Download Our App

Follow us

Home » ಮೆಟ್ರೋ » ನೈಋತ್ಯ ಮಾನ್ಸೂನ್ ಎಫೆಕ್ಟ್ : ಬಿರುಗಾಳಿ ಮಳೆ ಹೊಡೆತಕ್ಕೆ ಬೆಚ್ಚಿಬಿದ್ದ ಬೆಂಗಳೂರು – 200ಕ್ಕೂ ಹೆಚ್ಚು ಮರಗಳು ಧರೆಗೆ..!

ನೈಋತ್ಯ ಮಾನ್ಸೂನ್ ಎಫೆಕ್ಟ್ : ಬಿರುಗಾಳಿ ಮಳೆ ಹೊಡೆತಕ್ಕೆ ಬೆಚ್ಚಿಬಿದ್ದ ಬೆಂಗಳೂರು – 200ಕ್ಕೂ ಹೆಚ್ಚು ಮರಗಳು ಧರೆಗೆ..!

ಬೆಂಗಳೂರು : ಕೆಲವು ದಿನಗಳಿಂದ ಶಾಂತವಾಗಿದ್ದ ವರುಣ, ಜೂನ್​ ತಿಂಗಳ ಆರಂಭದಲ್ಲೇ ಬೆಂಗಳೂರಿಗೆ ಆಗಮಿಸಿದ್ದಾನೆ. ನೈಋತ್ಯ ಮಾನ್ಸೂನ್ ಎಫೆಕ್ಟ್​ನಿಂದಾಗಿ ನಿನ್ನೆ ಸಂಜೆ ನಗರದ ಹಲವೆಡೆ ಗಾಳಿ ಸಹಿತ ಭಾರೀ ಮಳೆಯಾಗಿದೆ. ಮೆಜೆಸ್ಟಿಕ್​​, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್​ಹಾಲ್​​, ಕೆ.ಆರ್​.ಮಾರ್ಕೆಟ್​ , ಕಾರ್ಪೊರೇಷನ್​​, ಶಿವಾಜಿನಗರ, ಯಲಹಂಕ, ಹಲಸೂರು, ಇಂದಿರಾನಗರ ಸುತ್ತಮುತ್ತ ಭರ್ಜರಿ ಮಳೆಯಾಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇತ್ತ ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದವು. ಜೊತೆಗೆ ಬಿರುಗಾಳಿಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದೆ.

ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿದ್ದು, 133 ವರ್ಷದ ದಾಖಲೆಯನ್ನು ಸರಿಗಟ್ಟಿ ನಿನ್ನೆ ಒಂದೇ ದಿನ 111 ಮಿಲಿ ಮೀಟರ್ ಧಾರಾಕಾರ​ ಮಳೆ ಸುರಿದೆದೆ. ಸಂಜೆಯಿಂದ ಶುರುವಾದ ಮಳೆಗೆ ಸಿಲಿಕಾನ್​ ಸಿಟಿ ಮಂದಿ ನಡುಗಿ ಹೊಗಿದ್ದಾರೆ.

 

ಯಾವ ರಸ್ತೆಗೆ ಕಾಲಿಟ್ಟರೂ ನೀರು ಪ್ರವಾಹದಂತೆ ಹರೀತಿತ್ತು. KR ಮಾರ್ಕೆಟ್, ಮೆಜೆಸ್ಟಿಕ್, ಕೆಪಿ ಅಗ್ರಹಾರ, ಜಯನಗರ, ರಾಜಾಜಿನಗರ, ಕೋರಮಂಗಲ, ಮಡಿವಾಳ, ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳಲ್ಲಿ 2-3 ಅಡಿಯಷ್ಟು ನೀರು ನಿಂತಿತ್ತು. ಇಡೀ ರಸ್ತೆಗಳೇ ಕೆರೆಗಳಾಗಿದ್ದವು. ಅಂಗಡಿ, ಮನೆಗಳಿಗೂ ಮೋರಿ ನೀರು ನುಗ್ಗಿದ್ದವು.

