Download Our App

Follow us

Home » ಅಪರಾಧ » ಬೆಂಗಳೂರು : ಪೊಲೀಸ್​ ಸಿಬ್ಬಂದಿಯಿಂದಲೇ ಹೆಡ್​ ಕಾನ್ಸ್​ಟೇಬಲ್​ ವಿರುದ್ಧ ದೂರು..!

ಬೆಂಗಳೂರು : ಪೊಲೀಸ್​ ಸಿಬ್ಬಂದಿಯಿಂದಲೇ ಹೆಡ್​ ಕಾನ್ಸ್​ಟೇಬಲ್​ ವಿರುದ್ಧ ದೂರು..!

ಬೆಂಗಳೂರು : ಹೆಡ್ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಸಿಬ್ಬಂದಿಗಳೇ ಕಮೀಷನರ್​​ಗೆ ದೂರು ನೀಡಿದ ಘಟನೆಯೊಂದು ನಡೆದಿದೆ. ಹೆಡ್ ಕಾನ್ಸ್‌ಟೇಬಲ್ ಜನಾರ್ದನ ಕಾಟಕ್ಕೆ ಬೇಸತ್ತ ಜೊತೆಯಲ್ಲಿದ್ದ ಸಿಬ್ಬಂದಿಗಳು ಈತನ ವಿರುದ್ದ ಪೊಲೀಸ್ ಕಮಿಷನರ್​ ಬಿ.ದಯಾನಂದ್​ ಅವರಿಗೆ ದೂರು ನೀಡಿದ್ದಾರೆ.

ಸದ್ಯ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಸ್.ಬಿ ಕೆಲಸ ಮಾಡ್ತಿರುವ ಹೆಚ್ ಸಿ-11126 ಜನಾರ್ದನ್ ವಿರುದ್ಧ ಈ ಮೊದಲು ಲಂಚ, ಮಂತ್ಲಿ ಕಲೆಕ್ಷನ್, ಹಣ ವಸೂಲಿ,ಲ್ಯಾಂಡ್ ಡೀಲಿಂಗ್,ವೇಶ್ಯಾವಾಟಿಕೆಗೆ ಪರ್ಮಿಷನ್ ಸೇರಿದಂತೆ ಹಲವು ಆರೋಪ ಕೇಳಿ ಬಂದಿತ್ತು.

2018 ರಲ್ಲಿ  ಮೈಕೊ ಲೇಔಟ್ ಠಾಣೆಯಲ್ಲಿ ಎಸ್ ಬಿ ಕೆಲಸ ಮಾಡ್ತಿದ್ದ ಜನಾರ್ದನ್‌ ವೇಶ್ಯಾವಾಟಿಕೆ ನಡೆಸಲು ಅನುಮತಿ ನೀಡಿ ಹಣ ವಸೂಲಿ ಮಾಡ್ತಿದ್ದ. ಈ ಪ್ರಕರಣದಲ್ಲಿ ಜನಾರ್ಧನ ನನ್ನ ಅಂದಿನ ಅಧಿಕಾರಿಗಳು ಸಸ್ಪೆಂಡ್ ಮಾಡಿದ್ರು. ಸ್ಥಳಿಯ ರಾಜಕಾರಣಿಗಳ ಚೇಲ ಆಗಿದ್ದ ಜನಾರ್ಧನ ಸಸ್ಪೆಂಡ್ ರಿಓಕ್ ಮಾಡಿಸಿಕೊಂಡಿದ್ದ. ನಂತರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಸ್ ಬಿ ಕೆಲಸ ಶುರುಮಾಡಿದ್ದ. ಅಲ್ಲಿಯೂ ಸಹ ತನ್ನ ಹಳೇ ಚಾಳಿ ಮುಂದುವರೆಸಿ ದೊಡ್ಡ ಕಂಪನಿಯೊಂದರಿಂದ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ತಗ್ಲಾಕೊಂಡಿದ್ದ. ಈ ವಿಚಾರ ಮೇಲಾಧಿಕಾರಿಗಳಿಗೆ ಗೊತ್ತಾಗಿ ಜನಾರ್ದನ್ ಎರಡನೇ ಬಾರಿ ಮತ್ತೆ ಸಸ್ಪೆಂಡ್ ಆಗಿದ್ದ.

