ತಮಿಳುನಾಡು : ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ.
ಈಗಾಗಲೇ ಕಳೆದ 20 ದಿನದಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ, ಮದ್ಯ, ಚಿನ್ನಾಭರಣ ಸೀಜ್ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ತಮಿಳುನಾಡಿನ ಹೊಸೂರು ಬಳಿಯ ಜೂಜುವಾಡಿನಲ್ಲಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 15 ಕೋಟಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದೆ.
ತಮಿಳುನಾಡಿನ ಹೊಸೂರು ಬಳಿಯ ಜೂಜುವಾಡಿನಲ್ಲಿ ಸೂಕ್ತ ದಾಖಲೆ ಇಲ್ಲದೇ ಚಿನ್ನಾಭರಣ ಸಾಗಿಸಲಾಗುತಿತ್ತು. ಈ ವೇಳೆ ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿಕಾರಿಗಳು ಚೆಕ್ಪೋಸ್ಟ್ನಲ್ಲಿ ತಪಾಸಣೆ ಮಾಡುತ್ತಿದ್ದಾರೆ.
ಈ ಸಂದರ್ಭ 45 ಪೆಟ್ಟಿಗೆಗಳಲ್ಲಿ ಸಾಗಿಸಲಾಗುತ್ತಿದ್ದ ಚಿನ್ನಾಭರಣವನ್ನು ಸೀಜ್ ಮಾಡಿ ಫ್ಲೈಯಿಂಗ್ ಸ್ಕ್ವಾಡ್ ಪರಿಶೀಲನೆ ಮಾಡಿದ್ದಾರೆ. ಅರ್ಧದಷ್ಟು ಚಿನ್ನಾಭರಣಕ್ಕೆ ದಾಖಲೆಗಳೇ ಇಲ್ಲದ ಕಾರಣ ಚುನಾವಣಾಧಿಕಾರಿ ಪ್ರಿಯಾಂಕ ಅವರು ಪೂರ್ತಿ ಚಿನ್ನಾಭರಣವನ್ನು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ : ಆನೇಕಲ್ : ಮೆರವಣಿಗೆ ಹೊತ್ತಲ್ಲೇ ನಿಯಂತ್ರಣ ತಪ್ಪಿ ನೆಲಕ್ಕುರುಳಿದ 120 ಅಡಿ ಎತ್ತರದ ರಥ..!