Download Our App

Follow us

Home » ರಾಷ್ಟ್ರೀಯ » ಟೈಟಾನಿಕ್​​ ಹೀರೋಯಿನ್​​ ಜೀವ ಉಳಿಸಿದ ಡೋರ್​ ಎಷ್ಟು ಕೋಟಿಗೆ ಹರಾಜಾಯ್ತು ಗೊತ್ತಾ?

ಟೈಟಾನಿಕ್​​ ಹೀರೋಯಿನ್​​ ಜೀವ ಉಳಿಸಿದ ಡೋರ್​ ಎಷ್ಟು ಕೋಟಿಗೆ ಹರಾಜಾಯ್ತು ಗೊತ್ತಾ?

“ಟೈಟಾನಿಕ್” ಈ ಹೆಸ್ರು ಕೇಳಿದ್ರೆ ಹೇ ಟೈಟಾನಿಕ್ ಮೂವಿ ಬಗ್ಗೆ ತಾನೆ ಮಾತಾಡ್ತಿರೋದು ಅಂತ ಎಲ್ರು ಹೇಳ್ತಾರೆ. ಸಿನಿಮಾ ರುಚಿ ಗೊತ್ತಿದ್ದವರು ಈ ಹಾಲಿವುಡ್​ ಸಿನಿಮಾವನ್ನ ಒಮ್ಮೆಯಾದ್ರು ನೋಡಿರ್ತಾರೆ. ಟೈಟಾನಿಕ್ ಚಿತ್ರವನ್ನ ಈಗ್ಲು ಕಣ್​ ಮಿಟಿಕಿಸದೇ ನೋಡೋ ಅದೆಷ್ಟೋ ಪ್ರೇಕ್ಷಕರಿದ್ದಾರೆ. ಅಂತಹ ಮೋಡಿ ಮಾಡಿರೋ ಟೈಟಾನಿಕ್​​ ಚಿತ್ರಕ್ಕೆ ಜೀವ ತುಂಬಿದ್ದು ಹೀರೋಯಿನ್ ಕೇಟ್ ವಿನ್ಸ್ ಲೆಟ್.

ಹೌದು, ಹಾಲಿವುಡ್​​ನ ಎವರ್​​​​​​​​​​​​​​​​ಗ್ರೀನ್ ಸಿನಿಮಾ ಟೈಟಾನಿಕ್ 26 ವರ್ಷಗಳಿಂದ ಪ್ರೇಕ್ಷಕರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ. ಅನೇಕ ಕಾರಣಗಳಿಂದ ಈ ಸಿನಿಮಾ ಸ್ಮರಣೀಯವಾಗಿ ಉಳಿದುಕೊಂಡಿದೆ. ಜೇಮ್ಸ್ ಕ್ಯಾಮರೂನ್ ಅವರ ಈ ಸಿನಿಮಾ ಮತ್ತು ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಕೇಟ್ ವಿನ್ಸ್ ಲೆಟ್ ಅವರ ಅಭಿನಯವನ್ನು ಜನ ಇಂದಿಗೂ ಹೊಗಳುತ್ತಾರೆ.

ಟೈಟಾನಿಕ್ ಸಿನಿಮಾ ನಿಜಕ್ಕೂ ಅತ್ಯದ್ಭುತ ಚಿತ್ರ. ಮತ್ತೆ ಮತ್ತೆ ನೋಡಬೇಕೆ ಅಂತ ಅನಿಸುತ್ತದೆ. ಜೇಮ್ಸ್ ಕ್ಯಾಮರೂನ್ ಆ ಒಂದು ಸೆಳೆತವನ್ನು ಈ ಚಿತ್ರದಲ್ಲಿ ಇಟ್ಟಿದ್ದಾರೆ. ಹಾಲಿವುಡ್​ನ ಟೈಟಾನಿಕ್ ಸಿನಿಮಾ ದುರಂತ ಅಂತ್ಯದ ಚಿತ್ರ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಇದರ ಮೋಡಿ ಮಾತ್ರ ಇನ್ನೂ ಇದೆ. ಟೈಟಾನಿಕ್ ಮುಳುಗಿದ ಅಸಲಿ ಕಥೆಯನ್ನೆ ಡೈರೆಕ್ಟರ್ ಜೇಮ್ಸ್ ಕಾಮರೂನ್ ಬೆಳ್ಳಿ ತೆರೆ ಮೇಲೆ ತಂದಿದ್ದರು. ಈ ಚಿತ್ರದಲ್ಲಿ ಒಂದು ಅದ್ಭುತ ಲವ್ ಸ್ಟೋರಿಯನ್ನು ಇಟ್ಟಿದ್ದರು. ಎಲ್ಲಾರು ಮೆಚ್ಚಿ ಕೊಂಡಾಡಿದ್ರು.

ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದ ದುರಂತ ಅಂತ್ಯ ಪ್ರೇಕ್ಷಕನನ್ನು ಭಾವುಕವಾಗಿಸುತ್ತದೆ. ಇದರಲ್ಲಿ ರೋಸ್​ನ ಜೀವ ಉಳಿಸುವ ಡೋರ್ ಸೀನ್ ನಿಮಗೆ ನೆನಪಿದೆಯಾ? ಈ ಡೋರ್​ನಿಂದಾಗಿಯೇ ರೋಸ್ ಬದುಕಿ ಉಳಿಯಲು ಸಾಧ್ಯವಾಗುತ್ತದೆ. ಆ ಸೀನ್ ಸಿನಿಮಾ ನೋಡಿದ ಯಾರೂ ಮರೆಯಲಾರರು. ಅಂಥಹ ದೃಶ್ಯ ಒಂದು ಡೋರ್​​ನಲ್ಲಿಯೇ ಅಡಗಿತ್ತು.

