Download Our App

Follow us

Home » ಸಿನಿಮಾ » ನೆಟ್ಟಿಗರ ನೆಗೆಟಿವ್ ಕಾಮೆಂಟ್ಸ್​ಗೆ ನೊಂದು ಗಳಗಳನೆ ಕಣ್ಣೀರಿಟ್ಟ ಯುಟ್ಯೂಬರ್ ಮಧು ಗೌಡ..!

ನೆಟ್ಟಿಗರ ನೆಗೆಟಿವ್ ಕಾಮೆಂಟ್ಸ್​ಗೆ ನೊಂದು ಗಳಗಳನೆ ಕಣ್ಣೀರಿಟ್ಟ ಯುಟ್ಯೂಬರ್ ಮಧು ಗೌಡ..!

ಸೋಷಿಯಲ್‌ ಮೀಡಿಯಾ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ರೀಲ್ಸ್‌ ಮೂಲಕವೇ ಸಾಕಷ್ಟು ಮಂದಿ ಫೇಮಸ್‌ ಆದವರಿದ್ದಾರೆ. ಅಷ್ಟೇ ಅಲ್ಲದೆ ಜನರಿಂದ ನೇಮು ಫೇಮು ಗಿಟ್ಟಿಸಿಕೊಂಡು ಪ್ರೀತಿ, ಪ್ರೇಮದ ವಿಚಾರವನ್ನೂ ಬಹಿರಂಗವಾಗಿ ಹೇಳಿಕೊಂಡವರಿದ್ದಾರೆ.

ಅಂತೆಯೇ ಕನ್ನಡದ ಯೂಟ್ಯೂಬರ್ಸ್ ನಿಖಿಲ್‌ ರವೀಂದ್ರ ಮತ್ತು ಮಧು ಗೌಡ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಬಳಿಕ ಈ ಜೋಡಿಯ ಎಂಗೇಜ್​ಮೆಂಟ್ ಕೂಡ ಇತ್ತೀಚಿಗೆ ಅದ್ಧೂರಿಯಾಗಿ ನಡೆದಿತ್ತು. ಇನ್ನು, ಈ ಜೋಡಿಯ ಮದುವೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಈ ನಡುವೆ ಬರುತ್ತಿರುವ ನೆಗೆಟಿವ್ ಕಾಮೆಂಟ್ಸ್‌ ನೋಡಿ ಮಧು ಬೇಸರ ತೋಡಿಕೊಂಡಿದ್ದಾರೆ.

ಹೌದು, ಮಧು ಗೌಡ ಯೂಟ್ಯೂಬ್ ಚಾನೆಲ್‌ ಹೊಂದಿದ್ದಾರೆ ಹಾಗೂ ನಿಖಿಲ್-ನಿಶಾ ಕೂಡ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಮಧು ಗೌಡ ಚಾಲೆನ್‌ನಲ್ಲಿ ಯಾವುದೇ ನೆಗೆಟಿವ್ ಕಾಮೆಂಟ್‌ ಬರುತ್ತಿಲ್ಲ ಆದರೆ ನಿಶಾ ಚಾನೆಲ್‌ನಲ್ಲಿ ಬರುತ್ತಿರುವ ಕಾರಣ ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯುಟ್ಯೂಬ್​ ವಿಡಿಯೋದಲ್ಲಿ ನೋವು ಹಂಚಿಕೊಂಡಿದ್ದಾರೆ.

“ನಿಶಾ ನಿಖಿಲ್‌ ವ್ಲಾಗ್‌ನಲ್ಲಿ ಮಾತನಾಡುವುದಕ್ಕೆ ಭಯ ಶುರುವಾಗಿದೆ. ದಿನ ವ್ಲಾಗ್ ಮಾಡುವುದಕ್ಕೆ ಮನಸ್ಸು ಇಲ್ಲ ಅಷ್ಟು ಬೇಜಾರ್ ಆಗಿದೆ. ಪರ್ಸನಲ್‌ ವಿಚಾರದ ಬಗ್ಗೆ ಕಾಮೆಂಟ್ ಮಾಡುತ್ತೀರಾ ಇದರಿಂದ ಎಮೋಷನಲ್‌ ಆಗಿ ಎಷ್ಟು ಕಷ್ಟ ಆಗುತ್ತಿದೆ ಎಂದು ಯಾರಿಗೂ ಅರ್ಥವಾಗುವುದಿಲ್ಲ.  ಆಫ್‌ ದಿ ಕ್ಯಾಮೆರಾ ನಾವು ಎಷ್ಟು ಚೆನ್ನಾಗಿದ್ದೀವಿ ಅನ್ನೋದು ನಮಗೆ ಗೊತ್ತಿದೆ ಅದನ್ನು ತೋರಿಸಿಕೊಳ್ಳಬೇಕು ಅನ್ನೋದು ಇಲ್ಲ.

