ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನದ ಪಾದಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಡಿಸಿಎಂ ಡಿಕೆಶಿ ವಿರುದ್ದ ಗುಡುಗಿದ ಹೆಚ್ಡಿಕೆ ಅವರು, ನನಗೆ ಪ್ರಶ್ನೆ ಮಾಡೋ ನೈತಿಕತೆ ನಿಮಗೆ ಇದ್ಯಾ ಶಿವಕುಮಾರ್? ಯಾವ ನೈತಿಕತೆಯಿಂದ ನೀವು ನನಗೆ ಪ್ರಶ್ನೆ ಮಾಡ್ತಾ ಇದ್ದೀರಿ?
ನನಗೂ ಏಕವಚನದಲ್ಲಿ ಮಾತನಾಡಲು ಬರುತ್ತೆ. ಆದ್ರೆ, ನಿಮ್ಮ ಹಾಗೇ ನಾನು ಸಣ್ಣತನಕ್ಕೆ ಇಳಿಯೋದಿಲ್ಲ ಎಂದು ಡಿಸಿಎಂ ಡಿಕೆಶಿ ಪ್ರಶ್ನೆಗಳಿಗೆ ಹೆಚ್ಡಿಕೆ ಖಡಕ್ ಆನ್ಸರ್ ಕೊಟ್ಟಿದ್ದಾರೆ.
ನಾನು ಸಿನಿಮಾದಲ್ಲಿ ಸಂಪಾದಿಸಿದ ಹಣದಿಂದ ಆಸ್ತಿ ಖರೀದಿಸಿದ್ದೇನೆ. ಆಗ ನಾನು 45 ಎಕರೆ ಜಮೀನು ಸಂಪಾದನೆ ಮಾಡಿದ್ದೇನೆ. SC-STಗೆ ಸೇರಬೇಕಾದ 68 ಎಕರೆ ಜಮೀನು ನೀವು ಲಪಟಾಯಿಸಿದ್ದೀರಾ. SC-STಗೆ ಸೇರಬೇಕಾದ ನಿವೇಶನಗಳನ್ನು ಲೂಟಿ ಮಾಡಿದ್ದೀರಾ ಎಂದಿದ್ದಾರೆ.
ಇನ್ನು ನಿಮ್ಮ ಬಳಿ ನಾನು ಹೇಳಿಸಿಕೊಳ್ಳುವ ಯಾವ ಅವಶ್ಯಕತೆ ಇಲ್ಲ. ಯಾರಿಗೂ ಮೋಸ, ವಂಚನೆ ಮಾಡಿ ಭೂಮಿ ಖರೀದಿಸಿಲ್ಲ. ಹಾಗೇ ಭೂಮಿ ಖರೀದಿಸಿದ್ದಿದ್ರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಪಾದಯಾತ್ರೆಯಲ್ಲಿ ಡಿಸಿಎಂ ಡಿಕೆಶಿ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಡಿಸಿಎಂ ಡಿಕೆಶಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ ಹೆಚ್ಡಿಕೆ ಅವರು, ಪ್ರಾಮಾಣಿಕವಾಗಿ ಆಸ್ತಿ ಮಾಡಿದ್ದರೆ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ. ಅಜ್ಜಯ್ಯನ ಬಗ್ಗೆ ಗೌರವ ಇದ್ದರೆ ನೀವು ಪ್ರಾಮಾಣಿಕವಾಗಿ ಬೆಳೆದು ಬಂದಿದ್ದೀರಾ ಎಂದು ಪ್ರಮಾಣ ಮಾಡಿ. ಇನ್ನು ಡಿಕೆಶಿಗೆ ಅಜ್ಜಯ್ಯನ ಶಾಪವೂ ಕೂಡಾ ಆರಂಭವಾಗಿದೆ ಎಂದು ಮೈತ್ರಿ ಪಡೆ ಪಾದಯಾತ್ರೆಯಲ್ಲಿ ಡಿಕೆಶಿಗೆ ಹೆಚ್ಡಿಕೆ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಪ್ರತಿಷ್ಠಿತ ವಿಬಿ ಬೇಕರಿ ಮೇಲೆ ವಂಚನೆ ಆರೋಪ – 7 ಲಕ್ಷ ಹಣ ಬಾಕಿ ಉಳಿಸಿಕೊಂಡು ಆಟ ಆಡ್ತಿರೊ ಮಾಲೀಕ..!