ಬೆಂಗಳೂರು : ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿದ್ದ ನಟ ದರ್ಶನ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬೆನ್ನು ನೋವಿನ ಹಿನ್ನೆಲೆಯಲ್ಲಿ ರಿಲೀಸ್ ಆದ ದರ್ಶನ್ ಎರಡು ದಿನ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು. ಇದೀಗ ನೋವು ವಿಪರೀತ ಕಾಡಿದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಂಗೇರಿ ಬಳಿಯ BGS ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ದರ್ಶನ್ ಅವರಿಗೆ ಚಿಕಿತ್ಸೆ ಆರಂಭಿಸಿದೆ.
ಸದ್ಯದ ಮಾಹಿತಿ ಪ್ರಕಾರ ಆಸ್ಪತ್ರೆ ಸೇರಿರೋ ದರ್ಶನ್ ಭೇಟಿಗೆ ಏಳು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಏಳು ಜನ ಬಿಟ್ಟು ಬೇರೆಯವರಿಗೆ ಆಸ್ಪತ್ರೆಗೆ ಎಂಟ್ರಿ ಇಲ್ಲ ಎಂದು ಹೇಳಲಾಗುತ್ತಿದೆ. ಏಳು ಜನರ ಹೆಸರನ್ನ ಎಂಟ್ರಿ ಮಾಡಿ ಅವರನ್ನ ಮಾತ್ರ ಬಿಡುವಂತೆ ಸೂಚನೆ ನೀಡಲಾಗಿದೆ. ದರ್ಶನ್ ಇರುವ ಸ್ಪೆಷಲ್ ಸೂಟ್ಗೆ ಏಳು ಮಂದಿ ಮಾತ್ರ ಎಂಟ್ರಿ ನೀಡಲು ಅವಕಾಶ ನೀಡಿದ್ದು, ಆ ಏಳು ಜನರೇ ದರ್ಶನ್ ಕೇರ್ ಟೇಕರ್ ಆಗಲಿದ್ದಾರೆ. ನಿನ್ನೆ ಸಂಜೆ ದರ್ಶನ್ ಆಡ್ಮಿಟ್ ಆದ ಬಳಿಕ ಪತ್ನಿ ವಿಜಯಲಕ್ಷ್ಮಿ ಮನೆಗೆ ತೆರಳಿದ್ದಾರೆ. ಇಂದು ಪುನಃ ಆಸ್ಪತ್ರೆಗೆ ಆಗಮಿಸೋ ಸಾಧ್ಯತೆಯಿದೆ.
ಇನ್ನು ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ನಡೆಯುತ್ತಿದ್ದು, ನಾಲ್ಕನೇ ಮಹಡಿಯ ವಿಐಪಿ ಸೂಟ್ನಲ್ಲಿ ನಟ ದರ್ಶನ್ ದಾಖಲಾಗಿದ್ದಾರೆ. ಇಂದು ಕೂಡ ಕೆಲವು ವೈದ್ಯಕೀಯ ಪರೀಕ್ಷೆಗಳನ್ನ ನಡೆಸಲಿರೋ ವೈದ್ಯರು, ಬೆನ್ನುನೋವು ಸಂಬಂಧ ಪರೀಕ್ಷೆ ನಡೆಸಲಿದ್ದಾರೆ. ನಾಳೆ ದರ್ಶನ್ ಟೆಸ್ಟ್ ರಿಪೋರ್ಟ್ಸ್ ವೈದ್ಯರ ಕೈಸೇರಲಿದೆ ಎನ್ನಲಾಗಿದೆ. ರಿಪೋರ್ಟ್ಸ್ ಪರಿಶೀಲನೆ ನಡೆಸಿ ಬಳಿಕ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ. ಡಾ. ನವೀನ್ ಗೌಡ ನೇತೃತ್ವದಲ್ಲಿ ದರ್ಶನ್ ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಮತ್ತೆ ರೂಟಿನ್ ಚೆಕಪ್ ಮಾಡಲಿದ್ದಾರೆ.
ದರ್ಶನ್ ಗೆ ಫಿಸಿಯೋಥೆರಪಿ ಮುಂದುವರೆಸಿರುವ ವೈದ್ಯರು ಇಂದು ಸಂಜೆ ಆಥವಾ ನಾಳೆ ರಿಪೋರ್ಟ್ ಪಡೆಯಲಿದ್ದಾರೆ. ವರದಿಗಳು ಬಂದ ಮೇಲೆ ಶಸ್ತ್ರಚಿಕಿತ್ಸೆನಾ ಅಥವಾ ಪಿಸಿಯೋಥೆರಪಿ ಮೂಲಕ ಟ್ರೀಟ್ಮೆಂಟ್ ಮುಂದುವರೆಸಬಹುದಾ ಅಂತಾ ತೀರ್ಮಾನ ಮಾಡಲಿದ್ದಾರೆ. ವರದಿಗಳು ಬರುವ ತನಕ ಆಸ್ಪತ್ರೆಯಲ್ಲಿ ದರ್ಶನ್‌ಗೆ ಚಿಕಿತ್ಸೆ ಮುಂದುವರಿಯಲಿದ್ದು, ಆಸ್ಪತ್ರೆ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ಇದನ್ನೂ ಓದಿ : ಆಸ್ಪತ್ರೆ ಸೇರಿದ ದಾಸನಿಗೆ ಟ್ರೀಟ್ಮೆಂಟ್ ಸ್ಟಾರ್ಟ್.. ದರ್ಶನ್‌ಗೆ ನಿಜಕ್ಕೂ ಏನಾಗಿದೆ? ವೈದ್ಯರು ಕೊಟ್ರು ಮಹತ್ವದ ಮಾಹಿತಿ..!