Download Our App

Follow us

Home » ಅಪರಾಧ » ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ವಾರಂಟ್ ಜಾರಿ..!

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ವಾರಂಟ್ ಜಾರಿ..!

ಬೆಂಗಳೂರು : ಎಸ್ಐಟಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಬಾರದೇ ಫಾರಿನ್​​ನಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್‌ ರೇವಣ್ಣಗೆ ಮತ್ತೊಂದು ಬಿಗ್​ ಶಾಕ್ ಎದುರಾಗಿದೆ. ಪ್ರಜ್ವಲ್​ ರೇವಣ್ಣ ಲಾಕ್​ ಮಾಡಲು ಕೊನೆಗೂ SIT ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ.

ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪ್ರಕರಣದಲ್ಲಿ ಕೊನೆಗೂ ವಾರಂಟ್ ಜಾರಿಯಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಿಂದ ವಾರಂಟ್​ ಜಾರಿ ಮಾಡಿಸಿದ್ದು, ವಾರಂಟ್ ಸಹಾಯದಿಂದ ರೆಡ್ ಕಾರ್ನರ್ ನೋಟಿಸ್ ಪ್ರಕ್ರಿಯೆ ಶುರುವಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ವಾರಂಟ್ ಜಾರಿ ಮಾಡುವಂತೆ SIT ಮನವಿ ಮಾಡಿಕೊಂಡಿತ್ತು. ರೆಡ್ ಕಾರ್ನರ್​​ ನೋಟಿಸ್ ಹೊರಡಿಸಿದ್ರೆ ವಿದೇಶದಲ್ಲೇ ಇಂಟರ್​​ಪೋಲ್​ ಮೂಲಕ ಪ್ರಜ್ವಲ್​ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಎಸ್ಐಟಿ ನೋಟಿಸ್ ಕೊಟ್ಟರೂ ಪ್ರಜ್ವಲ್ ರೇವಣ್ಣ ಕ್ಯಾರೇ ಎಂದಿರಲಿಲ್ಲ. ಮೊದಲ ನೋಟಿಸ್‌ಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ 22 ದಿನಗಳಾದರೂ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ಸಾಗಿಲ್ಲ, ವಿಚಾರಣೆಗೂ ಹಾಜರಾಗಿಲ್ಲ. ಇದೀಗ ಕೋರ್ಟ್ ವಾರೆಂಟ್ ಹೊರಡಿಸಿರೋದ್ರಿಂದ ಈ ಬಾರಿಯಾದ್ರೂ ಪ್ರಜ್ವಲ್ ವಿಚಾರಣೆಗೆ ಬರ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : KSMSCLನಿಂದ ಬಾರಿ ಎಡವಟ್ಟು : ಮನುಷ್ಯನ ಬಳಕೆಗೆ ಪಶುಗಳ ಮೆಡಿಸಿನ್ ಪೂರೈಕೆ​​..!

Leave a Comment

DG Ad

RELATED LATEST NEWS

Top Headlines

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ

Live Cricket

Add Your Heading Text Here