ಕೇರಳ : ಚಿನ್ನ ಸ್ಮಗ್ಲಿಂಗ್ ಮಾಡೋದನ್ನೇ ಹವ್ಯಾಸ ಮಾಡಿಕೊಂಡಿದ್ದ ಗಗನಸಖಿಯನ್ನು ಕೇರಳದ ಕಣ್ಣೂರು ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಏರ್ ಹೋಸ್ಟಸ್ ಆಗಿದ್ದ ಸುರಭಿ ಖಾತುನ್ ತನ್ನ ಬಲ ತೊಡೆಯ ಗುಪ್ತ ಸ್ಥಳದಲ್ಲಿ 1 ಕೆಜಿ ಚಿನ್ನದ ಗಟ್ಟಿ ಇಟ್ಟುಕೊಂಡು ಅಕ್ರವಾಗಿ ಸಾಗಿಸುತ್ತಿದ್ದಳು. ಕಣ್ಣೂರು ಏರ್ಪೋರ್ಟ್ನಲ್ಲಿ ಈಕೆಯ ಬಳಿ ಚಿನ್ನ ಇರೋದು ಪತ್ತೆಯಾಗಿದೆ.
ಇದೇ ರೀತಿ ಈ ಹಿಂದೆಯೂ ಹಲವು ಬಾರಿ ಸುರಭಿ ಚಿನ್ನ ಸ್ಮಗ್ಲಿಂಗ್ ಮಾಡಿದ್ದ ಆರೋಪ ಹೊತ್ತಿದ್ದಳು. ಮಸ್ಕಟ್ನಿಂದ ಬಂದಿದ್ದ ವಿಮಾನದಲ್ಲಿ ಚಿನ್ನ ತರಲಾಗಿತ್ತು. ಈಕೆಯನ್ನು ಬಂಧಿಸಿ 14 ದಿನಗಳ ಕಸ್ಟಡಿಗೆ ನೀಡಲಾಗಿದೆ.
ಇದನ್ನೂ ಓದಿ : ಬಿಜೆಪಿ ವಿರುದ್ದ ಅವಹೇಳನಕಾರಿ ಜಾಹೀರಾತು ಪ್ರಕರಣ : ಸಿಎಂ, ಡಿಸಿಎಂಗೆ ಜಾಮೀನು ಮಂಜೂರು ಮಾಡಿದ ಕೋರ್ಟ್..!
Post Views: 269