Download Our App

Follow us

Home » ರಾಜಕೀಯ » ಸಂಧಾನ ಯಶಸ್ವಿ- ಸುಮಲತಾ ಅಂಬರೀಶ್ ಬೆಂಬಲ ಬೆನ್ನಲ್ಲೇ ಹೆಚ್​ಡಿಕೆ ಫುಲ್ ಆ್ಯಕ್ಟೀವ್..!

ಸಂಧಾನ ಯಶಸ್ವಿ- ಸುಮಲತಾ ಅಂಬರೀಶ್ ಬೆಂಬಲ ಬೆನ್ನಲ್ಲೇ ಹೆಚ್​ಡಿಕೆ ಫುಲ್ ಆ್ಯಕ್ಟೀವ್..!

ಬೆಂಗಳೂರು :  ಜೆಡಿಎಸ್​ಗೆ 3 ಕ್ಷೇತ್ರವೆಂದು ಖಚಿತವಾದ ಬಳಿಕ ಮಂಡ್ಯ ಕ್ಷೇತ್ರದ ಟಿಕೆಟ್ ಜೆಡಿಎಸ್‌‌ಗೆ ಫಿಕ್ಸ್ ಆಗಿತ್ತು. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಆದರೆ ಟಿಕೆಟ್ ಸಿಗುತ್ತೆ ಎಂದು ಭರವಸೆ ಹೊಂದಿದ್ದ ಹಾಲಿ ಸಂಸದೆ ಸುಮಲತಾಗೆ ಟಿಕೆಟ್ ಕೈ ತಪ್ಪಿದಕ್ಕೆ ಮುನಿಸಿಕೊಂಡಿದ್ದರು.  

ಈ ಹಿನ್ನಲೆ ಅಸಮಾಧಾನಗೊಂಡಿರುವ ಸುಮಲತಾ ಮನವೋಲಿಕೆಗೆ ನಿನ್ನೆ ಹೆಚ್‌ಡಿ ಕುಮಾರಸ್ವಾಮಿ ಜೆಪಿನಗರದ ನಿವಾಸಕ್ಕೆ ಭೇಟಿ ನೀಡಿ, ಬಂಡಾಯ ಸ್ಪರ್ಧೆ ಬೇಡ‌ ಒಟ್ಟಾಗಿ ಕೆಲಸ ಮಾಡೋಣ.
ಈವರೆಗೆ ಆದ ಕಹಿ ಘಟನೆ ಬಿಡೋಣ, ಮಂಡ್ಯದ ಭವಿಷ್ಯಕ್ಕಾಗಿ ಒಂದಾಗೋಣ ಎಂದು ಸುಮಲತಾ ಅವರ ಮನವೋಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೆ ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಸಹ ಸಹಮತ ಸೂಚಿಸಿದ್ದಾರೆ. ಮಂಡ್ಯದ ಬೆಂಬಲಿಗರು, ಹಿತೈಷಿಗಳ ಹಿತ ಕಾಯೋ ದೃಷ್ಟಿಯಿಂದ ಒಪ್ಪಿಗೆ ಸೂಚಿಸಿದ ಸಂಸದೆ
ಮಂಡ್ಯದಲ್ಲಿ ಜೆಡಿಎಸ್​ಗೆ ಬೆಂಬಲ ನೀಡೋ ಏಪ್ರಿಲ್ 3ಕ್ಕೆ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ‌ಕಾರ್ಯಕರ್ತರ ಅಭಿಪ್ರಾಯ ಪಡೆದು ಮೈತ್ರಿಗೆ ಪೂರಕ ನಿರ್ಧಾರ ಮಾಡಿ
ಮಂಡ್ಯದಲ್ಲೇ ತಮ್ಮ ಅಭಿಪ್ರಾಯ ಪ್ರಕಟಿಸಲಿದ್ದು, ಹೆಚ್.ಡಿಕೆ ನಾಮಪತ್ರ ಸಲ್ಲಿಕೆ ವೇಳೆ ಸುಮಲತಾ ಸಾಥ್ ಕೊಡೋ ಸಾಧ್ಯತೆಯಿದೆ.

ಇನ್ನು ಸುಮಲತಾ ಬೆಂಬಲ ಬೆನ್ನಲ್ಲೇ ಹೆಚ್​ಡಿಕೆ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಮಂಡ್ಯ ಗೆಲುವಿಗೆ ಕಳೆದ ರಾತ್ರಿಯೇ ಹೆಚ್.ಡಿಕೆ ಬರೋಬ್ಬರಿ ಮೂರು ಗಂಟೆ ಕಾಲ ಮೆಗಾ ಮೀಟಿಂಗ್ ಮಾಡಿ ಕಾರ್ಯತಂತ್ರ ಹೂಡಿದ್ದಾರೆ. ಮಂಡ್ಯ ರಣತಂತ್ರ ಕುರಿತು ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆಸಿದ ಹೆಚ್​ಡಿಕೆ ಮಂಡ್ಯದಲ್ಲಿ ಹೇಗೆಲ್ಲಾ ಕಾರ್ಯತಂತ್ರ ರೂಪಿಸಬೇಕು..?
ಬಿಜೆಪಿ-ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸುವುದೇಗೆ..? ಕ್ಷೇತ್ರ ಗೆಲ್ಲುವ ರಣತಂತ್ರದ ಬಗ್ಗೆ ಚರ್ಚೆ ಮಾಡಿದ್ದಾರೆ.

ಈ ಸಭೆಯಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಡಾ.ಕೆ.ಸಿ.ನಾರಾಯಣಗೌಡ, ರಾಜ್ಯಸಭೆ ಸದಸ್ಯ ಜಗ್ಗೇಶ್, ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ, ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಇಂದ್ರೇಶ್ ಕುಮಾರ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ ಭಾಗಿಯಾಗಿದ್ದರು.

ಇದನ್ನೂ ಓದಿ : ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ನ ಸ್ಟಾರ್ ಪ್ರಚಾರಕರ ಲಿಸ್ಟ್ ಬಿಡುಗಡೆ – ಲಿಸ್ಟ್​ನಲ್ಲಿ ಯಾರ್ಯಾರಿದ್ದಾರೆ ಗೊತ್ತಾ? 

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here