ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ದಿನ-ದಿನಕ್ಕೂ ಸಂಕಷ್ಟ ಹೆಚ್ಚಾಗುತ್ತಿದ್ದು, ಬೇಲ್ ಪಡೆದು ಸೇಫ್ ಆಗೋಣ ಅಂತಿದ್ದ ಪ್ರಜ್ವಲ್ಗೆ ಬಿಗ್ ಶಾಕ್ ಎದುರಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಅನುಮತಿ ಪಡೆದು ಪ್ರಜ್ವಲ್ ರೇವಣ್ಣ ವಿರುದ್ದ SIT ರೇಪ್ ಕೇಸ್ ದಾಖಲಿಸಿದೆ.
ಮಹಿಳೆಯರನ್ನು ಬೆದರಿಸಿ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದ್ದು, ದೂರು ನೀಡಿದ ಮಹಿಳೆಯರ ಹೇಳಿಕೆ ಕೋರ್ಟ್ಗೆ ಸಲ್ಲಿಸಿ ಕೇಸ್ ದಾಖಲು ಮಾಡಲಾಗಿದೆ. ನಾನ್ ಬೇಲಬಲ್ IPC 376(2) ರಡಿ ಕೇಸ್ ದಾಖಲಿಸಿಕೊಂಡಿದ್ದಾರೆ. IPC 376(2) ಜನ ಪ್ರತಿನಿಧಿಯಾಗಿ ಅಧಿಕಾರ ದುರ್ಬಳಕೆ ಮಾಡಿ ಅತ್ಯಾಚಾರ ವೆಸಗಿದ್ದಾರೆ. SIT ತನಿಖಾ ತಂಡ ಪೆನ್ಡ್ರೈವ್ ಕೇಸ್ನ್ನ ಮತ್ತಷ್ಟು ಸ್ಟ್ರಾಂಗ್ ಮಾಡಿದೆ.
ದುಬೈಗೆ ಶಿಫ್ಟ್ ಆದ್ರಾ ಪ್ರಜ್ವಲ್ ರೇವಣ್ಣ..?
ಜರ್ಮನಿಯಿಂದ ಪ್ರಜ್ವಲ್ ದುಬೈಗೆ ಶಿಫ್ಟ್ ಆಗಿರೋ ಮಾಹಿತಿ ಲಭ್ಯವಾಗಿದೆ. ಲುಕ್ಔಟ್ ನೋಟಿಸ್ ಬೆನ್ನಲ್ಲೇ ಜಾಗ ಶಿಫ್ಟ್ ಮಾಡಿದ್ರಾ ಪ್ರಜ್ವಲ್..? ಅನ್ನೊ ಪ್ರಶ್ನೆ ಹುಟ್ಟಿಕೊಂಡಿದೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕೂಡಾ ಎಲ್ಲಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ. ಪ್ರಜ್ವಲ್ನ ಮಾಜಿ ಡ್ರೈವರ್ ಕಾರ್ತಿಕ್ ಮಲೇಷಿಯಾದಲ್ಲಿರೋ ಮಾಹಿತಿಯಿದೆ. ಅಷ್ಟೆ ಅಲ್ಲದೆ ಪೆನ್ಡ್ರೈವ್ ಹಂಚಿದ್ದ ಎನ್ನಲಾದ ನವೀನ್ ಗೌಡ ಕೂಡಾ ನಾಪತ್ತೆಯಾಗಿದ್ದಾನೆ. ಇದೀಗ ಪ್ರಜ್ವಲ್ ಪೆನ್ಡ್ರೈವ್ ಕೇಸ್ ಭಾರೀ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ : 14ನೇ ದಾದ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಪ್ರಶಸ್ತಿ..!