ವಿಜಯಪುರ: ವಿಜಯಪುರದಲ್ಲಿ ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂಪಾಯಿ ನಗದು ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಕೊಲ್ಹಾರ ಹೊರ ಭಾಗದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಕಲಬುರಗಿ ಜಿಲ್ಲೆ ಜೀವರ್ಗಿ ಪಟ್ಟಣದ ಹತ್ತಿ ವ್ಯಾಪಾರಿ ಚಂದ್ರಕಾಂತ ಕುಂಬಾರ ಅವರು ಹತ್ತಿ ಕಾರ್ಖಾನೆಗೆ ಹತ್ತಿ ಮಾರಾಟ ಮಾಡಿ 32 ಲಕ್ಷ ರೂಪಾಯಿಯೊಂದಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ದರೋಡೆ ಮಾಡಿದ್ದಾರೆ.
ಕ್ಯಾಂಟರ್ಗೆ ಕಲ್ಲು, ರಾಡ್ನಿಂದ ಹೊಡೆದು ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿ ಹಣ ದೋಚಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಶಾಂತಿ ಕದಡಲು ನಾವ್ ಬಿಡಲ್ಲ- ಡಾ.ಜಿ.ಪರಮೇಶ್ವರ್..!
Post Views: 182