Download Our App

Follow us

Home » ರಾಜ್ಯ » ಶಿಕ್ಷಣ ಇಲಾಖೆಯಲ್ಲಿ ಬಹುದೊಡ್ಡ ಕರ್ಮಕಾಂಡ – SSLC ಪರೀಕ್ಷೆಯಲ್ಲಿ ಒಂದಾ..ಎರಡಾ.. ಹತ್ತಾರು ಎಡವಟ್ಟು..!

ಶಿಕ್ಷಣ ಇಲಾಖೆಯಲ್ಲಿ ಬಹುದೊಡ್ಡ ಕರ್ಮಕಾಂಡ – SSLC ಪರೀಕ್ಷೆಯಲ್ಲಿ ಒಂದಾ..ಎರಡಾ.. ಹತ್ತಾರು ಎಡವಟ್ಟು..!

ಬೆಂಗಳೂರು : ಕೆಲವು  ದಿನಗಳ ಹಿಂದೆಯಷ್ಟೇ  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ-1ರ ಫಲಿತಾಂಶ ಹೊರಬಿದ್ದಿದೆ. ಆದರೆ ಪ್ರಕಟವಾದ SSLC ಪರೀಕ್ಷೆ ಫಲಿತಾಂಶದಲ್ಲಿ ಶಿಕ್ಷಣ ಇಲಾಖೆ ಒಂದಲ್ಲ, ಎರಡಲ್ಲ ಹತ್ತಾರು ಎಡವಟ್ಟು ಮಾಡಿವೆ.

ಎಸ್​ಎಸ್​ಎಲ್​ಸಿ ಪರೀಕ್ಷೆ-1ನ್ನು 2024ರ ಮಾರ್ಚ್ 25 ರಿಂದ ಏಪ್ರಿಲ್ 06 ರವರೆಗೆ ನಡೆಸಲಾಗಿತ್ತು. ಈ ವೇಳೆ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಈ ಬಾರಿ ಮಾತ್ರ ಶಿಕ್ಷಣ ಇಲಾಖೆ ಮನಸೋ ಇಚ್ಛೆ ಗ್ರೇಸ್​ ಮಾರ್ಕ್ಸ್ ನೀಡಿ ಮಹಾ ಎಡವಟ್ಟು ಮಾಡಿಕೊಂಡಿದೆ. ಇಷ್ಟು ಮಾತ್ರವಲ್ಲದೇ ಪರೀಕ್ಷೆ ರಿಸಲ್ಟ್​, ಆನ್ಸರ್​ ಶೀಟ್ ಫೋಟೋ ಕಾಫಿಗಳಲ್ಲೂ ಬೇಕಾಬಿಟ್ಟಿ ತಪ್ಪು ಮಾಡಿವೆ.

ಇನ್ನು ಗ್ರೇಸ್​ ಮಾರ್ಕ್ಸ್​ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್​​ ಗರಂ ಆಗಿದ್ದಾರೆ. ಮತ್ತೊಂದು ಕಡೆ ಇಲಾಖೆ ಮಾಡಿದ ಎಡವಟ್ಟಿನಿಂದ ಫಲಿತಾಂಶವೂ ಕುಸಿತ ಕಂಡಿದ್ದು, ಗ್ರೇಸ್​ ಮಾರ್ಕ್ಸ್​ ಮೇಲೆ ಹಲವು ವಿದ್ಯಾರ್ಥಿಗಳಲ್ಲಿ ಅನುಮಾನ ಶುರುವಾಗಿದೆ.

ಹೀಗಾಗಿ, ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು 3ರಿಂದ 4 ಸಬ್ಜೆಕ್ಟ್​ಗಳ ಫೋಟೋ ಕಾಪಿ ಕೇಳ್ತಿದ್ದಾರೆ. ಆದರೆ ಇದೀಗ ಫೋಟೋ ಕಾಪಿ ಒದಗಿಸಲೂ ಪರದಾಡುತ್ತಿರುವ ಶಿಕ್ಷಣ ಇಲಾಖೆ ಯಾರದ್ದೋ ಫೋಟೋ ಕಾಪಿ ಇನ್ಯಾರಿಗೋ ಕಳಿಸ್ತಿದ್ದಾರೆ. ಫೋಟೋ ಕಾಪಿ ಪಡೆಯೋ ಅವಧಿ ಮುಗಿದ ಮೇಲೂ ಅರ್ಜಿ ಬರ್ತಿವೆ. ಅವಧಿ ಮುಗಿದ ಹಿನ್ನೆಲೆಯಲ್ಲಿ ಹಲವು ಪೋಷಕರು, ಮಕ್ಕಳು ಪರದಾಡುತ್ತಿದ್ದಾರೆ.  ಇಂಥಾ ಪರಿಸ್ಥಿತಿ ನಿರ್ಮಾಣ ಮಾಡಿದ ಶಿಕ್ಷಣ ಸಚಿವರು ಬೇಕಾ. ಮುಖ್ಯಮಂತ್ರಿಗಳೇ ಶಿಕ್ಷಣ ಸಚಿವರನ್ನು ಬದಲಿಸಿ. ಇಲಾಖೆ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

ಮನಸೋ ಇಚ್ಛೆ ಗ್ರೇಸ್​ ಮಾರ್ಕ್ಸ್​ :

