ಕೊಡಗು : ಕೊಡಗಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆಯಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಈ ರಾಕ್ಷಸ ಕೃತ್ಯ ನಡೆದಿದ್ದು, ವಿದ್ಯಾರ್ಥಿನಿ ತಲೆ ಕತ್ತರಿಸಿ ರುಂಡ-ಮುಂಡವನ್ನು ಹಂತಕ ಬಿಸಾಕಿದ್ದಾನೆ. 16 ವರ್ಷದ ಮೀನಾ ಕೊಲೆಯಾದ ದುರ್ದೈವಿ. 35 ವರ್ಷದ ಪ್ರಕಾಶ್ ಎಂಬಾತ ಕೊಲೆ ಮಾಡಿದ ರಾಕ್ಷಸ.
ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿಯಾಗಿದ್ದ ಮೀನಾ, ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ತನ್ನ ಶಾಲೆಗೆ 100% ಫಲಿತಾಂಶ ತಂದು ಕೊಟ್ಟಿದ್ದಳು. ಹೆತ್ತವರು, ಊರಿನ ಜನ ಮೀನಾ ಪಾಸ್ ಆದ ಸಂಭ್ರಮದಲ್ಲಿದ್ದರು. ಬೆಳಗ್ಗೆಯಿಂದಲೂ ತಾನು ಪಾಸಾದ ಖುಷಿಯಲ್ಲಿ ಇದ್ದ ಮೀನಾ, ಶಾಲೆಯತ್ತ ಬಂದು ತೇರ್ಗಡೆಯಾದ ಖುಷಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದಳು. ಇದೇ ಸಂದರ್ಭದಲ್ಲಿ ಪ್ರಕಾಶ್ ಆಕೆಯನ್ನು ಅಡ್ಡಗಟ್ಟಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇನ್ನು, ಅಪ್ರಾಪ್ತ ಬಾಲಕಿಯ ವಿವಾಹ ಮಾಡುವುದಕ್ಕೆ ಪೋಷಕರು ಸಿದ್ಧತೆ ನಡೆಸಿದ್ರು ಎನ್ನಲಾಗಿದೆ. ಈ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಹೀಗಾಗಿ ನಿನ್ನೆ ಸೋಮವಾರಪೇಟೆ ಪೊಲೀಸರ ಮದ್ಯಸ್ಥಿಕೆಯಿಂದ ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ತಡೆಯಲಾಗಿತ್ತು. ಈ ವಿಚಾರ ತಿಳಿದು ನಿಶ್ಚಿತಾರ್ಥ ತಪ್ಪಿದ್ದಕ್ಕೆ ಆಕೆಯನ್ನು ಮದುವೆ ಆಗಬೇಕಾಗಿದ್ದ ಪ್ರಕಾಶನೇ ಈ ರಾಕ್ಷಸ ಕೃತ್ಯ ಎಸಗಿದ್ದಾನೆ. ಸದ್ಯ ಹಂತಕ ಪ್ರಕಾಶ್ನಿಗಾಗಿ ವಿರಾಜಪೇಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ : ರಾಜಧಾನಿಯಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ – ಕೆರೆಯಂತಾದ ಬೆಂಗಳೂರಿನ ರಸ್ತೆಗಳು..!