ಮೈಸೂರು : ಕೆ.ಆರ್.ನಗರ ಸಂತ್ರಸ್ತೆ ಕಿಡ್ನಾಪ್ ಪ್ರಕರಣ ಸಂಬಂಧ SIT ಅಧಿಕಾರಿಗಳು ಮತ್ತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್.ಡಿ. ರೇವಣ್ಣ, ಸತೀಶ್ ಬಾಬು ಅವರನ್ನು ಈಗಾಗಲೇ ಅರೆಸ್ಟ್ ಮಾಡಿದ್ದು, ಇದೀಗ ನಾಲ್ವರನ್ನು SIT ವಶಕ್ಕೆ ಪಡೆದಿದೆ.
ಸುಜಯ್ ಹೆಬ್ಬಾಳು, ಕೀರ್ತಿ ಹೊಸೂರು, ಮನು, ತಿಮ್ಮಪ್ಪನನ್ನು ವಶಕ್ಕೆ ಪಡೆದಿದ್ದು, ಈ ನಾಲ್ವರು ಸತೀಶ್ ಬಾಬು ಜೊತೆಗೆ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಕೆ.ಆರ್.ನಗರ ತಾಲೂಕಿನ ಸುಜಯ್, ಹೊಸೂರಿನ ಕೀರ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಜಯ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನಾಗಿದ್ದು, ಭವನಿ ರೇವಣ್ಣ ಅವ್ರ ಸಂಬಂಧಿಯಾಗಿದ್ದಾನೆ. ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿಯ ತಿಮ್ಮಪ್ಪ ಕಿಡ್ನಾಪ್ಗೆ ಸಹಕರಿದ್ದಾರೆ ಎಂಬ ಆರೋಪದ ಮೇಲೆ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : SSLC ರಿಸಲ್ಟ್ : ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ – 7 ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ..!
Post Views: 287