  • ಮನಸೋ ಇಚ್ಛೆ ಗ್ರೇಸ್ ಕೊಟ್ಟಿರೋ ಇಲಾಖೆ
  • ಈ ಬಾರಿ ಒಟ್ಟು 20 ಗ್ರೇಸ್ ಮಾರ್ಕ್ಸ್​ ನೀಡಿದ್ದ ಇಲಾಖೆ
  • ಪ್ರತಿ ವಿಷಯದಲ್ಲೂ ಕನಿಷ್ಟ 10 ಗ್ರೇಸ್ ಮಾರ್ಕ್ಸ್ ನೀಡಿ ತೇರ್ಗಡೆ
  • ವಿದ್ಯಾರ್ಥಿಗಳ ಅರ್ಹತೆ ಅಂಕ 25ಕ್ಕೆ ಇಳಿಸಿದ್ದ ಇಲಾಖೆ
  • 1.69 ಲಕ್ಷ ವಿದ್ಯಾರ್ಥಿಗಳು ಗ್ರೇಸ್​ ಮಾರ್ಕ್ಸ್​ ಆಧಾರದಲ್ಲೇ ಪಾಸ್​
  • ಚೆನ್ನಾಗಿ ಓದಿದ್ದ ಮಕ್ಕಳಲ್ಲಿ ಮಾರ್ಕ್ಸ್ ಬಗ್ಗೆ ಅನುಮಾನ
  • ಗ್ರೇಸ್​ ಮಾರ್ಕ್ಸ್ ಪದ್ಧತಿಯಿಂದ ತಮಗೆ ಅನ್ಯಾಯ ಎನ್ನುತ್ತಿರುವ ಕೆಲವರು
  • ಕನಿಷ್ಟ ಮೂರು ವಿಷಯಗಳಿಗೆ 20 ಗ್ರೇಸ್​ ಮಾರ್ಕ್ಸ್​ ನೀಡಲಾಗ್ತಿದೆ
  • 3 ವಿಷಯ ಫೇಲ್​ ಆಗಿದ್ರೆ 20 ಮಾರ್ಕ್ಸ್ ನೀಡಿ ಪಾಸ್​ ಮಾಡಲಾಗಿದೆ

ಫೋಟೋ ಕಾಪಿ ಪರದಾಟ :

  • ಪರೀಕ್ಷೆ ಫಲಿತಾಂಶದ ಬಗ್ಗೆಯೇ ಕೆಲವರಿಗೆ ಅನುಮಾನ
  • ಹೀಗಾಗಿ ಈ ಬಾರಿ ಫೋಟೋ ಕಾಪಿ ಪಡೆಯಲು ಕ್ಯೂ
  • ಈ ಬಾರಿ 3-4 ವಿಷಯಗಳಿಗೂ ಫೋಟೋ ಕಾಪಿ ಕೇಳ್ತಿದ್ದಾರೆ
  • ಸಾಮಾನ್ಯವಾಗಿ ಒಂದು ಸಬ್ಜೆಕ್ಟ್ ಫೋಟೋ ಕಾಪಿ ಕೇಳ್ತಿದ್ದರು
  • ಆದ್ರೆ ಈ ಬಾರಿ ಮಕ್ಕಳು ಹೆಚ್ಚು ವಿಷಯದ ಫೋಟೋ ಕಾಪಿ ಕೇಳಿದ್ದಾರೆ
  • ಈ ಬಾರಿ 62,033 ಅರ್ಜಿಗಳು ಫೋಟೋ ಕಾಪಿಗೆ ಬಂದಿವೆ
  • ಉತ್ತರ ಪತ್ರಿಕೆಗಳ ಫೋಟೋ ಕಾಪಿ ಪಡೆಯಲು ಸಾಲು-ಸಾಲು ಅರ್ಜಿ
  • ಹೊರಗುತ್ತಿಗೆ ಸಿಬ್ಬಂದಿ ನೇಮಿಸಿ ಫೋಟೋ ಕಾಪಿ ಕೊಡ್ತಿದೆ ಇಲಾಖೆ
  • ಒಂದೊಂದು ಫೋಟೋ ಕಾಪಿ ಪಡೆಯಲು 410ರೂ. ಕಟ್ಟಬೇಕು-
  • ಈವರೆಗೂ 10 ಕೋಟಿ ಶುಲ್ಕ ಸಂಗ್ರಹ ಮಾಡಿರುವ ಇಲಾಖೆ
  • ಆನ್​ಲೈನ್​​ನಲ್ಲಿ ಫೋಟೋ ಕಾಪಿ ಪಡೆಯಲು ನಿನ್ನೆ ಕೊನೆ
  • ಇಂದು ಖುದ್ದು ಬಂದು ಫೋಟೋ ಕಾಪಿ ಪಡೆಯಬೇಕು
  • ಬಹುತೇಕ ಮಕ್ಕಳಿಗೆ ಇನ್ನೂ ಫೋಟೋ ಕಾಪಿಗಳೇ ಸಿಕ್ಕಿಲ್ಲ
  • ಬ್ಯಾಂಕ್​​ನಲ್ಲಿ ಶುಲ್ಕ ಆಫ್​ಲೈನ್​ ಚಲನ್​ ತುಂಬಲು ಇಂದು ಕೊನೆ ದಿನ
  • ಈ ಪೋಟೋ ಕಾಪಿ ನೋಡಿ ಕೆಲವರು ಮರು ಪರೀಕ್ಷೆ ಬರೆಯಲು ಸಜ್ಜಾಗಿದ್ರು
  • ಈಗ ಸರಿಯಾಗಿ ಫೋಟೋ ಕಾಪಿ ಸಿಗದೇ ಸಾವಿರಾರು ಮಕ್ಕಳ ಪರದಾಟ

ಇದನ್ನೂ ಓದಿ : ಬೆಂಗಳೂರಲ್ಲಿ ಕಾರ್​ ಡ್ರೈವರ್​ನ​​ ಹುಚ್ಚಾಟ – ಮನ ಬಂದಂತೆ ಕಾರು ಓಡಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದ ಭೂಪ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here