Download Our App

Follow us

Home » ರಾಷ್ಟ್ರೀಯ » ಮಣಿಪುರದಲ್ಲಿ 3 ಬಾರಿ ಸ್ಫೋಟ : ಸೇತುವೆಗೆ ಹಾನಿ..!

ಮಣಿಪುರದಲ್ಲಿ 3 ಬಾರಿ ಸ್ಫೋಟ : ಸೇತುವೆಗೆ ಹಾನಿ..!

ಮಣಿಪುರದಲ್ಲಿ ಎರಡನೇ ಹಂತದ ಮತದಾನಕ್ಕೆ ಕೇವಲ 2 ದಿನಗಳಷ್ಟೇ ಬಾಕಿಯಿರುವಾಗ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ 3 ಬಾರಿ ಸ್ಫೋಟ ಸಂಭವಿಸಿ ಸೇತುವೆಗೆ ಹಾನಿ ಉಂಟಾಗಿದೆ. ಸ್ಫೋಟದಿಂದಾಗಿ ಯಾವುದೇ ಗಾಯಗಳು, ಸಾವುಗಳು ಸಂಭವಿಸದಿದ್ದರೂ, ಇದು ಇಂಫಾಲ್‌ನಿಂದ ನಾಗಾಲ್ಯಾಂಡ್‌ನ ದಿಮಾಪುರ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-2 ರ ಸಂಚಾರದ ಮೇಲೆ ಪರಿಣಾಮ ಬೀರಿದೆ.

ಭದ್ರತಾ ಅಧಿಕಾರಿಯ ಪ್ರಕಾರ, ಈ ಘಟನೆಯು ಕಾಂಗ್‌ಪೋಕ್ಪಿ ಜಿಲ್ಲೆಯ ಸಪೋರ್ಮಿನಾ ಸಮೀಪದಲ್ಲಿ ಸುಮಾರು 1.15 ಗಂಟೆಗೆ ನಡೆದಿದೆ. ಮಂಗಳವಾರ ಮತ್ತು ಬುಧವಾರದ ಮಧ್ಯರಾತ್ರಿಯಲ್ಲಿ ಈ ಸ್ಪೋಟ ಸಂಭವಿಸಿದ್ದು, ಈ ಘಟನೆಯಿಂದಾಗಿ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದಿದ್ದಾರೆ. ಹಾಗೆಯೇ ಭದ್ರತಾ ಪಡೆಗಳು ಹತ್ತಿರದ ಪ್ರದೇಶಗಳು ಮತ್ತು ಇತರ ಸೇತುವೆಗಳನ್ನು ಶೋಧಿಸಿ ಪರಿಶೀಲಿಸುತ್ತಿದ್ದಾರೆ.

ಏಪ್ರಿಲ್ 19 ರಂದು ಮಣಿಪುರದಲ್ಲಿ ಮೊದಲ ಹಂತದ ಮತದಾನದ ವೇಳೆ, ಗುಂಡಿನ ದಾಳಿ, ಇವಿಎಂ ನಾಶ, ಬೆದರಿಕೆಯಂತಹ ಘಟನೆಗಳು ನಡೆದಿದೆ. ಒಳ ಮಣಿಪುರ ಕ್ಷೇತ್ರದ ಕೆಲವು ಭಾಗಗಳಲ್ಲಿ ಬೆದರಿಕೆ ಹಾಕಿದ, ದಬ್ಬಾಳಿಕೆ ನಡೆಸಿದ ಆರೋಪಗಳು ಕೂಡಾ ಇದೆ. ಇವಿಎಂ ನಾಶವಾದ ಕಾರಣ ಕ್ಷೇತ್ರದ 11 ಮತಗಟ್ಟೆಗಳಿಗೆ ಏಪ್ರಿಲ್ 22 ರಂದು ಮತ್ತೆ ಚುನಾವಣೆ ನಡೆದಿದೆ. ಶಾಂತಿಯುತವಾಗಿ ಚುನಾವಣೆ ನಡೆದಿದ್ದು ಶೇಕಡ 80ಕ್ಕಿಂತ ಅಧಿಕ ಮತದಾನವಾಗಿದೆ.

ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಮಣಿಪುರದ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ರಮಾನಂದ ನೊಂಗ್‌ಮೈಕಪಮ್ ಅವರು ಗುಂಪು ಹಿಂಸಾಚಾರ ಮತ್ತು ಬೂತ್ ವಶಪಡಿಸಿಕೊಂಡ ಘಟನೆಗಳು, ಇವಿಎಂ ನಾಶಗೈದ ಘಟನೆಗಳನ್ನು ತಿಳಿಸಿದ್ದು, ಆ ಬಳಿಕ ಮರು ಮತದಾನ ನಡೆದಿದೆ.

ಅಂದಿನಿಂದ, ಇಂಫಾಲ್ ಪಶ್ಚಿಮ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಯ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿಗಳೂ ನಡೆಯುತ್ತಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಗ್ರಾಮಸ್ಥರ ಗುಂಪು ಕಾಂಗ್‌ಪೂಕ್ಪಿ ಜಿಲ್ಲೆಯ ಬೆಟ್ಟಗಳಿಂದ ಇಳಿದಿದೆ. ಹಾಗೆಯೇ ಅವಾಂಗ್ ಸೆಕ್ಮೈ ಮತ್ತು ನೆರೆಯ ಲುವಾಂಗ್‌ಸಂಗೋಲ್ ಗ್ರಾಮಗಳಲ್ಲಿ ಭಾರೀ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮೀಸಲು ವಿಚಾರದಲ್ಲಿ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ : ರಣದೀಪ್​​ ಸುರ್ಜೇವಾಲಾ ಕಿಡಿ..!

Leave a Comment

DG Ad

RELATED LATEST NEWS

Top Headlines

ಪ್ರಭಾಸ್‌ ಜೊತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್‌..!

ಕನ್ನಡ ಚಿತ್ರಂಗಕ್ಕೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್‌ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್‌, ಈಗ

Live Cricket

Add Your Heading Text Here