Download Our App

Follow us

Home » ಅಪರಾಧ » ಅಕ್ರಮಗಳ ಕೂಪವಾಯ್ತಾ ಬೆಂಗಳೂರಿನ ಗುಡ್​ವಿಲ್ ಕಾಲೇಜು ?

ಅಕ್ರಮಗಳ ಕೂಪವಾಯ್ತಾ ಬೆಂಗಳೂರಿನ ಗುಡ್​ವಿಲ್ ಕಾಲೇಜು ?

ಬೆಂಗಳೂರು : ಬೆಂಗಳೂರಿನ ನಾಗರಬಾವಿಯ GOODWILL ಕಾಲೇಜು ಕರ್ಮಕಾಂಡವೊಂದು ಇದೀಗ ಬಯಲಾಗಿದೆ. ಕಾಂಪ್ಲೆಕ್ಸ್​ನಂಥಾ ಕಟ್ಟಡದಲ್ಲಿ ನಡೀತಿರುವ ಗುಡ್​ವಿಲ್ ಕಾಲೇಜು ಅಕ್ರಮ ಅಡ್ಮಿಷನ್ ಮಾಡಿಸುತ್ತಿದ್ದು, ಸತ್ಯ ಗೊತ್ತಿಲ್ದೆ ವಿದ್ಯಾರ್ಥಿಗಳು ಈ ಕಾಲೇಜಿಗೆ ಜಾಯಿನ್ ಅಗುತ್ತಿದ್ದಾರೆ.

ಆದರೆ ಇದೀಗ ಬಿಟಿವಿ ಗುಡ್​ವಿಲ್ ಕಾಲೇಜಿನ ಅಕ್ರಮಗಳ ಖಜಾನೆ ಬಿಚ್ಚಿಟ್ಟಿದೆ. ಬೆಂಗಳೂರಿನ ಗುಡ್​ವಿಲ್ ಕಾಲೇಜು ಅಕ್ಕಪಕ್ಕದವರ ಭೂಮಿ ತೋರಿಸಿ ಶಿಕ್ಷಣ ಇಲಾಖೆಗೆ ವಂಚನೆ ಮಾಡಿತ್ತು. ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ವಂಚಿಸಿರೋ ಗುಡ್​ವಿಲ್ ಕಾಲೇಜುಗೆ DDPU ಭೇಟಿ ನೀಡಿದ್ದಾಗ ಸತ್ಯ ಒಪ್ಪಿಕೊಂಡಿದ್ದ ಕಾಲೇಜು ಆಡಳಿತ, ಕಾಲೇಜು ಮುಚ್ಚಿ, ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡ್ತೀವಿ ಎಂದು ತಿಳಿಸಿತ್ತು.

DDPU ನೋಟಿಸ್ ಬೆನ್ನಲ್ಲೇ  ಕಾಲೇಜು ಮುಚ್ಚುತ್ತೇವೆ ಎಂದು ಸ್ವತ: ಕಾಲೇಜು ಟ್ರಸ್ಟ್ ಬರೆದುಕೊಟ್ಟಿತ್ತು. ಆದರೆ ಇದೀಗ ಏಕಾಏಕಿ ಅಡ್ಮಿಷನ್ ಆರಂಭಿಸಿ, ನಿಗದಿತ ಮೂಲಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳಿಂದ ಎಜುಕೇಶನ್ ಟ್ರಸ್ಟ್ ಕೋಟಿ ಕೋಟಿ ಫೀಸ್ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಬಿಟಿವಿಗೆ DDPU ನೋಟಿಸ್ ಹಾಗೂ ಕಾಲೇಜು ಮುಚ್ಚಳಿಕೆ ಪತ್ರ ಕೂಡ ಲಭ್ಯವಾಗಿದೆ.

ಆದರೆ ಇದೀಗ ಬೆಂಗಳೂರಿನ ಗುಡ್​ವಿಲ್ ಕಾಲೇಜು ಅಕ್ರಮದಲ್ಲಿ DDPU ಆನಂದ್ ರಾಜ್ ಭಾಗಿಯಾಗಿದ್ದಾರ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಯಾವುದೇ ಸೌಕರ್ಯಗಳಿಲ್ಲದಿದ್ರೂ ಕಾಲೇಜು ಆರಂಭಿಸಿದ್ದ ಟ್ರಸ್ಟ್​​​ಗೆ DDPU ಆನಂದರಾಜು ಅವರಿಂದ ಸಹಿಯಿದೆ. ಕಿಕ್​ಬ್ಯಾಕ್ ಪಡೆದು ಕಾಲೇಜಿಗೆ ಅವಕಾಶ ಕೊಟ್ರಾ ಎಂಬ ಪ್ರಶ್ನೆ ಎದ್ದಿದ್ದು, ಆನಂದರಾಜು ವಿರುದ್ಧ ಪಿಯು ನಿರ್ದೇಶಕರಿಗೆ ದೂರು ನೀಡಿ ಕಠಿಣ ಕ್ರಮಕ್ಕೆ ಮನವಿ ಮಾಡಲಾಗಿದೆ. 

ಇದನ್ನೂ ಓದಿ : KGF ನಟಿ ರವೀನಾ ಟಂಡನ್​ ಮೇಲೆ ಹ*ಲ್ಲೆ..!  

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here