ಬೆಂಗಳೂರು : ಪ್ರಜ್ವಲ್ ಕೇಸ್ ಡೀಲ್ ಕಿಂಗ್ ದೇವರಾಜೇಗೌಡ, 15 ಕೋಟಿ ಹಣ ಪಡೆದು ವಿಷಯವನ್ನೇ ಮುಚ್ಚಿಹಾಕಿದ್ರು. ದೇವರಾಜೇಗೌಡ ಬಗ್ಗೆ ಹಲವು ಸತ್ಯ ಹೇಳೋದಿದೆ ಎಂದು ಕಾಂಗ್ರೆಸ್ ಮುಖಂಡ ಮಂಜೇಗೌಡ ಆರೋಪ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಮಂಜೇಗೌಡ ಮಾತನಾಡಿ, ದೇವರಾಜೇಗೌಡ ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದಾರೆ. ಪೆನ್ ಡ್ರೈವ್ ಹಿಂದೆ ಡಿಕೆಶಿ ಸೇರಿ ಕಾಂಗ್ರೆಸ್ ನಾಯಕರು ಇಲ್ಲ, ಡಿಕೆಶಿ ಹೆಸರು ಹೇಳಿ ಡೈವರ್ಟ್ ಮಾಡುವ ಕೆಲಸ ಆಗ್ತಿದೆ. ರೇವಣ್ಣ ಮೇಲೆ ದೇವರಾಜೇಗೌಡಗೆ ಸೇಡಿತ್ತು, ಅದಕ್ಕೆ ಕೈಜೋಡಿಸಿದವನೇ ಡ್ರೈವರ್ ಕಾರ್ತಿಕ್ ಎಂದಿದ್ದಾರೆ.
ಪೆನ್ ಡ್ರೈವ್ ಡೀಲ್ ಕಾರ್ತಿಕ್, ದೇವರಾಜೇಗೌಡ ಮಧ್ಯೆ ನಡೆದಿದೆ. ಇಬ್ಬರನ್ನೂ ಅರೆಸ್ಟ್ ಮಾಡಿದ್ರೆ ಸತ್ಯ ಹೊರಬರುತ್ತೆ ಎಂದು ಹಾಸನದ ಕಾಂಗ್ರೆಸ್ ಮುಖಂಡ ಮಂಜೇಗೌಡ ಹೇಳಿದ್ದಾರೆ.
ಇದನ್ನೂ ಓದಿ : ಶರಣ್ ಅಭಿನಯದ “ಛೂ ಮಂತರ್” ಚಿತ್ರದ ಬಿಡುಗಡೆ ಮುಂದೂಡಿಕೆ..!
Post Views: 126