Download Our App

Follow us

Home » ಅಪರಾಧ » ಫ್ಲ್ಯಾಟ್‌ ನಿರ್ಮಿಸಲು 8 ಮರಕ್ಕೆ ಕೊಡಲಿ – ಬಿಲ್ಡರ್ ವಿರುದ್ದ FIR ದಾಖಲು..!

ಫ್ಲ್ಯಾಟ್‌ ನಿರ್ಮಿಸಲು 8 ಮರಕ್ಕೆ ಕೊಡಲಿ – ಬಿಲ್ಡರ್ ವಿರುದ್ದ FIR ದಾಖಲು..!

ಬೆಂಗಳೂರು : ಕೆಆರ್ ಪುರಂನ ಬಸವನಪುರ ವಾರ್ಡ್‌ನಲ್ಲಿ ಫ್ಲಾಟ್‌ಗಳನ್ನು ನಿರ್ಮಿಸಲು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ FIR ದಾಖಲಾಗಿದೆ. ಸಾಯಿ ಸೆರಿನಿಟಿ ಲೇಔಟ್‌ನಲ್ಲಿ ಫ್ಲ್ಯಾಟ್‌ ನಿರ್ಮಿಸಲು 8 ಮರಕ್ಕೆ ಕೊಡಲಿ ಹಾಕಿದ್ದು, ಸ್ಥಳೀಯರ ಮಾಹಿತಿ ಮೇಲೆ ಬಿಬಿಎಂಪಿ ಅರಣ್ಯ ವಿಭಾಗದಿಂದ ಕ್ರಮ ಕೈಗೊಳ್ಳಲಾಗಿದೆ.

ಮರ ಕಡಿಯೊ ವೇಳೆ ತಡೆಯಲು ಬಂದ ಸ್ಥಳೀಯರಿಗೂ ಬೆದರಿಸಿದ್ದ ಆರೋಪ ಕೇಳಿಬಂದಿದೆ. ಸ್ಥಳೀಯರು ಮಹದೇವಪುರದ ಉಪ ವಲಯ ಅರಣ್ಯಾಧಿಕಾರಿಗೆ ಕರೆ ಮಾಡಿದ್ರೂ ಅಧಿಕಾರಿ ಸುದರ್ಶನ್ ರೆಡ್ಡಿ ಬೇಗ ಸಿಬ್ಬಂದಿ ಕಳಿಸಿಲ್ಲ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಬರುವ ವೇಳೆ ಕಾರ್ಮಿಕರು ದೊಡ್ಡ ಕೊಂಬೆಯನ್ನೆ ಕಡಿದಿದ್ದಾರೆ. ನಿರ್ಮಾಣ ಸಂಸ್ಥೆಯಾದ ಅನ್ವಿತಾ ಇನ್ಫ್ರಾ ಬಿಲ್ಡರ್ಸ್ 45 ಫ್ಲಾಟ್‌ಗಳನ್ನು ನಿರ್ಮಿಸಲು ಬೃಹತ್ ಮರವನ್ನು ಕತ್ತರಿಸಲು ಕಾರ್ಮಿಕರನ್ನು ನಿಯೋಜಿಸಿದೆ.

ಮರ ಕಡಿಯೋದನ್ನು ನಿಲ್ಲಿಸಿ ಹೋದ್ರೂ ಮಾರನೇ ದಿನ ಮತ್ತೆ ಮರ ಕಟಾವು ಮಾಡಿದ್ದಾರೆ. BBMP ಅಧಿಕಾರಿಗಳ ಗಮನಕ್ಕೆ ಬರ್ತಿದ್ದಂತೆ ಅರಣ್ಯಾಧಿಕಾರಿಗಳನ್ನ ಭೇಟಿ ಮಾಡಿದ್ದಾರೆ. ಬಿಲ್ಡರ್ ರಾಜೇಶ್ ವಿರುದ್ಧ ಪಾಲಿಕೆ ಅರಣ್ಯ ವಿಭಾಗದಲ್ಲಿ ಎರಡು FIR ದಾಖಲಾಗಿದ್ದು, 1976ರ ಮರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ FIR ದಾಖಲಿಸಿದ್ದಾರೆ. ಈ ಬಗ್ಗೆ BBMP ಅರಣ್ಯ ವಿಭಾಗದ ವಿಶೇಷ ಆಯುಕ್ತರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ವಿಜಯಪುರ: ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದೋಚಿ ಪರಾರಿಯಾದ ದುಷ್ಕರ್ಮಿಗಳು..!

Leave a Comment

DG Ad

RELATED LATEST NEWS

Top Headlines

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ

Live Cricket

Add Your Heading Text Here