ಬೆಂಗಳೂರು : ಮದ್ಯ ಪ್ರಿಯರಿಗೆ ಇದು ಕಹಿ ಸುದ್ದಿ. ಯಾಕಂದ್ರೆ ಇಂದು ಸಂಜೆಯಿಂದಲೇ ಬೆಂಗಳೂರಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಸಂಪೂರ್ಣ ಬಂದ್ ಆಗಲಿವೆ. MLC ಚುನಾವಣೆ ಹಾಗೂ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಜೂನ್ 1ರ ಸಂಜೆಯಿಂದ ಜೂನ್ 6ರವರೆಗೆ ಬಾರ್ಗಳು ಬಂದ್ ಆಗಲಿವೆ. ವೀಕೆಂಡ್ನಲ್ಲೇ ಬಾರ್ ಅಂಗಡಿಗಳು ಕ್ಲೋಸ್ ಆಗುತ್ತಿರುವುದರಿಂದ ಮದ್ಯ ಪ್ರಿಯರಿಗೆ ಬೇಸರ ತಂದಿದೆ.
ಜೂನ್ 3ರಂದು ಪದವೀಧರರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಇಂದು ಸಂಜೆ 4 ಗಂಟೆಯಿಂದ ಜೂನ್ 3ರವರೆಗೆ ಬಾರ್ಗಳು ಕ್ಲೋಸ್ ಇರಲಿವೆ. ಜೂನ್ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇದ್ದು, ಅಂದು ರಾಜ್ಯದಲ್ಲಿ ಎಲ್ಲ ಮಾದರಿಯ ಬಾರ್ ಅಂಡ್ ರೆಸ್ಟೋರೆಂಟ್ ವೈನ್ ಶಾಪ್ ಕ್ಲೋಸ್ ಆಗಲಿವೆ. ಜೂನ್ 6 ರಂದು ಎಂಎಲ್ಸಿ ಎಲೆಕ್ಷನ್ ಮತ ಎಣಿಕೆ ಇರೋದ್ರಿಂದ ಬೆಂಗಳೂರಿನಲ್ಲಿ ಬಾರ್ ಮತ್ತು ವೈನ್ಶಾಪ್ಗಳು ಕ್ಲೋಸ್ ಆಗ್ತವೆ.
ಬೆಂಗಳೂರಿನಲ್ಲಿ ಪದವಿ ಕ್ಷೇತ್ರ ಚುನಾವಣೆಗೆ 36 ಸಾವಿರದಷ್ಟು ಮಾತ್ರ ಮತದಾರರಿದ್ದಾರೆ. ಆದ್ರೆ 5 ದಿನ ಬಾರ್ ಬಂದ್ ಮಾಡುವುದರಿಂದ ಹೊಡೆತ ಬೀಳಲಿದೆ ಎಂದು ಬಾರ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. 5 ದಿನ ಎಣ್ಣೆ ಸಿಗಲ್ಲ ಎನ್ನುವ ನೋವು ಒಂದ್ಕಡೆ ಆದ್ರೆ, ಬಾರ್ ಮಾಲೀಕರು ಕದ್ದು ಮುಚ್ಚಿ ದುಪ್ಪಟ್ಟು ಹಣಕ್ಕೆ ಮದ್ಯ ಮಾರಾಟ ಮಾಡುತ್ತಾರೆ ಎನ್ನುವ ನೋವು ಮದ್ಯ ಪ್ರಿಯರದ್ದಾಗಿದೆ.
ಇದನ್ನೂ ಓದಿ : ನಿರೀಕ್ಷಣಾ ಜಾಮೀನು ಅರ್ಜಿ ವಜಾ – ಇವತ್ತೇ ಅರೆಸ್ಟ್ ಆಗ್ತಾರಾ ಭವಾನಿ ರೇವಣ್ಣ?