ಬೆಂಗಳೂರು : ಕುಖ್ಯಾತ ರೌಡಿ ಶೀಟರ್ ಕುಣಿಗಲ್ ಗಿರಿ ಕೊಲೆಗೆ ಸಂಚು ಹೂಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂದಿಸಿದ್ದಾರೆ. ಸಿಲಿಂಡರ್ ಸುನೀಲ್, ಅವಿನಾಷ್ ಇಬ್ಬರು ಬಂಧಿತ ಆರೋಪಿಗಳು.
ಕಾಮಾಕ್ಷಿಪಾಳ್ಯ ರೌಡಿ ಶೀಟರ್ ಆಗಿರುವ ಗಿರಿ ಎರಡು ಮೂರು ತಿಂಗಳ ಹಿಂದಷ್ಟೇ ಜೈಲಿನಿಂದ ರಿಲೀಸ್ ಆಗಿದ್ದ. ಗಿರಿ ದುಶ್ಮನ್ ರಾಬರಿ ಕಿಟ್ಟಿ ಜೈಲಿನಿಂದ ಸುಪಾರಿ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಗಿರಿ ಕೊಲೆಗೆ ಸುಪಾರಿ ಕೊಟ್ಟಿರುವ ರಾಬರಿ ಕಿಟ್ಟಿ ಮರ್ಡರ್ ಕೇಸ್ವೊಂದರಲ್ಲಿ ತುಮಕೂರು ಜೈಲಿನಲ್ಲಿದ್ದಾನೆ. ಆದರೆ ಕುಣಿಗಲ್ ಗಿರಿಗೂ ರಾಬರಿ ಕಿಟ್ಟಿಗೂ ಹಳೇ ದ್ವೇಷ ಇದ್ದ ಕಾರಣ ಸಿಲಿಂಡರ್ ಸುನೀಲ್, ಅವಿನಾಷ್ ಇಬ್ಬರನ್ನು ಜೈಲಿಗೆ ಕರೆಸಿಕೊಂಡು ಸುಪಾರಿ ಕೊಟ್ಟಿದ್ದಾನೆ.
ಇನ್ನು ಕುಣಿಗಲ್ ಗಿರಿ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ಸುಪಾರಿ ಕೊಟ್ಟ ಇಬ್ಬರು ಆರೋಪಿಗಳು ಕುಣಿಗಲ್ ಗಿರಿಯನ್ನ ಮಾನಿಟರ್ ಮಾಡುತ್ತಿದ್ದರು. ಇವರ ಜೊತೆ ಇನ್ನಿಬ್ಬರು ಸೇರಿಕೊಂಡು ಕುಣಿಗಲ್ ಗಿರಿ ವಾಸಿಸೋ ಸುಂಕದಕಟ್ಟೆಯಲ್ಲೇ ಮನೆ ಮಾಡಿಕೊಂಡು ಸ್ಕೆಚ್ ರೂಪಿಸುತ್ತಿದ್ದರು.
ಈ ಬಗ್ಗೆ ಪಕ್ಕಾ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರ ತಂಡ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿ ಸಿಲಿಂಡರ್ ಸುನೀಲ್, ಅವಿನಾಷ್ನನ್ನು ಅರೆಸ್ಟ್ ಮಾಡಿದೆ. ಆದರೆ ದಾಳಿ ಇನ್ನಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸಿಸಿಬಿ ಟೀಂ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದೆ. ಸದ್ಯ ಇಬ್ಬರನ್ನೂ ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಇಂದು ಚಿಕ್ಕಬಳ್ಳಾಪುರ-ಬೆಂಗಳೂರಲ್ಲಿ ಮೋದಿ ಮೇನಿಯಾ – ಅರಮನೆ ಮೈದಾನದಲ್ಲಿ ಕೇಸರಿ ಪಡೆ ಶಕ್ತಿ ಪ್ರದರ್ಶನ..!