Download Our App

Follow us

Home » ಅಪರಾಧ » ಪ್ರಜ್ವಲ್ ತನಿಖೆ ಚುರುಕುಗೊಳಿಸಿದ SIT ಅಧಿಕಾರಿಗಳು – ಮೊಬೈಲ್ ಪತ್ತೆ ಮಾಡೋದೆ SITಗೆ ದೊಡ್ಡ ಚಾಲೆಂಜ್..!

ಪ್ರಜ್ವಲ್ ತನಿಖೆ ಚುರುಕುಗೊಳಿಸಿದ SIT ಅಧಿಕಾರಿಗಳು – ಮೊಬೈಲ್ ಪತ್ತೆ ಮಾಡೋದೆ SITಗೆ ದೊಡ್ಡ ಚಾಲೆಂಜ್..!

ಬೆಂಗಳೂರು :  ಹಾಸನ ಅಶ್ಲೀಲ​ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್​ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್​ 6 ದಿನಗಳ ಕಾಲ ಎಸ್​​ಐಟಿ ವಶಕ್ಕೆ ನೀಡಿದೆ. ಇದರ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿರುವ ಎಸ್​​ಐಟಿ ಅಧಿಕಾರಿಗಳಿಗೆ ಪ್ರಜ್ವಲ್ ಮೊಬೈಲ್ ಪತ್ತೆ ಮಾಡೋದೆ ದೊಡ್ಡ ಚಾಲೆಂಜ್​​ ಆಗಿದೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್​​ಐಟಿ ಮೊಬೈಲ್ IMEI ನಂಬರ್ ಪಡೆದು ಮತ್ತೆ‌ ಮೊಬೈಲ್ ಪತ್ತೆಗೆ ಮುಂದಾಗಿದೆ. ಆದರೆ ಮೊಬೈಲ್​​ ಪತ್ತೆಗೆ ಮುಂದಾದ ಎಸ್​​ಐಟಿಗೆ ವೀಡಿಯೋ ರೆಕಾರ್ಡ್ ಮಾಡಿದ ಮದರ್ ಡಿವೈಸ್ (ಮೊಬೈಲ್) ಸಿಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

ಅಶ್ಲೀಲ​ ವಿಡಿಯೋ ಪ್ರಕರಣದಲ್ಲಿ ಅರೆಸ್ಟ್​ ಆಗಿರುವ ಪ್ರಜ್ವಲ್​ನನ್ನು ಕೋರ್ಟ್​ ಎಸ್​ಐಟಿ ಕಸ್ಟಡಿಗೆ ಕೊಡ್ತಿದ್ದಂತೆ, ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ರಾತ್ರಿ 10 ಗಂಟೆವರೆಗೂ ಪ್ರಜ್ವಲ್​ಗೆ ಪ್ರಕರಣದ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರಂತೆ. ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಮೊಬೈಲ್ ಬಗ್ಗೆ ಎಸ್​​ಐಟಿ ವಿಚಾರಿಸಿದಾಗ ಒಂದು ವರ್ಷದ ಹಿಂದೆಯೇ ಮೊಬೈಲ್ ಕಳೆದುಹೋಗಿದೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.

ಮೊಬೈಲ್ ಕಳೆದು ಹೋಗಿದ್ದೇ ನಾನು ಸ್ಥಳೀಯ ಠಾಣೆಯಲ್ಲೂ ದೂರು ನೀಡಿದ್ದೇ. KSP ಆಪ್ ಮೂಲಕವೂ ಳೆದ ವರ್ಷದ ಮಾರ್ಚ್ 29 ರಂದು ತನ್ನ ಪಿಎ ಭರತ್ ರಾಜ್ ಮೂಲಕ ದೂರು ದಾಖಲಿಸಿದ್ದೆ. ಇನ್ನು ಪೊಲೀಸರು ಕೂಡ ಕೇಸ್ ದಾಖಲಿಸಿ ಮೊಬೈಲ್ ಪತ್ತೆಗೆ ಮುಂದಾಗಿದ್ದರು ಎಂದು ತಿಳಿಸಿದ್ದಾರೆ. ಪ್ರಜ್ವಲ್ ಹೇಳಿಕೆ ಬೆನ್ನಲ್ಲೇ ಎಸ್​​​ಐಟಿ ಅಧಿಕಾರಿಗಳು ಹೊಳೆನರಸೀಪುರ ಪೊಲೀಸರ ಸಂಪರ್ಕ ಮಾಡಿ ಮೊಬೈಲ್ ಕಳೆದೋದ ಬಗ್ಗೆ ದೂರು ದಾಖಲಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಆದ್ರೆ ಎಷ್ಟೇ ಹುಡುಕಿದ್ರು ಮೊಬೈಲ್ ಸಿಕ್ಕಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್​​ ರೇವಣ್ಣ ಪೆನ್​​ಡ್ರೈವ್​​​​​​ ಪ್ರಕರಣ – SIT ವಿಚಾರಣೆಗೆ ಹಾಜರಾದ JDS ಶಾಸಕ ಎ.ಮಂಜು..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here