ದಿ ಹಾಲಿವುಡ್ ರಿಪೋರ್ಟರ್ ವರದಿ ಮಾಡಿದಂತೆ ಹೀರೋ ಜ್ಯಾಕ್‌ನ ದುರಂತ ಮರಣದ ಸಂಕೇತವಾದ ಈ ಒಂದು ಡೋರ್ ಇತ್ತೀಚೆಗೆ ಹರಾಜಿನಲ್ಲಿ $718,750 ಗೆ ಅಂದರೆ ಸುಮಾರು 6 ಕೋಟಿಗಳಿಗೆ ಮಾರಾಟವಾಯಿತು. ಅಭಿಮಾನಿಗಳು ಇದು ಮರದ ಬೋರ್ಡ್ ಎಂದು ಭಾವಿಸಿದರೆ, ಹೆರಿಟೇಜ್ ಆಕ್ಷನ್ಸ್ ಟ್ರೆಶರ್ಸ್ ಇದು ವಾಸ್ತವವಾಗಿ ಇದು ಹಡಗಿನ ಫಸ್ಟ್ ಕ್ಲಾಸ್ ರೂಮ್​​ನ ಪ್ರವೇಶದ್ವಾರದ ಮೇಲಿರುವ ಬಾಗಿಲಿನ ಚೌಕಟ್ಟಿನ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದೆ.

ಜೇಮ್ಸ್ ಕ್ಯಾಮರೂನ್ ಈ ಸಿನಿಮಾವನ್ನ 19 ಡಿಸೆಂಬರ್ 1997 ರಂದು ರಿಲೀಸ್​ ಮಾಡಿದ್ರು. ಇದ್ರಲ್ಲಿ ಪ್ರಣಯ ಮತ್ತು ದುರಂತ ಕಥೆ. ಇದು ಆ ಸಮಯದಲ್ಲಿ ತಯಾರಾದ ಅತ್ಯಂತ ದುಬಾರಿ ಹಾಗೂ ಬಿಗ್​ ಬಜೆಟ್​ ಸಿನಿಮಾವಾಗಿತ್ತು. ಟಾಪ್ 3 ಸಿನಿಮಾಗಳಲ್ಲಿ ಇಂದಿಗೂ ಯಾವುದೇ ಸಿನಿಮಾ ಇದನ್ನು ಬೀಟ್ ಮಾಡಲು ಸಾಧ್ಯವಾಗಿಲ್ಲ. ಈ ಚಿತ್ರವು RMS ಟೈಟಾನಿಕ್ ಮುಳುಗುವ ಘಟನೆಯನ್ನು ಆಧರಿಸಿದೆ. ಜೇಮ್ಸ್ ಈ ಭಾವನಾತ್ಮಕ ಕಥೆಯನ್ನು ವಿಭಿನ್ನ ರೀತಿಯಲ್ಲಿ ತೋರಿಸಿದ್ರು. ದುರಂತದ ಜೊತೆ ಪ್ರೀತಿಯ ಆ್ಯಂಗಲ್ ಕೊಟ್ಟು ಪ್ರೇಕ್ಷಕರನ್ನ ರಂಜಿಸಿದ್ರು.

ಕ್ಯಾಮೆರೂನ್ ತನ್ನ ಚಿತ್ರದಲ್ಲಿ ಎಲ್ಲವೂ ನೈಜ್ಯವಾಗಿರಬೇಕು ಅನ್ನೋ ಕಾರಣಕ್ಕಾಗಿ, ಚಿತ್ರದಲ್ಲಿ ಬಳಸಲಾದ ‘ಟೈಟಾನಿಕ್’ ಹಡಗಿನ ಅನೇಕ ವಸ್ತುಗಳನ್ನು ಮೂಲ ಟೈಟಾನಿಕ್‌ಗಾಗಿ ತಯಾರಿಸಿದ ಅದೇ ಕುಶಲಕರ್ಮಿಗಳು ತಯಾರಿಸಿದ್ದಾರೆ. ಸಿನಿಮಾ ತೆರೆಗೆ ಬಂದ ಮೇಲೆ ಇದು ಹಲವು ದಾಖಲೆಗಳನ್ನು ಮಾಡಿತು. ಈ ಚಿತ್ರವು 11 ಆಸ್ಕರ್ ಪ್ರಶಸ್ತಿಗಳೊಂದಿಗೆ ಇತರ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ಒಟ್ಟಾರೆಯಾಗಿ ಟೈಟಾನಿಕ್​ ಸಿನಿಮಾ ಅಂದಿನಿಂದ ಇಂದಿನವರೆಗೂ ನೋಡುಗರಿಗೆ ಕಿಕ್​​ ಕೊಡ್ತಿದೆ.

ಇದನ್ನೂ ಓದಿ : ತುಮಕೂರಿನಲ್ಲಿ ತಪ್ಪಿದ ಭಾರೀ ರೈಲು ದುರಂತ – ಸಾವಿರಾರು ಜನರ ಜೀವ ಉಳಿಸಿದ ಲೋಕೋ ಪೈಲೆಟ್​ ಸಮಯ ಪ್ರಜ್ಞೆ..!

Leave a Comment

DG Ad

RELATED LATEST NEWS

Top Headlines

ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ – ಅಪರಿಚಿತ ಟ್ರಕ್ ಚಾಲಕನ ವಿರುದ್ದ ಹಿಟ್ & ರನ್ ಕೇಸ್ ದಾಖಲು!

ಬೆಂಗಳೂರು : ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳುತ್ತಿದ್ದ ಕಾರು ನಿನ್ನೆ ಅಪಘಾತಕ್ಕೀಡಾಗಿದ್ದು, ಸದ್ಯ ಸಚಿವೆ

Live Cricket

Add Your Heading Text Here