ಉತ್ತರ ಪ್ರದೇಶ : ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಅಧಿಕಾರಿಗಳು ಶೂ ಮಾರಾಟಗಾರನ ಮನೆ ಮೇಲೆ ರೇಡ್ ಮಾಡಿ ಸೂಕ್ತ ದಾಖಲೆ ಇಲ್ಲದ 40 ಕೋಟಿ ರೂ. ವಶಕ್ಕೆ ಪಡಿದ್ದಾರೆ. ಐಟಿ ಅಧಿಕಾರಿಗಳು ಶೂ ಟ್ರೇಡರ್ ರಾಮನಾಥ್ ದಾಂಗ್ ಮನೆ ಮೇಲೆ ದಾಳಿ ಮಾಡಿದ್ದಾರೆ.
ಐಟಿ ಅಧಿಕಾರಿಗಳು ತೆರಿಗೆ ವಂಚನೆ ಪ್ರಕರಣದಲ್ಲಿ ಶೂ ಟ್ರೇಡರ್ ರಾಮನಾಥ್ ದಾಂಗ್ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಮನೆ, ಕಚೇರಿ ಮೇಲೆ ರೇಡ್ ಮಾಡಿದ ವೇಳೆ ಸೂಕ್ತ ದಾಖಲೆ ಇಲ್ಲದ 40 ಕೋಟಿ ರೂಪಾಯಿ ಪತ್ತೆಯಾಗಿದೆ.
500 ರೂ. ಮುಖಬೆಲೆಯ ನೂರಾರು ಕಂತೆ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ರೇಡ್ ಮಾಡಿದ ವೇಳೆ ಪತ್ತೆಯಾದ ಹಣಯನ್ನು ಬ್ಯಾಂಕ್ ಸಿಬ್ಬಂದಿ, ನೋಟ್ ಮೆಷಿನ್ ಕರೆಸಿ ನೋಟುಗಳ ಎಣಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : KIAL ಏರ್ಪೋರ್ಟ್ನಲ್ಲಿ ಬಾಂಬ್ ಇದೆ ಅಂತಾ ಜೋಕ್ ಮಾಡಿದ್ದ ಆಸಾಮಿ ಅರೆಸ್ಟ್..!
Post Views: 60