ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಬಂಧನದಲ್ಲಿದ್ದ ನಟ ದರ್ಶನ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬೆನ್ನು ನೋವಿನ ಹಿನ್ನೆಲೆಯಲ್ಲಿ ರಿಲೀಸ್ ಆದ ದರ್ಶನ್ ಎರಡು ದಿನ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು. ಇದೀಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಂಗೇರಿ ಬಳಿಯ BGS ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ದರ್ಶನ್ ಅವರಿಗೆ ಚಿಕಿತ್ಸೆ ಆರಂಭಿಸಿದೆ.
ಆಸ್ಪತ್ರೆ ಸೇರಿರೋ ದರ್ಶನ್ ಭೇಟಿಗೆ ಏಳು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಏಳು ಜನ ಬಿಟ್ಟು ಬೇರೆಯವರಿಗೆ ಆಸ್ಪತ್ರೆಗೆ ಎಂಟ್ರಿ ಇಲ್ಲ. ಏಳು ಜನರ ಹೆಸರನ್ನ ಎಂಟ್ರಿ ಮಾಡಿ ಅವರನ್ನ ಮಾತ್ರ ಬಿಡುವಂತೆ ಸೂಚನೆ ನೀಡಲಾಗಿದೆ. ದರ್ಶನ್ ಇರುವ ಸ್ಪೆಷಲ್ ಸೂಟ್ಗೆ ಏಳು ಮಂದಿ ಮಾತ್ರ ಎಂಟ್ರಿ ನೀಡಲು ಅವಕಾಶ ನೀಡಿದ್ದು, ಆ ಏಳು ಜನರೇ ದರ್ಶನ್ ಕೇರ್ ಟೇಕರ್ ಆಗಲಿದ್ದಾರೆ.
ಆ 7 ಜನ ಯಾರು ಗೊತ್ತಾ? ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ, ತಾಯಿ ಮೀನಾ ತೂಗುದೀಪ, ಸಹೋದರಿ ದಿವ್ಯಾ, ಅಕ್ಕನ ಮಗ ಚಂದನ್, ದರ್ಶನ್ ಆಪ್ತ ಧನ್ವೀರ್ ಹಾಗೂ ದರ್ಶನ್ ಫ್ಯಾಮಿಲಿ ಮೆಂಬರ್ ಸುಶಾಂತ್ಗೆ ಅವಕಾಶ ಮಾಡಿಕೊಡಲಾಗಿದೆ. ಈ 7 ಮಂದಿ ಆಸ್ಪತ್ರೆಯಲ್ಲಿ ದರ್ಶನ್ರನ್ನ ಭೇಟಿ ಮಾಡಬಹುದಾಗಿದೆ. ಇನ್ನು ವಕೀಲರಿಗೆ ಕಾನೂನು ಅಡಿಯಲ್ಲಿ ದರ್ಶನ್ ಭೇಟಿಗೆ ಅವಕಾಶ ಇರುತ್ತೆ.
ಇನ್ನು ದರ್ಶನ್ಗೆ ಫಿಸಿಯೋಥೆರಪಿ ಮುಂದುವರೆಸಿರುವ ವೈದ್ಯರು ಇಂದು ಸಂಜೆ ಆಥವಾ ನಾಳೆ ರಿಪೋರ್ಟ್ ಪಡೆಯಲಿದ್ದಾರೆ. ವರದಿಗಳು ಬಂದ ಮೇಲೆ ಶಸ್ತ್ರಚಿಕಿತ್ಸೆನಾ ಅಥವಾ ಪಿಸಿಯೋಥೆರಪಿ ಮೂಲಕ ಟ್ರೀಟ್ಮೆಂಟ್ ಮುಂದುವರೆಸಬಹುದಾ ಅಂತಾ ತೀರ್ಮಾನ ಮಾಡಲಿದ್ದಾರೆ. ವರದಿಗಳು ಬರುವ ತನಕ ಆಸ್ಪತ್ರೆಯಲ್ಲಿ ದರ್ಶನ್ಗೆ ಚಿಕಿತ್ಸೆ ಮುಂದುವರಿಯಲಿದ್ದು, ಆಸ್ಪತ್ರೆ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ಇದನ್ನೂ ಓದಿ : ಕಸವನಹಳ್ಳಿ ರೋಡ್ ರೇಜ್ ಪ್ರಕರಣ – ಇಬ್ಬರು ಆರೋಪಿಗಳ ಬಂಧನ..!