Download Our App

Follow us

Home » ಅಪರಾಧ » NIA ಕಸ್ಟಡಿಗೆ ರಾಮೇಶ್ವರಂ ಕೆಫೆ ಬಾಂಬರ್ಸ್​ : ಏಪ್ರಿಲ್​​ 22ರವರೆಗೆ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್ ಆದೇಶ..!

NIA ಕಸ್ಟಡಿಗೆ ರಾಮೇಶ್ವರಂ ಕೆಫೆ ಬಾಂಬರ್ಸ್​ : ಏಪ್ರಿಲ್​​ 22ರವರೆಗೆ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್ ಆದೇಶ..!

ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿ ಪ್ರಮುಖ ಇಬ್ಬರು ಆರೋಪಿಗಳನ್ನು ಕಡೆಗೂ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿಸಿದ ಆರೋಪಿಗಳಾದ ಮುಸಾವಿರ್​​ ಹುಸೇನ್ ಮತ್ತು ಅಬ್ದುಲ್​ ಮತೀನ್​ ತಾಹಮನನ್ನು ಮಿಡ್ನಾಪುರದ ನ್ಯೂ ದಿಗಾ ಪ್ರದೇಶದ ಲಾಡ್ಜ್​ನಲ್ಲಿ ಬಂಧಿಸಿದ NIA ಅಧಿಕಾರಿಗಳು ಮಿಡ್​ನೈಟ್​ನಲ್ಲೇ ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆತಂದು ಇಂದು ಬೆಳಗ್ಗೆ ಕೋರ್ಟ್​ ಮುಂದೆ ಹಾಜರು ಪಡೆಸಿದ್ದಾರೆ.

ಬಾಂಬರ್ಸ್​ಗಳನ್ನು ಮಡಿವಾಳದ FSL ಸೆಂಟರ್​ನಿಂದ ಬಿಗಿ ಭದ್ರತೆಯಲ್ಲಿ ಕೋರಮಂಗಲದ ಜಡ್ಜ್​ ನಿವಾಸಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಎನ್ಐಎ ಅಧಿಕಾರಿಗಳು ಆರೋಪಿಗಳನ್ನು  ಕೋರ್ಟ್​ ಮುಂದೆ ಹಾಜರು ಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಮತ್ತು ಸ್ಥಳ ಮಹಜರು ಮಾಡಲು ಬಾಂಬರ್ಸ್​ಗಳನ್ನು ಎನ್ಐಎ ವಶಕ್ಕೆ ನೀಡುವಂತೆ ಕೇಳಿಕೊಂಡಿತ್ತು.

ಹೀಗಾಗಿ, ರಾಮೇಶ್ವರ ಕೆಫೆ ಬಾಂಬರ್ಸ್​ಗಳನ್ನು 10 ದಿನಗಳ ಕಾಲ ಎನ್​​​ಐಎ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಏಪ್ರಿಲ್​​ 22ರವರೆಗೂ ಮುಸಾವಿರ್​​​​​ ಶಾಜೀಬ್​​​ ಮತ್ತು ಅಬ್ದುಲ್​ ಮತೀನ್​ ತಾಹನನ್ನು ನ್ಯಾಯಾಧೀಶರು NIA ಕಸ್ಟಡಿಗೆ ನೀಡಿದ್ದಾರೆ.

ಇನ್ನು ಮೈಸೂರಿನಲ್ಲಿ ಕೆಫೆ ಬಾಂಬರ್​​ಗಳ ಅರೆಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಎನ್​​ಐಎ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬಂಧಿತರ ವಿಚಾರಣೆ ಮಾಡಿ ಎಲ್ಲವನ್ನೂ ಬಾಯ್​ ಬಿಡಿಸಲಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬೈಕ್​ಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ : ಡಿಕ್ಕಿಯ ರಭಸಕ್ಕೆ ಫ್ಲೈ ಓವರ್​ ಮೇಲಿನಿಂದ ಕೆಳಗೆ ಬಿದ್ದು ಸವಾರ ಸಾ*ವು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here