ಬೆಂಗಳೂರು : ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಂದು ಪ್ರತಿಭಟನೆ ನಡೆಸಲಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕಡಿಮೆ ಬರ ಪರಿಹಾರ ಹಣ ಬಿಡುಗಡೆ ಮಾಡಿದ ಹಿನ್ನಲೆಯಿಂದಾಗಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಡಿಮೆ ಮೊತ್ತದ ಬರ ಪರಿಹಾರ ವಿರೋಧಿಸಿ ಬೃಹತ್ ಧರಣಿ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಶಾಸಕರು, ವಿಧಾನಪರಿಷತ್ ಸದಸ್ಯರು, ಮುಖಂಡರು ಪ್ರತಿಭಟನೆ ಮಾಡಲಿದ್ದಾರೆ.
ಈ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿ, 223 ತಾಲೂಕುಗಳನ್ನು ಬರ ಪೀಡಿತವೆಂದು ಸರ್ಕಾರ ಘೋಷಿಸಿದೆ. 35,161 ಕೋಟಿ ನಷ್ಟವಾಗಿದೆ, 18,174 ಕೋಟಿ ಪರಿಹಾರ ನೀಡಿ ಎಂದು ಮನವಿ ಮಾಡಿತ್ತು. ಕೇಂದ್ರಕ್ಕೆ ವರದಿ ನೀಡಿದ ಬಳಿಕ ಟೀಂ ಬಂದು ಅಧ್ಯಯನ ಮಾಡಿತ್ತು. ಆದ್ರೆ ಈಗ ಬಿಡಿಗಾಸು ರಿಲೀಸ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರಕ್ಕೆ ಕರ್ನಾಟಕದ ಪರಿಸ್ಥಿತಿಯನ್ನ ತಿಳಿಸಲು 2023 ಅಕ್ಟೋಬರ್ 24ರಂದು ರಾಜ್ಯದ ಸಚಿವರುಗಳಾದ ಕೃಷಿ ಮತ್ತು ಕಂದಾಯ ಸಚಿವರು ಹೋಗಿದ್ದರೆ, ಡಿಸೆಂಬರ್19ರಂದು ಸಿಎಂ, ಕಂದಾಯ ಸಚಿವರು ಇಬ್ಬರೂ ಭೇಟಿ ಮಾಡಿದ್ದರು. ಜ.20ರಂದು ಸಿಎಂ ಮತ್ತೆ ಪ್ರಧಾನಿಗಳ ಬಳಿ ಮನವಿ ಇಟ್ಟರು. ಮಾರ್ಗಸೂಚಿ ಅನ್ವಯ ನಾವು ಮನವಿ ಸಲ್ಲಿಸಿದ್ದೆವು ಎಂದರು.
ಇದನ್ನೂ ಓದಿ : ಜಪಾನ್ನಲ್ಲಿ ರಿಲೀಸ್ಗೆ ರೆಡಿಯಾದ ‘777 ಚಾರ್ಲಿ’ ಸಿನಿಮಾ..!