Download Our App

Follow us

Home » ಸಿನಿಮಾ » ಸದ್ದಿಲ್ಲದೆ ಹಸೆಮಣೆ ಏರಿದ್ರಾ ‘ಮಿಲನಾ’ ನಟಿ ಪಾರ್ವತಿ? ಮದುವೆ ಫೋಟೋಸ್​ ವೈರಲ್..!

ಸದ್ದಿಲ್ಲದೆ ಹಸೆಮಣೆ ಏರಿದ್ರಾ ‘ಮಿಲನಾ’ ನಟಿ ಪಾರ್ವತಿ? ಮದುವೆ ಫೋಟೋಸ್​ ವೈರಲ್..!

ಮಿಲನಾ ಚಿತ್ರದ ಮುಖೇನ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪಾರ್ವತಿ ಮೆನನ್ ಮಳೆ ಬರಲಿ ಮಂಜೂ ಇರಲಿ, ಪೃಥ್ವಿ ಮತ್ತು ಅಂದರ್ ಬಾಹರ್‌ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದರು. ತಮ್ಮ ಸಹಜ ನಟನೆಯ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದ ನಟಿ, ಸದ್ಯ ಖಾಸಗಿ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ಹೌದು, 36 ವರ್ಷದ ಪಾರ್ವತಿ ಮೆನನ್ ಮತ್ತು ಪ್ರಶಾಂತ್ ಮುರಳಿ ಮದುವೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಂಪು ಸೀರೆ ಧರಿಸಿ ಪಕ್ಕಾ ಮಲಯಾಳಿ ರೀತಿಯಲ್ಲಿ ಪಾರ್ವತಿ ಕಾಣಿಸಿಕೊಂಡರೆ ಗ್ರೇ ಆಂಡ್ ವೈಟ್ ಕಾಂಬಿನೇಷನ್‌ ಸೂಟ್‌ನಲ್ಲಿ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ. ಈ ವೈರಲ್​​ ಆದ ಮದುವೆ ಫೋಟೋವನ್ನು ಕಂಡ ನೆಟ್ಟಿಗರು ಫುಲ್​​​ ಶಾಕ್​​​ ಆಗಿದ್ದು, ಪಾರ್ವತಿ ಸದ್ದಿಲ್ಲದೇ ಮದುವೆಯಾದ್ರ ಅನ್ನುವ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.

ಆದರೆ ರಿಯಲ್​​​ ವಿಷಯ ಏನೆಂದರೆ ವೈರಲ್ ಆದ ಈ ಮದುವೆ ಫೋಟೋಗಳು ಪಾರ್ವತಿ ಮೆನನ್ ಅವರ ಖಾಸಗಿ ಬದುಕಿನದ್ದಲ್ಲ ಬದಲಿಗೆ ಸಿನಿಮಾಗೆ ಸಂಬಂಧಿಸಿದ್ದು. ಇದು ಅವರ ಮುಂದಿನ ಸಿನಿಮಾ ‘ಮೆಲ್ಲೋಜುಕ್ಕು’ ಫೋಟೋ ಎನ್ನಲಾಗಿದ್ದು, ಈ ಚಿತ್ರದಲ್ಲಿ ಪ್ರಶಾಂತ್ ಮುರಳಿ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ರಿಸ್ಟೋ ಟಾಮಿ ನಿರ್ದೇಶನ ಇರುವ ಈ ಚಿತ್ರದ 45 ಸೆಕೆಂಡ್‌ನ ಪ್ರೋಮೋ ಒಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಬಿಡುಗಡೆಯಾದ ಈ ಪ್ರೋಮೋದಲ್ಲಿ ಪಾರ್ವತಿ ಮೆನನ್ ಮತ್ತು ಪ್ರಶಾಂತ್ ಮುರಳಿ ನವ ದಂಪತಿಗಳ ಪಾತ್ರಗಳನ್ನ ನಿರ್ವಹಿಸಿದ್ಧಾರೆ. ರೀಲ್‌ನಲ್ಲಿ ಆಗಷ್ಟೇ ಮದುವೆಯಾದ ಹಿನ್ನೆಲೆ ದೋಣಿಯಲ್ಲಿ ಕುಳಿತು ಕ್ಯಾಮರಾಗಳಿಗೆ ಫೋಸ್ ನೀಡಿದ್ದಾರೆ. ಹೀಗೆ ತೆಗೆಯಲಾದ ಈ ಫೋಟೋಗಳೇ ಇದೀಗ ಸಾಮಾಜಿಕ ಜಾಲತಾಣ ಸಖತ್​​ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಡಾ.ಎಸ್ ನಾರಾಯಣ್ ನಿರ್ದೇಶನದ ನೂತನ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು..!

 

 

 

 

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here