Download Our App

Follow us

Home » ರಾಜಕೀಯ » ನೇಹಾ ಹಿರೇಮಠ್ ಪೋಷಕರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ..! 

ನೇಹಾ ಹಿರೇಮಠ್ ಪೋಷಕರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ..! 

ಹುಬ್ಬಳ್ಳಿ : ಕಾಲೇಜು ಕ್ಯಾಂಪಸ್​​ನಲ್ಲೇ ಹತ್ಯೆಯಾದ ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ಪೋಷಕರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ನಿನ್ನೆ ಹಾವೇರಿ, ಧಾರವಾಡ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿದ್ದ ಅಮಿತ್ ಶಾ, ನೇಹಾ ತಂದೆ ನಿರಂಜನ್ ಹಿರೇಮಠ ಜೊತೆ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ. ಹುಬ್ಬಳ್ಳಿಯ ನೆಹರು ಮೈದಾನದ ವೇದಿಕೆ ಹಿಂಭಾಗದಲ್ಲಿ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.

ನೆಹರು ಮೈದಾನದ ವೇದಿಕೆ ಹಿಂಭಾಗದಲ್ಲಿ ಭೇಟಿಯಾಗಿ 10 ನಿಮಿಷ ನಿರಂಜನ‌ ಕುಟುಂಬದೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿಮ್ಮ ಜೊತೆ ನಾವಿದ್ದೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ  ಅಮಿತ್ ಶಾ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಥ್ ನೀಡಿದ್ದಾರೆ.

ಇದನ್ನೂ ಓದಿ : ಪುಷ್ಪ 2 ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ – ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್..!

Leave a Comment

DG Ad

RELATED LATEST NEWS

Top Headlines

ಕೊನೆಗೂ ಎರಡನೇ ಮದುವೆ ಬಗ್ಗೆ ಮೌನ ಮುರಿದ ನಟಿ ಸೋನು ಗೌಡ.. ಹೇಳಿದ್ದೇನು ಗೊತ್ತಾ?

ಸ್ಯಾಂಡಲ್​​ವುಡ್​​ನಲ್ಲಿ ವಿಭಿನ್ನ ಪಾತ್ರಗಳನ್ನೇ ಕಾದು ಆಯ್ದುಕೊಳ್ಳುವ ನಟಿಯೆಂದರೆ ಅದು ಇಂತಿ ನಿನ್ನ ಪ್ರೀತಿಯ ಸಿನಿಮಾ ಖ್ಯಾತಿಯ ನಟಿ ಸೋನು ಗೌಡ. ವಿಭಿನ್ನವಾದ, ಜನರ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳನ್ನೇ

Live Cricket

Add Your Heading Text Here