Download Our App

Follow us

Home » ರಾಜಕೀಯ » ಬಿಜೆಪಿ ವಿರುದ್ದ ಅವಹೇಳನಕಾರಿ ಜಾಹೀರಾತು ಪ್ರಕರಣ : ಸಿಎಂ, ಡಿಸಿಎಂಗೆ​ ಜಾಮೀನು ಮಂಜೂರು ಮಾಡಿದ ಕೋರ್ಟ್​..!

ಬಿಜೆಪಿ ವಿರುದ್ದ ಅವಹೇಳನಕಾರಿ ಜಾಹೀರಾತು ಪ್ರಕರಣ : ಸಿಎಂ, ಡಿಸಿಎಂಗೆ​ ಜಾಮೀನು ಮಂಜೂರು ಮಾಡಿದ ಕೋರ್ಟ್​..!

ಬೆಂಗಳೂರು : ಬಿಜೆಪಿ ವಿರುದ್ದ ಅವಹೇಳನಕಾರಿ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ 42 ನೇ ACMM ಕೋರ್ಟ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್​​ಗೆ ಬೇಲ್​​ ಮಂಜೂರು ಮಾಡಿದೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾಹೀರಾತು ಮೂಲಕ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಸಿಎಂ ಹುದ್ದೆಗಾಗಿ 2500 ಕೋಟಿ, ಮಂತ್ರಿ ಸ್ಥಾನಕ್ಕಾಗಿ 500 ಕೋಟಿ ರೂಪಾಯಿ ಹಣವನ್ನು ಬಿಜೆಪಿ ಹೈಕಮಾಂಡ್​ಗೆ ನೀಡಿ ರಾಜ್ಯ ಬಿಜೆಪಿ ನಾಯಕರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರೊಂದಿಗೆ ಶೇ 40 ರಷ್ಟು ಸೇರಿದಂತೆ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಲ್ಲಿ ಕಮೀಷನ್ ಡೀಲ್ ಮಾಡಿಕೊಂಡಿದೆ ಎಂದು ಕಾಂಗ್ರೆಸ್​ ಆರೋಪ ಮಾಡಿತ್ತು.

2023ರ ಮೇ 5ರಂದು ಜಾಹೀರಾತು ಪ್ರಕಟ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿಯ ಕೇಶವಪ್ರಸಾದ್, ಕಾಂಗ್ರೆಸ್​ ನಾಯಕರ ವಿರುದ್ದ ಮಾನನಷ್ಟ ಮೊಕದ್ದಮೆ, ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಯನ್ನು ಪ್ರತಿವಾದಿಯಾಗಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆಯಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಇಂದು ನ್ಯಾಯಾಧೀಶರ ಮುಂದೆ  ಹಾಜರಾಗಿದ್ದರು. ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಖುದ್ದು
ಹಾಜರಾದ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೆ ರಾಹುಲ್​​ ಗಾಂಧಿ ಹಾಜರಾಗದ ಹಿನ್ನಲೆ ಕೋರ್ಟ್ ಖುದ್ದು ಹಾಜರಾಗಲು ಸೂಚನೆ ನೀಡಿದ್ದು, ಹಾಜರಾಗದೇ ಇದ್ರೆ ವಾರೆಂಟ್​ ಹೊರಡಿಸೋ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ​​: SITಯಿಂದ ಇಬ್ಬರು ಅಧಿಕಾರಿಗಳ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here