಂಭ್ರಮಾಚರಣೆಗಳು ಶುರುವಾಗಿದೆ. ಆದ್ರೆ, ಕಾಂಗ್ರೆಸ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

ಒಟ್ಟಿನಲ್ಲಿ ಎಕ್ಸಿಟ್ ಪೋಲ್ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿರೋ ಹೊತ್ತಲ್ಲೇ, ಇದೀಗ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಮತ ಎಣಿಕೆ ಕೇಂದ್ರಗಳು ಸಜ್ಜಾಗಿದ್ದು, ಮತದಾರರ ಒಲವು ಯಾರ ಮೇಲಿದೆ ಅನ್ನೋದನ್ನ ಕಾದುನೋಡಬೇಕಿದೆ. ಅಧಿಕಾರ ಯಾರ ಕೈ ಸೇರಲಿದೆ ಎಂದು ಸಂಜೆ ವೇಳೆಗೆ ಗೊತ್ತಾಗಲಿದೆ.

ಇದನ್ನೂ ಓದಿ : ಪೋಸ್ಟಲ್​​​ ವೋಟ್ ಗೊಂದಲಕ್ಕೆ ತೆರೆ ಎಳೆದ ಚುನಾವಣಾ ಆಯೋಗ..!

 

 

 

 

Leave a Comment

DG Ad

RELATED LATEST NEWS

Top Headlines

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ

Live Cricket

Add Your Heading Text Here