ಹಾಸನ : ಪ್ರಜ್ವಲ್ ವಾಪಸ್ ಹೊತ್ತಲ್ಲೇ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಹಾಸನದಲ್ಲಿರುವ ಸಂಸದ ಪ್ರಜ್ವಲ್ ನಿವಾಸದಲ್ಲಿ ಪರಿಶೀಲನೆ ನಡೆದಿದೆ. SIT ಟೀಂ ಪ್ರಜ್ವಲ್ ಬೆಡ್ ರೂಂನ ಹಾಸಿಗೆ, ದಿಂಬು ವಶಕ್ಕೆ ಪಡೆದಿದೆ. ಹಾಸನದ ಪ್ರಜ್ವಲ್ ನಿವಾಸದಲ್ಲಿ ವಿಧಿ ವಿಜ್ಞಾನ ತಜ್ಞ(FSL)ರ ಜೊತೆ ತೆರಳಿ SIT ಪರಿಶೀಲನೆ ನಡೆಸಿದೆ.
SIT, FSL ಟೀಂ ಸತತ 10 ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದು, ಪ್ರಜ್ವಲ್ ಬೆಡ್ರೂಂನ ಹಾಸಿಗೆ, ದಿಂಬು, ಹೊದಿಕೆಯನ್ನು SIT ಕೊಂಡೊಯ್ದಿದೆ. ಹಾಗೆಯೇ ಬೆಡ್ರೂಂನಲ್ಲಿದ್ದ ಹಲವು ವಸ್ತುಗಳನ್ನೂ ವಶಕ್ಕೆ ಪಡೆದಿದ್ದು, ಮಹತ್ವದ ದಾಖಲೆ ಸಂಗ್ರಹಿಸಲು SIT ಮುಂದಾಗಿದೆ.
ವಿಧಿ ವಿಜ್ಞಾನ ತಜ್ಞರು ಪೂರಕ ಸಾಕ್ಷ್ಯ ಕಲೆ ಹಾಕಿದ್ದು, ಸಾಕ್ಷ್ಯಗಳ ಸಮೇತ SIT ಟೀಂ ಬೆಂಗಳೂರಿಗೆ ಹೊರಟಿದೆ. ಹಾಸನ ನಗರ ಠಾಣೆ ಪೊಲೀಸರ ನೆರವು ಪಡೆದು SIT ಟೀಂ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ : ಸಂತ್ರಸ್ತೆ ಕಿಡ್ನಾಪ್ ಕೇಸ್ : ಇಂದು ಭವಾನಿ ರೇವಣ್ಣ ಬೇಲ್ ಅರ್ಜಿ ವಿಚಾರಣೆ..!
Post Views: 392