ಆದರೆ ಎರಡು ಬಾರಿ ಸಸ್ಪೆಂಡ್ ಆದ್ರು ಬುದ್ದಿ ಕಲಿಯದ ಪೊಲೀಸಪ್ಪ ಮಡಿವಾಳ ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟು ಮತ್ತದೇ ಇಲ್ಲಿಯೋ ತನ್ನ ಚಾಳಿ ಮುಂದುವರೆಸಿದ್ದಾನೆ. ಸ್ಥಳೀಯ ನಾಯಕರುಗಳ ಜೊತೆ ಸಂಪರ್ಕ ಹೊಂದಿರೊ ಈತ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಸ್ ಬಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ.

ಅಲ್ಲದೆ ಮಡಿವಾಳದ ಗಂಗೋತ್ರಿ ಸರ್ಕಲ್ ಬಳಿಯ ಖಾಲಿ ನಿವೇಶನಕ್ಕೂ ಜನಾರ್ದನ ಕೈಹಾಕಿದ್ದಾನಂತೆ. ಈ ಕೇಸ್ ಕೋರ್ಟನಲ್ಲಿ ವಿಚಾರಣೆಯಲ್ಲಿದ್ರು ಸ್ಥಳೀಯ ಲ್ಯಾಂಡ್ ಡೀಲರ್ಸ್ ಜೊತೆ ಸೇರಿ ಜೆಸಿಬಿ ಮೂಲಕ ಮನೆಗಳನ್ನ ನೆಲಸಮ ಮಾಡಿಸಿದ್ದಾನೆ. ಈ ವಿಚಾರದಲ್ಲಿ ದೂರು ನೀಡೋಕೆ ಬಂದವರನ್ನ ಬೆಳಿಗ್ಗೆಯಿಂದ ರಾತ್ರಿವರೆಗೂ ಕಾಯಿಸಿ ವಾಪಸ್ ಕಳುಹಿಸಿದ್ದಾನೆ.

ಇನ್ನು ಮಡಿವಾಳದ ಬುಲೇವಾಡಿ ಲಾಡ್ಜ್​​​ನಲ್ಲಿ ಹಣ ನೀಡದೆ 103 ರ ನಂಬರ್​​ನಲ್ಲಿ ರೂಮ್​​ ಮಾಡಿಕೊಂಡಿರುವ ಜನಾರ್ದನ ಮಡಿವಾಳದಲ್ಲಿ ಇಸ್ಪೀಟ್ ಅಡ್ಡೆ, ವೇಶ್ಯಾವಾಟಿಕೆ ನಡೆಸಲು ಕುಮ್ಮಕ್ಕು ನೀಡಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಅಲ್ಲದೆ, ತಾನು ಐಪಿಎಸ್ ಅಧಿಕಾರಿಯೊಬ್ಬರ ಶಿಷ್ಯ ಅಂತ ಹೇಳ್ಕೊತ್ತಿರುವ ಜನಾರ್ಧನ ಎರಡು ಬಾರಿ ಸಸ್ಪೆಂಡ್ ಆದ್ರು ಆಗ್ನೇಯ ವಿಭಾಗದಲ್ಲೇ ಕೆಲಸ ಮಾಡ್ತಿದ್ದಾನೆ. ಒಂದೆ ವಿಭಾಗದಲ್ಲಿ ಎರಡು ಬಾರಿ ಅಮಾನತು ಆದ್ರು ,ಅದೇ ವಿಭಾಗದಲ್ಲೆ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಇನ್ನು ಜೊತೆಯಲ್ಲಿ ಕೆಲಸ ಮಾಡ್ತಿರೋ ಪೊಲೀಸರ ಮೇಲೆಯೇ ದೌರ್ಜನ್ಯ ಮಾಡ್ತಿದ್ದಾನಂತೆ. ಸದ್ಯ ಈತನ ಕಾಟಕ್ಕೆ ನೊಂದಿರೊ ಪೊಲೀಸ್ ಸಿಬ್ಬಂದಿಗಳು ಆಯುಕ್ತರಿಗೆ ದೂರು ನೀಡಿದ್ದಾರೆ.

 

 

ಇದನ್ನೂ ಓದಿ : ಶಿಕ್ಷಣ ಇಲಾಖೆಯಲ್ಲಿ ಬಹುದೊಡ್ಡ ಕರ್ಮಕಾಂಡ – SSLC ಪರೀಕ್ಷೆಯಲ್ಲಿ ಒಂದಾ..ಎರಡಾ.. ಹತ್ತಾರು ಎಡವಟ್ಟು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here