ಕೇವಲ 10 % ಮಾತ್ರ ನಮ್ಮ ಜೀವನದ ಬಗ್ಗೆ ನೀವು ವಿಡಿಯೋದಲ್ಲಿ ನೋಡುವುದು. ನನ್ನ ಯುಟ್ಯೂಬ್‌ನಲ್ಲಿ ಕಾಮೆಂಟ್ ಬರಲ್ಲ ಆದರೆ ನಿಶಾ ಯುಟ್ಯೂಬ್‌ನಲ್ಲಿ ಬರೀ ನೆಗೆಟಿವ್ ಕಾಮೆಂಟ್ಸ್‌ ಶುರುವಾಗಿದೆ. ನನಗೆ ನಾಟಕ ಮಾಡಲು ಬರುವುದಿಲ್ಲ ನಾನು ಹೇಗಿದ್ದೀನಿ ಹಾಗೆ ಇರಬೇಕು’ ಎಂದು ಮಧು ಕಣ್ಣೀರಿಟ್ಟಿದ್ದಾರೆ. ನಿಶ್ಚಿತಾರ್ಥ ಆದ್ಮೇಲೆ ಇಷ್ಟೋಂದು ನೆಗೆಟಿವಿಟಿ ಬರ್ತಿದೆ ಯಾಕೆ ಅಂತ ಅರ್ಥವಾಗುತ್ತಿಲ್ಲ.

https://www.youtube.com/watch?v=yGMiLUAn-c4

ಆರಂಭದಲ್ಲಿ ನಾವು ಹೀಗೆ ಇದ್ವಿ ಆಗ ಏನೂ ಕಾಮೆಂಟ್ಸ್‌ ಬರುತ್ತಿರಲಿಲ್ಲ ಯಾವಾಗ ಮದುವೆ ಆಗುತ್ತಿದ್ದೀವಿ ನಿಶ್ಚಿತಾರ್ಥ ಆಯ್ತು ಅಲ್ಲಿಂದ ಶುರುವಾಯ್ತು. ನಮ್ಮಿಬ್ಬರ ನಡುವೆ ಏನೂ ಮನಸ್ಥಾಪ ಇಲ್ಲ ಏನೂ ಬದಲಾವಣೆ ಇಲ್ಲ ನಾವು ಆರಾಮ್ ಆಗಿದ್ದೀವಿ. ಪರ್ಸನಲ್‌ ಆಗಿ ನಾವು ಚೆನ್ನಾಗಿದ್ದೀವಿ ಭಯ ಶುರುವಾಗಿ ಕೈ ನಡುಕ ಶುರುವಾಗಿದೆ ಮಾತನಾಡಲು ಧೈರ್ಯ ಇಲ್ಲ. ಇದೊಂದು ರಿಲೇಶನ್‌ಶಿಪ್‌ ಮತ್ತು ಲೈಫ್‌ಲಾಂಗ್ ಇರುವ ಬಾಂಡಿಂಗ್ ಹೀಗಾಗಿ ಕಾಮೆಂಟ್ ಮಾಡಬೇಡಿ. ನಮ್ಮಿಬ್ಬರ ನಡುವೆ ಏನೂ ಇಲ್ಲ ಅಂದ್ರು ನೀವು ಮಾಡುವ ಕಾಮೆಂಟ್‌ ಅಥವಾ ಹೇಳುವ ವಿಚಾರದಿಂದ ನಮ್ಮಿಬ್ಬರ ಏನೋ ಶುರುವಾಗುತ್ತದೆ ಎಂದು ಮಧು ಹೇಳಿದ್ದಾರೆ.

ಇದನ್ನೂ ಓದಿ : ಪಾಪಗಳು ದೂರ ಆಗಬೇಕು ಅಂತ ಕೂದಲು ಕಟ್ ಮಾಡಿಸಿದ್ಯಾ? : ಸೋನು ಗೌಡರನ್ನು ಪ್ರಶ್ನಿಸಿದ ನೆಟ್ಟಿಗರು..!

Leave a Comment

DG Ad

RELATED LATEST NEWS

Top Headlines

ಅರಣ್ಯ ಇಲಾಖೆಯಲ್ಲಿ ಲಂಚದ ರೇಟ್ ​ಕಾರ್ಡ್.. ಅಪ್ರೈಸಲ್ ಕಮಿಟಿಯಲ್ಲಿ ಲಕ್ಷ ಲಕ್ಷ ಲೂಟಿ..!

ಬೆಂಗಳೂರು : ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಟೇಟ್ ಲೆವೆಲ್ ಎಕ್ಸ್​ಫರ್ಟ್​ ಅಪ್ರೈಸಲ್ ಕಮಿಟಿ ವಿರುದ್ದ ಇದೀಗ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ

Live Cricket

Add Your Heading Text Here