ಮಳೆಯ ಅಬ್ಬರಕ್ಕೆ ಅಂಡರ್​ಪಾಸ್​ಗಳು ತುಂಬಿ ಹೋಗಿದ್ದವು. ಕಿನೋ ಟಾಕೀಸ್ ಅಂಡರ್​ಪಾಸ್​ನಲ್ಲಿ BMTC ಬಸ್ ಸಿಲುಕಿತ್ತು. ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಸಿ ರಕ್ಷಣೆ ಮಾಡಲಾಗಿದೆ. ತಕ್ಷಣವೇ ಹೈಗ್ರೌಂಡ್ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ನೀರು ಕಡಿಮೆಯಾದ ನಂತರ BMTC ಬಸ್ ತೆರವು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಗಂಟೆಗ 40 ಕಿಮೀ ವೇಗದಲ್ಲಿ ಗಾಳಿ ಬೀಸಿದ ಪರಿಣಾಮ ಬುಡ ಸಮೇತ ಮರಗಳು ಧರೆಗುರುಳಿವೆ. BBMP ವ್ಯಾಪ್ತಿಯಲ್ಲೇ ಬರೋಬ್ಬರಿ 200ಕ್ಕೂ ಹೆಚ್ಚು ಮರ ಧರೆಗುರುಳಿದೆ. ಮರಬಿದ್ದು ಬೈಕ್​​, ಕಾರ್​ಗಳು ಜಖಂ ಆಗಿವೆ. ವಾಹನಗಳು ಗಂಟೆಗಟ್ಟಲೇ ಟ್ರಾಫಿಕ್​ನಲ್ಲೇ ನಿಲ್ಲುವಂತಾಗಿತ್ತು.

ಈವರೆಗೂ ಸುಮಾರು 60ಕ್ಕೂ ಹೆಚ್ಚು ಮರಗಳನ್ನು BBMP ತೆರವುಗೊಳಿಸಿದೆ. ದಕ್ಷಿಣ ವಲಯದಲ್ಲಿ 60 ಮರ, R.R ನಗರದಲ್ಲಿ 30 ಮರ, ಬೊಮ್ಮನಹಳ್ಳಿ ವಲಯದಲ್ಲಿ 20 ಮರ, ಪಶ್ಚಿಮ ವಲಯದಲ್ಲಿ 25 ಮರ, ಮಹದೇವಪುರ ವಲಯದಲ್ಲಿ 10 ಮರ, ಯಲಹಂಕ ವಲಯದಲ್ಲಿ 20 ಮರ, ಪೂರ್ವ ವಲಯದಲ್ಲಿ 30 ಮರ, ದಾಸರಹಳ್ಳಿ ವಲಯದಲ್ಲಿ 15 ಮರ ಧರೆಗುರುಳಿದೆ.

Metro ಹಳಿ ಮೇಲೆ ಮರ ಬಿದ್ದು ಸಂಚಾರ ಸ್ಥಗಿತ : ಬಿರುಗಾಳಿ ಸಹಿತ ಮಳೆಯಿಂದಾಗಿ ನಗರದ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಟ್ರಿನಿಟಿ ನಿಲ್ದಾಣದಿಂದ ಎಂಜಿ ರಸ್ತೆ ಕಡೆ ಹೋಗುವ ಮಾರ್ಗದಲ್ಲಿ ಮರವೊಂದು ಮೆಟ್ರೋ ರೈಲು ಹಳಿ ಮೇಲೆ ಬಿದ್ದಿ ಪರಿಣಾಮ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇಂದಿರಾನಗರದಿಂದ ವೈಟ್‌ಫೀಲ್ಡ್ ಮತ್ತು ಎಂಜಿ ರಸ್ತೆಯಿಂದ ಚಲ್ಲಘಟ್ಟದ ​​ನಡುವೆ ಮಾತ್ರ ರೈಲುಗಳು ರಾತ್ರಿ 7.26 ರಿಂದ ಕಾರ್ಯನಿರ್ವಹಿಸುತ್ತಿದ್ದವು. ಸದ್ಯ ಹಳಿ ಮೇಲೆ ಬಿದ್ದಿರುವ ಮರ ಕೊಂಬೆಗಳನ್ನು ತೆರವು ಮಾಡಲಾಗಿದ್ದು, ಮೆಟ್ರೋ ಸಂಚಾರ ಆರಂಭಿಸಲಾಗಿದೆ.

ಇದನ್ನೂ ಓದಿ : ಡಾ.ಎಸ್ ನಾರಾಯಣ್ ನಿರ್ದೇಶನದ ನೂತನ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು..!

 

 

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here