ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರಜ್ವಲ್ ಚಾಲಕನನ್ನು ಮಲೇಷಿಯಾಕ್ಕೆ ಕಳಿಸಿದ್ಯಾರು..? ಮಾಜಿ ಕಾರ್ ಡ್ರೈವರ್ ಬೆನ್ನ ಹಿಂದೆ ನಿಂತಿರೋದು ಯಾರು..? ಮೊದಲು ಕಾರ್ತಿಕ್ ಎಲ್ಲಿದ್ದಾನೆ ಕರ್ಕೊಂಡು ಬನ್ನಿ ಎಂದು ಹೇಳಿಕೆ ನೀಡುವ ಮೂಲಕ ಬಿಗ್ ಬಾಂಬ್ ಸಿಡಿಸಿದ್ದರು. ಹೆಚ್ಡಿಕೆ ಬಾಂಬ್ ಬೆನ್ನಲ್ಲೇ SIT ಟೀಂ ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಕಾರ್ತಿಕ್ಗೆ ನೋಟಿಸ್ ಜಾರಿಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪಿಗಳಾದ ಎಚ್‌ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ 2 ದಿನಗಳ ಹಿಂದೆಯೇ ಪ್ರಾಥಮಿಕ ನೋಟಿಸ್ ಜಾರಿಗೊಳಿಸಿತ್ತು.
ಇದೀಗ SIT ಟೀಂ ಮತ್ತೊಂದು ನೋಟಿಸ್ ಜಾರಿಗೊಳಿಸಿದೆ. ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಕಾರ್ತಿಕ್ ನನ್ನ ಬಳಿ ಎರಡು ಪೆನ್ಡ್ರೈವ್ ಇದ್ದವು ಎಂದು ಹೇಳಿಕೆ ನೀಡಿದ್ದನು. SIT ತಂಡ ಜಾರಿಗೊಳಿಸಿರುವ ನೋಟಿಸ್ನಲ್ಲಿ 24 ಗಂಟೆಯ ಒಳಗೆ ವಿಚಾರಣೆಗೆ ಬರುವಂತೆ ತಿಳಿಸಲಾಗಿದೆ.
ಇದನ್ನೂ ಓದಿ : ನೇಹಾ ಹಿರೇಮಠ್ ಪೋಷಕರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ..!