ಮೈಸೂರು : ಬಿಜೆಪಿಯ ದೊಡ್ಡ ಲೀಡರ್ಗೆ ಗಾಳ ಹಾಕಿದ ಸಿಎಂ ಸಿದ್ದರಾಮಯ್ಯ, 7 ವರ್ಷದ ಮುನಿಸು ಮರೆತು ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿದ್ದಾರೆ. ಶ್ರೀನಿವಾಸ್ ಪ್ರಸಾದ್ ಮನೆಗೆ ದಿಢೀರ್ ಎಂಟ್ರಿ ಕೊಟ್ಟ ಸಿಎಂ ಸಿದ್ದು, ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರಗಳನ್ನು ಗೆಲ್ಲಲು ಸ್ವಯಂ ಪ್ರತಿಷ್ಠೆ ಬದಿಗಿಟ್ಟು ಕಾದು ಕುಳಿತು ಶ್ರೀನಿವಾಸ್ ಪ್ರಸಾದ್ ಅವರನ್ನು ಮೀಟ್ ಆಗಿದ್ದಾರೆ. ಹಮ್ಮು-ಬಿಮ್ಮು ಎಲ್ಲವನ್ನೂ ಬಿಟ್ಟು ಬರೋಬ್ಬರಿ 8 ನಿಮಿಷಗಳ ಕಾಲ ಚರ್ಚೆ ನಡೆಸಿ ಕಾಂಗ್ರೆಸ್ ಪಕ್ಷದ ಬೆಂಬಲಕ್ಕೆ ನಿಲ್ಲಿ ಎಂದು ಮುಕ್ತವಾಗಿ ಮಾತುಕತೆ ನಡೆಸಿದ್ದಾರೆ.
ಇದೀಗ ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಮನೆಗೆ ದಿಢೀರ್ ಭೇಟಿ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ, ಫುಲ್ ಅಲರ್ಟ್ ಆಗಿದೆ. ನಾಳೆಯೇ ಶ್ರೀನಿವಾಸ್ ಪ್ರಸಾದ್ ಭೇಟಿಯಾಗಲು ಬಿಜೆಪಿ ಮುಖಂಡರು ನಿರ್ಧಾರ ಮಾಡಿದ್ದಾರೆ.
ಮೋದಿ ಸಮಾವೇಶಕ್ಕಾಗಿ ಮೈಸೂರಿಗೆ ಬರ್ತಿರುವ ಬಿಜೆಪಿ ನಾಯಕರು ಬಿಎಸ್ವೈ ನೇತೃತ್ವದಲ್ಲಿ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಸಮಾವೇಶಕ್ಕೂ ಮುನ್ನ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಲಿರುವ ಬಿಜೆಪಿ ಲೀಡರ್ಸ್ ಕಾಂಗ್ರೆಸ್ ಬೆಂಬಲಿಸದಂತೆ ಮನವಿ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಮುನಿಸು ಮರೆತು ಒಂದಾದ ಸಿಎಂ ಸಿದ್ದು ಮತ್ತು ಶ್ರೀನಿವಾಸ್ ಪ್ರಸಾದ್ : ಮೈಸೂರು-ಚಾಮರಾಜನಗರ ಗೆಲ್ಲಲು ಭರ್ಜರಿ ತಂತ್ರ..!