ಬೆಂಗಳೂರು: ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರೋ ಪ್ರಜ್ವಲ್ ರೇವಣ್ಣ, ಇದೇ ಮೇ 31ರಂದು ಎಸ್ಐಟಿ ಮುಂದೆ ಹಾಜರಾಗೋದಾಗಿ ವಿಡಿಯೋ ಮೂಲಕ ಹೇಳಿಕೆ ನೀಡಿದ್ದರು.
ಅದರಂತೆ, ಜರ್ಮನಿಯ ಮ್ಯೂನಿಕ್ ನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಪ್ರಜ್ವಲ್ ಅವರ ಹೆಸರಿನಲ್ಲಿ ಫ್ಲೈಟ್ ಟಿಕೆಟ್ ಬುಕ್ ಆಗಿತ್ತು. ಇದೀಗ ಮ್ಯೂನಿಚ್ ಏರ್ಪೋರ್ಟ್ಗೆ ಪ್ರಜ್ವಲ್ ರೇವಣ್ಣ ಎರಡು ಟ್ರ್ಯಾಲಿ ಬ್ಯಾಗ್ ಸಮೇತ ಚೆಕ್ಇನ್ ಆಗಿದ್ದಾರೆ. ಈ ಮೂಲಕ ಪ್ರಜ್ವಲ್ ರೇವಣ್ಣ ವಾಪಸ್ ಆಗೋದು ಕನ್ಫರ್ಮ್ ಆಗಿದೆ.
ಇದೀಗ ಪ್ರಜ್ವಲ್ ರೇವಣ್ಣ ಇಮಿಗ್ರೇಷನ್ ಮುಗಿಸಿ ಫ್ಲೈಟ್ ಏರಿದ್ದು, ಮ್ಯೂನಿಕ್ ಏರ್ಪೊರ್ಟ್ನಲ್ಲಿ ವಿಮಾನ ಟರ್ಮಿನಲ್-2ನಿಂದ ಟೇಕ್ ಆಫ್ ಆಗಿದೆ. ಲುಫ್ತಾನ್ಸಾ ವಿಮಾನ 7147 ಕಿಲೋ ಮೀಟರ್ ದೂರದಿಂದ ಬರಲಿದ್ದು, ಬೆಂಗಳೂರಿಗೆ ತಲುಪಲು ಬರೋಬ್ಬರಿ 8 ಗಂಟೆ 20 ನಿಮಿಷ ಬೇಕು ಎಂದು ತಿಳಿದು ಬಂದಿದೆ. ಪ್ರಜ್ವಲ್ ರೇವಣ್ಣ ವಿಮಾನದ ಸೀಟ್ ನಂಬರ್ 3-Kನಲ್ಲಿರುವ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ : ಮೈಸೂರು : ಲಂಚ ಸ್ವೀಕರಿಸುತ್ತಿದ್ದ ಲೇಡಿ PSI ಲೋಕಾಯುಕ್ತ ಬಲೆಗೆ..!