Download Our App

Follow us

Home » ಅಪರಾಧ » ಮಹಿಳೆ ಕಿಡ್ನಾಪ್ ಕೇಸ್​ : ಭವಾನಿ ರೇವಣ್ಣ ಬಂಧನಕ್ಕೆ ಮೂರು ರಾಜ್ಯಗಳಲ್ಲಿ SIT ಟೀಂ ಸರ್ಚಿಂಗ್..!

ಮಹಿಳೆ ಕಿಡ್ನಾಪ್ ಕೇಸ್​ : ಭವಾನಿ ರೇವಣ್ಣ ಬಂಧನಕ್ಕೆ ಮೂರು ರಾಜ್ಯಗಳಲ್ಲಿ SIT ಟೀಂ ಸರ್ಚಿಂಗ್..!

ಬೆಂಗಳೂರು : ಕೆ.ಆರ್ ನಗರ ಸಂತ್ರಸ್ತೆ ಕಿಡ್ನಾಪ್​ ಕೇಸ್​ನಲ್ಲಿ ಸಿಲುಕಿ ತಲೆ ಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರಿಗಾಗಿ ವಿಶೇಷ ತನಿಖಾ ತಂಡ (SIT) ಹುಡುಕಾಟ ಮುಂದುವರೆಸಿದೆ. ಶನಿವಾರ ದಿನವಿಡೀ ಹಾಸನ ಜಿಲ್ಲೆ ಹೊಳೆ ನರಸೀಪುರದಲ್ಲಿರುವ ಚನ್ನಮ್ಮಾಂಬಿಕ ನಿವಾಸದಲ್ಲಿ ಕಾದಿದ್ದ ಎಸ್‌ಐಟಿ ತಂಡ ಬರಗೈಲಿ ವಾಪಾಸಾಗಿತ್ತು.

ಭಾನುವಾರ ಕೂಡ ಅವರಿಗಾಗಿ SIT ಹುಡುಕಾಟವನ್ನು ನಿಲ್ಲಿಸಲಿಲ್ಲ. ಭವಾನಿ ಅವರು ಹಾಸನ, ಮೈಸೂರು ಇಲ್ಲವೇ ಬೆಂಗಳೂರಿನ ಸಂಬಂಧಿಕರ ಮನೆಗಳಲ್ಲಿ ಇರಬಹುದು ಎಂದು ಎಸ್‌ಐಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರಳಿದ್ದರು. ಆದ್ರೆ ಅಲ್ಲಿಯೂ ಭಾವಾನಿ ಇರಲಿಲ್ಲ.

ಇದೀಗ SIT ರಚಿಸಿರುವ ಮೂರು ತಂಡಗಳು ಪ್ರತ್ಯೇಕವಾಗಿ ಭವಾನಿ ರೇವಣ್ಣ ಅವರ ಪತ್ತೆಗೆ ಮುಂದಾಗಿವೆ. ಮೂರು ರಾಜ್ಯಗಳಲ್ಲಿ ಭವಾನಿ ರೇವಣ್ಣಗಾಗಿ ಶೋಧ ನಡೆಸಲಾಗುತ್ತಿದೆ. SIT ಟೀಂ ತಮಿಳುನಾಡು, ಆಂಧ್ರ, ಕೇಂದ್ರಕ್ಕೆ ತೆರಳಿದೆ. ತಮಿಳುನಾಡಿನ ರೇಸಾರ್ಟ್​ನಲ್ಲಿ ಭವಾನಿ ತಂಗಿರುವ ಮಾಹಿತಿಯಿದೆ. ಈ ಸಂಬಂಧ ಮಾಹಿತಿ ಕಲೆ ಹಾಕಿ ವಿಶೇಷ ತಂಡ ಅಲ್ಲಿಗೆ ತೆರಳಿದೆ.

ನಿರೀಕ್ಷಣಾ ಜಾಮೀನು ವಜಾ ಆದ್ಮೇಲೆ ಭವಾನಿ ರೇವಣ್ಣ ಎಸ್ಕೇಪ್​​ ಆಗಿದ್ದು, ಭವಾನಿ ರೇವಣ್ಣ ಎಲ್ಲಿ ಅಡಗಿದ್ದಾರೆ ಎಂದು ಹುಡುಕಾಟ ನಡೆಸಲಾಗುತ್ತಿದೆ. SIT, DySP ನೇತೃತ್ವದ ಟೀಂ ರೇಸಾರ್ಟ್, ದೇವಾಸ್ಥಾನ, ಸಂಬಂಧಿಕರ ಮನೆಗಳ ಮೇಲೆ ನಿಗಾ ಇರಿಸಿದೆ. ಇನ್ನು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಭವಾನಿ ತಯಾರಿ ನಡೆಸಿದ್ದು, ಇಂದೇ ಭವಾನಿ ಪರ ವಕೀಲರು ಹೈಕೋರ್ಟ್ ಮೊರೆ ಹೋಗೋ ಸಾಧ್ಯತೆಯಿದೆ. ಕೋರ್ಟ್​ನಲ್ಲಿ ರಿಲೀಫ್​ ಪಡೆಯೋ ಮುನ್ನವೇ SIT ಅರೆಸ್ಟ್​ಗೆ ತಯಾರಿ ನಡೆಸಿದೆ.

ಇದನ್ನೂ ಓದಿ : ದಾಸರಹಳ್ಳಿ : ಕಾಳಸಂತೆಯಲ್ಲಿ ಅಕ್ರಮವಾಗಿ ಮದ್ಯ ಮಾರಟ – ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ..!

 

 

 

 

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here