Download Our App

Follow us

Home » ಅಪರಾಧ » ರೇವಣ್ಣ ಕುಟುಂಬಕ್ಕಿಂದು ನಿರ್ಣಾಯಕ ದಿನ – ಅಪ್ಪ, ಅಮ್ಮ, ಮಗನ ಬೇಲ್​ ಭವಿಷ್ಯ ಇಂದೇ ನಿರ್ಧಾರ..!

ರೇವಣ್ಣ ಕುಟುಂಬಕ್ಕಿಂದು ನಿರ್ಣಾಯಕ ದಿನ – ಅಪ್ಪ, ಅಮ್ಮ, ಮಗನ ಬೇಲ್​ ಭವಿಷ್ಯ ಇಂದೇ ನಿರ್ಧಾರ..!

ಬೆಂಗಳೂರು : ಅತ್ಯಾಚಾರ, ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಇಂದು (ಶುಕ್ರವಾರ) ನಡೆಯಲಿದೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಸೇರಿ ಎಫ್‌ಐಆರ್‌ ದಾಖಲಾಗಿರುವ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ವಕೀಲರಾದ ಅರುಣ್ ಮೂಲಕ ಮೇ 29ರಂದು ಜನಪ್ರತಿನಿಧಿಗಳ ಕೋರ್ಟ್‌ಗೆ ಪ್ರಜ್ವಲ್‌ ರೇವಣ್ಣ ಫಾರಿನ್​​ನಿಂದಲೇ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಯಲಿದೆ.

ಭವಾನಿ ರೇವಣ್ಣ ಬೇಲ್‌ ಭವಿಷ್ಯವೂ ಇಂದೇ : ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಪತ್ನಿ ಭವಾನಿ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತ ತೀರ್ಪು ಕೂಡ (ಶುಕ್ರವಾರ) ಇಂದು ಹೊರಬೀಳಲಿದೆ. ಇದೀಗ ಭವಾನಿ ರೇವಣ್ಣ ಅವರಿಗೂ ಬಂಧನ ಭೀತಿ ಎದುಗಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದಿಗೆ ಕಾಯ್ದಿರಿಸಿದೆ. ನಿರೀಕ್ಷಣಾ ಜಾಮೀನು ನೀಡಿದರೆ ಭವಾನಿ ರೇವಣ್ಣ ಅವರು ಜೈಲಿಗೆ ಹೋಗುವುದು ತಪ್ಪಲಿದೆ. ಆದರೆ, ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ ಭವಾನಿ ಅವರು ಜೈಲಿಗೆ ಹೋಗುವುದು ಖಚಿತವಾಗಲಿದೆ. ಮಹಿಳೆಯ ಅಪಹರಣ ಕೇಸ್​ನಲ್ಲಿ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರು ಬಂಧನಕ್ಕೊಳಗಾಗಿ ಜಾಮೀನು ಪಡೆದುಕೊಂಡಿದ್ದಾರೆ.

ಹೆಚ್​.ಡಿ.ರೇವಣ್ಣಗೂ ಇಂದು ನಿರ್ಣಾಯಕ ದಿನ : ಮಹಿಳೆಯ ಅಪಹರಣ ಕೇಸ್​ನಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ರೇವಣ್ಣಗೆ ನೀಡಿರುವ ಬೇಲ್​ ರದ್ದು ಕೋರಿ SIT ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ತನಿಖೆ ವೇಳೆ ಸಂಗ್ರಹಿಸಿರುವ ಹೆಚ್ಚಿನ ಸಾಕ್ಷ್ಯ ಆಧರಿಸಿ SIT ಮನವಿ ಮಾಡಿದ್ದು, ಇಂದು ಹೈಕೋರ್ಟ್​ನಲ್ಲಿ SIT ಸಲ್ಲಿಸಿರುವ ಅರ್ಜಿ ವಿಚಾರಣೆಯಾಗಲಿದೆ. ಎರಡು ಪ್ರಕರಣಗಳಲ್ಲಿ ರೇವಣ್ಣ  ಈಗಾಗಲೇ ಜಾಮೀನು ಪಡೆದಿದ್ದಾರೆ. ಇಂದು ಹೈಕೋರ್ಟ್​ನಲ್ಲಿ ರೇವಣ್ಣ ಬೇಲ್​ ರದ್ದು ಮಾಡುವಂತೆ SIT ಪರ ವಕೀಲರು ವಾದ ಮಂಡಿಸಲಿದ್ದಾರೆ. SIT ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರೇವಣ್ಣ ಪರ ವಕೀಲರು ಸಿದ್ದತೆ ನಡೆಸಿದ್ದಾರೆ.

ಇನ್ನು, ಬರೋಬ್ಬರಿ ಒಂದು ತಿಂಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣರನ್ನ ನಿನ್ನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡರಾತ್ರಿ ಬಂಧಿಸಲಾಗಿದೆ.  ಜರ್ಮನಿಯಿಂದ ದೇವನಹಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಆಗಮಿಸುತ್ತಲೇ ಇಮಿಗ್ರೇಷನ್ ಅಧಿಕಾರಿಗಳು ಪ್ರಜ್ವಲ್​ನನ್ನು ವಿಚಾರಣೆ ನಡೆಸಿ, ಎಸ್‌ಐಟಿ ಅಧಿಕಾರಿಗಳಿಗೆ ವಹಿಸಿದ್ದಾರೆ. ಬಳಿಕ ಎಸ್‌ಐಟಿ ಕಚೇರಿಗೆ ಕರೆದೊಯ್ದಿದ್ದಾರೆ.

ಇದನ್ನೂ ಓದಿ : ಕೊನೆಗೂ ಪ್ರಜ್ವಲ್‌ ರೇವಣ್ಣ ಅರೆಸ್ಟ್ – ಎಸ್‌ಐಟಿ ಮುಂದಿನ ತನಿಖೆ ಪ್ರಕ್ರಿಯೆ ಏನು?

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here